ಇಂಡಿಯನ್ ನ್ಯಾಷನಲ್ ಸ್ಪ್ರಿಂಟ್ ರ್‍ಯಾಲಿ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿ – ಏಸ್ ಮೋಟಾರ್ಸ್ ನ ಮ್ಹಾಲಕ ಆಕಾಶ್ ಐತಾಳ್ ಚಾಂಪಿಯನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಇಂಡಿಯನ್ ನ್ಯಾಷನಲ್ ಸ್ಪ್ರಿಂಟ್ ರ್‍ಯಾಲಿ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ ಬೊಳುವಾರು ಏಸ್ ಮೋಟಾರ್‍ಸ್‌ನ ಮ್ಹಾಲಕ ಆಕಾಶ್ ಐತಾಳ್ ಬರೋಬ್ಬರಿ ಆರು ಟ್ರೋಪಿಗಳನ್ನು ಗೆದ್ದುಕೊಂಡು ಫೈನಲ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರ ಗಡಿ ಭಾಗದ ಪಶ್ಚಿಮ ಭಾಗದಲ್ಲಿ ಎರಡು ದಿನಗಳ ಕಾಲ ನಡೆದ ಚಾಂಪಿಯನ್ ಶಿಪ್‌ನಲ್ಲಿ ತನ್ನ ಅದ್ಬುತ ಪ್ರದರ್ಶನ ನೀಡುವ ಮೂಲಕ ೪೦೦ಸಿಸಿ ವಿಭಾಗದಲ್ಲಿ ಪ್ರಥಮ ಚಾಂಪಿಯನ್, ಬುಲೆಟ್ ವಿಭಾಗದಲ್ಲಿ ಎರಡು ದಿನದಲ್ಲಿ ದ್ವಿತೀಯ ಹಾಗೂ ವಿದೇಶಿ ವಿಭಾಗದ ರ್‍ಯಾಲಿಯಲ್ಲಿ ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಪಡೆದುಕೊಂಡಿದ್ದು ಒಟ್ಟು ಆರು ಚಾಂಪಿಯನ್‌ನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ.

ಕಳೆದ ೩೦ವರ್ಷಗಳಿಂದ ಬೈಕ್ ರ್‍ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತರುವ ಆಕಾಶ್ ಐತಾಳ್ ಎಲ್ಲಾ ವಿಭಾಗದಲ್ಲಿಯೂ ಗೆದ್ದು ಚಾಂಪಿಯನ್ ಆಗಿರುತ್ತಾರೆ. ಯಮಹಾ, ಟಿವಿಎಸ್, ಸುಜ್ಹುಕಿ ವಿಭಾಗದಲ್ಲಿ ಸ್ಪರ್ಧಿಸಿ ಚಾಂಪಿಯನ್ ಪಡೆದಿರುತ್ತಾರೆ. ೨೦೦೮ರಲ್ಲಿ ಕಾರ್ ರ್‍ಯಾಲಿಯಲ್ಲಿಯೂ ಚಾಂಪಿಯನ್ ತನ್ನದಾಗಿಸಿಕೊಂಡಿರುತ್ತಾರೆ. ೨೦೧೬ರಲ್ಲಿ ಬುಲೆಟ್ ವಿಭಾಗದಲ್ಲಿ ಚಾಂಪಿಯನ್, ದಕ್ಷಿಣ್ ಡೇರ್ ೨೫೦೦ ಕಿ.ಮೀ ವಿಭಾಗ ಹಾಗೂ ೨೦೨೦ರಲ್ಲಿ ಕನಕಪುರದಲ್ಲಿ ನಡೆದ ರ್‍ಯಾಲಿಯಲ್ಲಿಯೂ ತನ್ನ ಅದ್ಬುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿ ವಿಶಿಷ್ಠ ಪ್ರದರ್ಶನ ನೀಡಿ ಚಾಂಪಿಯನ್ ತನ್ನ ಮುಡಿಗೇರಿಸುವ ಮೂಲಕ ಬೈಕ್ ರ್‍ಯಾಲಿಯಲ್ಲಿ ಪುತ್ತೂರಿನ ಹೆಸರನ್ನು ದೇಶದಾದ್ಯಂತ ಪಸರಿಸಿದ್ದಾರೆ. ಇವರು ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಆಲ್ ಇಂಡಿಯಾ ಸ್ಪ್ರಿಂಟ್ ರ್‍ಯಾಲಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.