ಆತೂರುಬೈಲ್ ಮದ್ರಸದ ಸ್ಥಾಪಕ ಅಧ್ಯಕ್ಷ ಮಹಮ್ಮದ್ ಹಾಜಿ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊಲ ಗ್ರಾಮದ ಆತೂರುಬೈಲ್ ನಿವಾಸಿ ಎ.ಹೆಚ್. ಮಹಮ್ಮದ್ ಹಾಜಿ (86 ವ.) ನ. 1ರಂದು ರಾತ್ರಿ ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮಹಮ್ಮದ್ ಹಾಜಿಯವರು ಆತೂರುಬೈಲ್ ಕಮರುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷರಾಗಿದ್ದು, ಇದರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಸರಳ ವ್ಯಕ್ತಿತ್ವದ ಮಹಮ್ಮದ್ ಹಾಜಿಯವರು ಅಪಾರ ದೈವಭಕ್ತರಾಗಿದ್ದು, ಮಸೀದಿ, ಮದ್ರಸ ನಿರ್ಮಾಣ ಕೆಲಸಗಳಿಗೆ ಸಹಾಯಹಸ್ತ ನೀಡುವ ಮೂಲಕ ಚಿರಪರಿಚಿತರಾಗಿದ್ದರು.

ಮೂಲತಃ ಕಾಸರಗೋಡು ಆವಳದವರಾಗಿದ್ದು, ಪಿಡಬ್ಯುಡಿ. ಗುತ್ತಿಗೆದಾರರಾಗಿದ್ದ ಇವರು ಹಾಸನ, ಸಕಲೇಶಪುರ ಭಾಗದಲ್ಲಿ ನೂರಾರು ಕಾಮಗಾರಿಗಳನ್ನು ನಿರ್ವಹಿಸಿದ್ದ ಇವರು ಕಳೆದ ಕೆಲ ವರ್ಷಗಳಿಂದ ನಿವೃತ್ತಿ ಜೀವನ ನಡೆಸುತ್ತಿದ್ದರು.

ಮೃತ ಮಹಮ್ಮದ್ ಹಾಜಿಯವರು ಪುತ್ರರಾದ ಹಸೈನಾರ್ ಹಾಜಿ, ಅಬ್ದುಲ್ ಖಾದರ್, ಖಲೀಲ್, ಜಮಾಲು ಪುತ್ರಿಯರಾದ ಖತೀಜ, ಜೊಹರಾರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.