ರಾಷ್ಟ್ರಿಯ ವೈದ್ಯಕೀಯ ಪ್ರವೇಶ ಪರೀಕ್ಷೆ-ನೀಟ್ 2021- ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿಗೆ ದ್ವಿತೀಯ ರ್‍ಯಾಂಕ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ ೨೦೨೧ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರ್‍ಯಾಂಕ್ ಗಳಿಸುವುದರ ಮೂಲಕ ಜಿಲ್ಲೆಯಲ್ಲೇ ಅಮೋಘ ಸಾಧನೆಗೈದ ವಿದ್ಯಾರ್ಥಿನಿಯಾಗಿದ್ದಾಳೆ.

ಸಿಂಚನಲಕ್ಷ್ಮೀ

ಈಕೆ ನೀಟ್ ಪರೀಕ್ಷೆಯಲ್ಲಿ ೭೨೦ ಅಂಕಗಳಲ್ಲಿ ೬೫೮ ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ ೨೮೫೬ ನೇ ರ್‍ಯಾಂಕ್, ಕೆಟಗರಿ ವಿಭಾಗದಲ್ಲಿ ೧೬೧೧ ನೇ ರ್‍ಯಾಂಕ್, ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ಎರಡನೇ ರ್‍ಯಾಂಕ್ ಗಳಿಸಿರುತ್ತಾರೆ. ಕೃಷಿ ಕುಟುಂಬದಿಂದ ಬಂದಿರುವ ಸಿಂಚನಾಲಕ್ಷ್ಮಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ಈಗ ನೀಟ್ ಪರೀಕ್ಷೆಯಲ್ಲೂ ತನ್ನ ಸಾಮಥ್ಯವನ್ನು ತೋರಿಸಿದ್ದಾರೆ. ಈ ಮೂಲಕ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದಕೀಯ ಶಿಕ್ಷಣ ಪಡೆಯಲು ಅವಕಾಶ ಹೊಂದಿದ್ದಾರೆ. ಈಕೆ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ೯೬.೧೬ ಪಸಂಟೈಲ್ ಅಂಕ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ ೫೩೦ ನೇ ರ್‍ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ ೧೫೮೨ನೇ ರ್‍ಯಾಂಕ್, ಬಿಎನ್‌ವೈಎಸ್‌ನಲ್ಲಿ ೯೭೪ನೇ ರ್‍ಯಾಂಕ್ ಗಳಿಸಿದ್ದಳು. ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೂರೈಸಿರುವ ಸಿಂಚನಾಲಕ್ಷ್ಮಿ ಪುತ್ತೂರಿನ ಬಂಗಾರಡ್ಕದ ಮುರಳೀಧರ ಭಟ್ ಮತ್ತು ಶೋಭಾ ಬಿ ದಂಪತಿಗಳ ಪುತ್ರಿ.

ಖುಷಿ ಎಮ್‌ ಆರ್
ದೀಪಾ
ಅಭಿರಾಮ್‌ ಯು

ಹಾಗೆಯೇ ನೀಟ್ ಪರೀಕ್ಷೆಯಲ್ಲಿ ೭೨೦ ಅಂಕಗಳಲ್ಲಿ ೪೩೦ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ ಖುಷಿ ಎಂ. ಆರ್ (ಅಖಿಲ ಭಾರತ ಮಟ್ಟದಲ್ಲಿ ೫೯೮೯೭೩ ನೇ ರ್‍ಯಾಂಕ್, ಕೆಟಗರಿ ವಿಭಾಗದಲ್ಲಿ ೬೬೧೦೨ ನೇ ರ್‍ಯಾಂಕ್), ದೀಪಾ-೪೧೧ ಅಂಕಗಳು(ಅಖಿಲ ಭಾರತ ಮಟ್ಟದಲ್ಲಿ ೧೭೮೪೫೬ ನೇ ರ್‍ಯಾಂಕ್, ಕೆಟಗರಿ ವಿಭಾಗದಲ್ಲಿ ೭೮೩೬೦ ನೇ ರ್‍ಯಾಂಕ್), ೪೦೦ ಅಂಕಗಳನ್ನು ಗಳಿಸಿದ ಅಭಿರಾಮ್ ಯು(ಅಖಿಲ ಭಾರತ ಮಟ್ಟದಲ್ಲಿ ೧೯೨೯೮೪ನೇ ರ್‍ಯಾಂಕ್, ಕೆಟಗರಿ ವಿಭಾಗದಲ್ಲಿ ೨೬೭೪೪ ನೇ ರ್‍ಯಾಂಕ್)ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.