ನ. 4: ಪುರುಷರ ಮದುವೆ ಡ್ರೆಸ್ ಸಿದ್ದಪಡಿಸಿಕೊಡುವ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ‘ಬಾರ್‌ಕೋಡ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೊಚ್ಚಹೊಸ ವಸ್ತ್ರಗಳ ಆಯ್ಕೆಯಲ್ಲಿ ಎಲ್ಲರೂ ಖುಷಿಪಡುವವರೇ. ಮದುವೆ ಡ್ರೆಸ್ ಗಳಲ್ಲಂತೂ ಬಣ್ಣ, ವಿನ್ಯಾಸ, ಶೈಲಿಯಲ್ಲಿ ಎಲ್ಲರೂ ಬಹಳವಾಗಿ ಆಲೋಚಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಸ್ತ್ರ ಶೈಲಿ ಬಣ್ಣಗಳು ಇಷ್ಟವಾಗುತ್ತವೆ. ಡ್ರೆಸ್ ಮಳಿಗೆಗಳಲ್ಲಿ ನಮಗಿಷ್ಟವಾದ ಆಯ್ಕೆ ಸಿಗದಿದ್ದಾಗ ಅನೇಕರು ನಿರಾಸೆಗೊಳಗಾಗುತ್ತಾರೆ. ಅದಕ್ಕಾಗಿಯೇ ಪುತ್ತೂರಿನಲ್ಲಿ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ‘ಬಾರ್ ಕೋಡ್’ ಎಂಬ ವಿಭಿನ್ನ ವಸ್ತ್ರ ಮಳಿಗೆ ನ. ೪ ರಂದು ಶುಭಾರಂಭಗೊಳ್ಳುತ್ತಿದೆ.

ಇದರ ವಿಶೇಷತೆ ಏನೆಂದರೆ ಗ್ರಾಹಕರ ಮನದಿಚ್ಛೆಯ ವಸ್ತ್ರಗಳನ್ನು ಸಿದ್ದಪಡಿಸಿಕೊಡುವುದು. ಶೈಲಿ, ವಿನ್ಯಾಸ, ಬಣ್ಣ ಹೇಳಿದರೆ ನಾವು ಒಪ್ಪುವ ಪಕ್ಕಾ ಡ್ರೆಸ್ ಸಿದ್ದವಾಗಿ ಸಿಗುತ್ತದೆ. ಚಿನ್ನಾಭರಣಗಳನ್ನು ಹೇಳಿ ಮಾಡಿಸುವ ರೀತಿಯಲ್ಲಿ ಡ್ರೆಸ್ ಗಳನ್ನೂ ಸಿದ್ದಪಡಿಸಿಕೊಡುವ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ‘ಬಾರ್‌ಕೋಡ್’ ಸಂಸ್ಥೆ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.

ಹಿಂದೆ ಮದುವೆ ವಸ್ತ್ರಗಳ ಆಯ್ಕೆಯಲ್ಲಿ ಹೆಣ್ಮಕ್ಕಳು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಪುರುಷರ ಮದುವೆ ಡ್ರೆಸ್‌ನಲ್ಲಿ ಹಲವು ಶೈಲಿ, ವಿನ್ಯಾಸಗಳು ಬಂದಿರುವುದರಿಂದ ಪುರುಷರೂ ತಮ್ಮ ವಸ್ತ್ರಗಳ ಆಯ್ಕೆಯಲ್ಲಿ ಗೊಂದಲಕ್ಕೀಡಾಗುತ್ತಾರೆ. ಪ್ರತಿಯೊಬ್ಬರೂ ತಾವು ವಿಭಿನ್ನವಾಗಿ ಕಾಣಬೇಕೆಂಬ ಹಂಬಲದಲ್ಲಿರುತ್ತಾರೆ. ಇದೆಲ್ಲವುಗಳಿಗೆ ‘ಬಾರ್‌ಕೋಡ್’ ವಸ್ತ್ರ ಮಳಿಗೆ ಪರಿಹಾರವಾಗಲಿದೆ. ಸಂಸ್ಥೆಯನ್ನು ಆರ್.ಜೆ.ಎಂ. ಬಲ್ನಾಡು ಇದರ ಗೌರವಾಧ್ಯಕ್ಷರಾದ ಮುಝಮ್ಮಿಲ್ ತಂಙಳ್ ಕಾಸರಗೋಡುರವರು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಕೆ.ಪಿ.ಸಿ.ಸಿ. ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಸರಕಾರಿ ಆಸ್ಪತ್ರೆಯ ಆಥೋಪಿಡಿಕ್ಸ್ ಸರ್ಜನ್ ಅಜಯ್ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ. ಉದಯರವಿ ಸಹಿತ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗಿಷ್ಟವಾದ ಶೈಲಿ- ವಿನ್ಯಾಸ
ಈ ಮಳಿಗೆಯಲ್ಲಿ ಕುರ್ತಾ, ಜೋಧ್‌ಪುರಿ ಸೂಟ್ಸ್, ಪ್ಯಾಂಟ್, ಶೆರ್ವಾಣಿ, ಕಂಡೋರಾ, ಶರ್ಟ್, ಸೂಟ್ಸ್, ವೈಸ್ಟ್‌ಕೋಟ್, ಡ್ರೆಸ್‌ಕೋಡ್ ಇತ್ಯಾದಿ ವಸ್ತ್ರಗಳನ್ನು ವಿವಿಧ ವಿನ್ಯಾಸಗಳಲ್ಲಿ ಮಾಡಿಕೊಡಲಾಗುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.