ಸಚಿವ ಎಸ್.ಅಂಗಾರರವರಿಂದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಕಾಮಗಾರಿ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ : ರೂ.75 ಲಕ್ಷ ವೆಚ್ಚದಲ್ಲಿ ಪುನ‌ರ್ ನಿರ್ಮಾಣಗೊಳ್ಳುತ್ತಿರುವ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಕಾಮಗಾರಿಯನ್ನು ಸಚಿವ ಎಸ್.ಅಂಗಾರರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮತನಾಡಿದ ಅವರು ಜಾತಿ ಮತ ಭೇದವಿಲ್ಲದೆ ಭಗವಂತನನ್ನು ಭಜಿಸುವ ಕ್ಷೇತ್ರವೇ ಭಜನಾ ಮಂದಿರಗಳು. ದೇವಸ್ಥಾನ ಇಲ್ಲದ ಈ ಗ್ರಾಮದಲ್ಲಿ ಶ್ರೀಕೃಷ್ಣ ಭಜನಾ ಮಂದಿರ ಪುನರ್ ನಿರ್ಮಾಣಗೊಳ್ಳುವುದು ಸಂತಸ ತಂದಿದೆ. ಈ ಮಂದಿರಕ್ಕೆ ಸರಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಕೊಡಲು ಸಿದ್ಧ. ಅತೀ ಶೀಘ್ರದಲ್ಲಿ ಮಂದಿರ ಲೋಕಾರ್ಪಣೆಗೊಳ್ಳಲಿ ಎಂದು ಹಾರೈಸಿದರು. ಭಜನಾ ಮಂದಿರದ ವತಿಯಿಂದ ಸಚಿವರನ್ನು ಶಾಲು ಹಾಕಿ ಗೌರವಿಸಲಾಯಿತು.

ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ ಮದ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಕಾರ್ಯದರ್ಶಿ ಲೋಕೇಶ್ ರೈ ಅಮೈ, ಭಜನಾ ಸಂಕೀರ್ಣ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಕುತ್ಯಾಡಿ, ಜೀರ್ಣೋದ್ಧಾರ ಸಮಿತಿ, ಭಜನಾ ಮಂಡಳಿ ಸಮಿತಿ, ಭಜನಾ ಸಂಕೀರ್ತನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.