ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆವರಣ ಗೋಡೆ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

        ರಸ್ತೆ ಅಭಿವೃದ್ಧಿಗೆ ರೂ 3 ಕೋಟಿ ಅನುದಾನ ಮಂಜೂರು – ಎಸ್ ಅಂಗಾರ

                     

                                                                                                                                                                                 

ಕಾಣಿಯೂರು: ಕ್ಷೇತ್ರಕ್ಕೆ ಅನುದಾನ ನೀಡಿ ಆಬಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದ್ದು, ದೇವಸ್ಥಾನದ ಸಂಪರ್ಕ ರಸ್ತೆಯಾದ ಬೈತಡ್ಕ- ಗುಜ್ಜರ್ಮೆ ರಸ್ತೆ ಅಭಿವೃದ್ಧಿಗೆ ರೂ 3ಕೋಟಿ ಅನುದಾನ ಮಂಜೂರುಗೊಳಿಸಲಾಗಿದೆ. ಶ್ರೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲ್ಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರ ಸಹಕಾರ ಅತ್ಯವಶ್ಯಕ ಎಂದು ರಾಜ್ಯ ಸರಕಾರದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಎಸ್. ಅಂಗಾರ ಹೇಳಿದರು. ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ರೂ 5 ಲಕ್ಷ ಅನುದಾನದಲ್ಲಿ ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆವರಣ ಗೋಡೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಕೋರೋನಾ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನವನ್ನು ಸರಕಾರದ ಕಡೆಯಿಂದ ಮಾಡಲಾಗಿದೆ. ಸರಕಾರದ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಕೋರೋನಾ ವೈರಸ್ ನಿರ್ಮೂಲನೆಗೆ ಜನತೆ ಸಹಕರಿಸಬೇಕು ಎಂದರು.


ನಾವು ಮಾಡುವ ಉತ್ತಮ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ದೇವರ ಅನುಗ್ರಹವು ಸಿಗುತ್ತದೆ. ದೇವರ ಅನುಗ್ರಹದಿಂದ ಮಂತ್ರಿಯಾಗುವ ಯೋಗವು ನನಗೆ ದೊರೆತಿದೆ ಎಂದು ಸಚಿವರು ಹೇಳಿದರು. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಮಾಚಿಲ ಮೂಲ ಕ್ಷೇತ್ರ ನಾಲ್ಕಂಭ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು, ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಳದ ಆಡಳಿತ ಮೊಕ್ತೇಸರರಾದ ಮಾಚಿಲ ನಾರ್ಣಪ್ಪ ಗೌಡ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ, ಆಡಳಿತ ಪಂಗಡದ ಸಂಚಾಲಕ ಹರಿಯಪ್ಪ ಗೌಡ ಖಂಡಿಗ, ಅರ್ಚಕ ಗಣಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಣಿಯೂರು ಗ್ರಾ.ಪಂ. ಸದಸ್ಯರಾದ ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಸುಲೋಚನಾ ಮಿಯೋಳ್ಪೆ, ವಿಶ್ವನಾಥ ಕೊಪ್ಪ, ಗಂಗಮ್ಮ ಗುಜ್ಜರ್ಮೆ, ದೇವಿಪ್ರಸಾದ್ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಅಂಬಾಕ್ಷಿ ಕೂರೇಲು, ಚಾರ್ವಾಕ ಹಾಲು ಉತ್ಪದಾಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ನಾಣಿಲ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಉದ್ಲಡ್ಡ, ಕಾರ್ಯದರ್ಶಿ ಜನಾರ್ದನ ಕೆಳಗಿನಕೇರಿ, ಚಾರ್ವಾಕ ಸಿ.ಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ದೇವಿನಗರ, ಹರೀಶ್ ಅಂಬುಲ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಗೌಡ ಅಂಬುಲ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಗೌಡ ಮಿಯೋಲ್ಪೆ, ಗ್ರಾ.ಪಂ. ಮಾಜಿ ಸದಸ್ಯರಾದ ಸುಂದರ ದೇವಸ್ಯ, ವೆಂಕಪ್ಪ ಗೌಡ ಬೀರೊಳಿಗೆ, ಹರಿಶ್ಚಂದ್ರ ನೀಟಡ್ಕ, ವಿಶ್ವನಾಥ ಖಂಡಿಗ, ಜನಾರ್ದನ ನಾಣಿಲ, ವಾಸಪ್ಪ ಗೌಡ ಖಂಡಿಗ, ಕುಸುಮಾಧರ ಬಿರೋಳಿಗೆ. ಭಾಗೀರಥಿ ಕುಂಬ್ಲಾಡಿ, ದಾಮೋದರ ಮಾಚಿಲ, ಶಿವರಾಮ ಮಾಚಿಲ, ದಾಮೋದರ ಮಾಚಿಲ, ಸತೀಶ್ ಅಂಬುಲ, ಕೇಶವ ಮಾಚಿಲ, ಭವಾನಿ ಕುಂಬ್ಲಾಡಿ ಮತ್ತೀತರರು ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜತ್ತಪ್ಪ ಗೌಡ ಉದ್ಲಡ್ಡ ಸ್ವಾಗತಿಸಿ, ಕಾಣಿಯೂರು ಗ್ರಾ.ಪಂ. ಮಾಜಿ ಸದಸ್ಯ ದಯಾನಂದ ಅಂಬುಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಚಿವರಿಗೆ ಸನ್ಮಾನ: ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸಚಿವ ಎಸ್ ಅಂಗಾರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.

ಕೋರೋನಾ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನವನ್ನು ಸರಕಾರದ ಕಡೆಯಿಂದ ಮಾಡಲಾಗಿದೆ. ಸರಕಾರದ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಕೋರೋನಾ ವೈರಸ್ ನಿರ್ಮೂಲನೆಗೆ ಜನತೆ ಸಹಕರಿಸಬೇಕು. ನಾವು ಮಾಡುವ ಉತ್ತಮ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ದೇವರ ಅನುಗ್ರಹವು ಸಿಗುತ್ತದೆ. ದೇವರ ಅನುಗ್ರಹದಿಂದ ಮಂತ್ರಿಯಾಗುವ ಯೋಗವು ನನಗೆ ದೊರೆತಿದೆ – ಎಸ್. ಅಂಗಾರ, ಸಚಿವರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.