ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಪ್ರಶ್ನಾಚಿಂತನೆ ಹಾಗು ಪರಿಹಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಪ್ರಶ್ನಾಚಿಂತನೆಯನ್ನು ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ತಿಕ ತಂತ್ರಿಯವರ ಉಪಸ್ಥಿತಿಯಲ್ಲಿ ದೈವಜ್ಞ ವಳಕುಂಜ ವಿಘ್ನೇಶ್ವರ ಭಟ್ಟ್ ರವರು ಪ್ರಶ್ನಾ ಚಿಂತನೆಯನ್ನು ನೇರವೆರಿಸಿ, ಪವಿತ್ರಪಾಣಿ ಶ್ರೀ ನರಹರಿ ಉಪಾಧ್ಯಾಯ ಈರಕಿಮಠ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಪ್ರಧಾನ ಅರ್ಚಕರಾದ ಅನಂತ ಉಡುಪ,ಶ್ರೀನಿಧಿ ,ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗು ಪ್ರಮುಖರು, ಭಕ್ತಾಧಿಗಳು,ದೈವಗಳ ಪರಿಚಾರಕರ ಉಪಸ್ಥಿತಿಯಲ್ಲಿ ನ.2 ರಂದು ದೇವಸ್ಥಾನದಲ್ಲಿ ನಡೆಯಿತು.

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಚಾವಡಿ ಗುಡ್ಡೆಯಲ್ಲಿರುವ ದೈವಸ್ಥಾನದಲ್ಲಿರುವ ಶ್ರೀ ಕಲೆಂಬಿತ್ತಾಯ,ರುದ್ರಚಾಮುಂಡಿ,ಪಂಜುರ್ಲಿ ,ಶಿರಾಡಿ ಪರಿವಾರ ದೈವಗಳು,ಕಲುರ್ಟಿ ಮತ್ತು ಗುಳಿಗ ಸಾನಿಧ್ಯಗಳ ಸ್ಥಿತಿ ಜೀರ್ಣೋದ್ದಾರ ಮಾಡುವ ಸಂಕಲ್ಪದಲ್ಲಿ ಅನುಜ್ಞಾ ಕಲಶ ಮಾಡಿಕೊಂಡು ಈಗಿರುವ ಗುಡಿಯೊಳಗೆ ಆಯಪ್ರಕಾರ ಮಂಚದಲ್ಲಿ ಪೂರ್ವಮುಖವಾಗಿ ಕಲೆಂಬಿತ್ತಾಯ,ರುದ್ರಚಾಮುಂಡಿ,ಪಂಜುರ್ಲಿಯನ್ನು ಮೊಗ,ಕಡ್ತಲೆ ಉಪಾಧಿಯಲ್ಲಿಯೂ,ಉತ್ತರ ಮುಖವಾಗಿ ಶಿರಾಡಿ ಪರಿವಾರ ದೈವಗಳನ್ನು ಮೊಗ,ಕಡ್ತಲೆ,ಕಲುರ್ಟಿ ಗೆ ಬೆತ್ತ ಉಪಾಧಿಗಳಲ್ಲಿ ಆಯಪ್ರಕಾರ ಪ್ರತ್ಯೇಕ ಮಂಚದಲ್ಲಿ ವಿಧಿ ಪ್ರಕಾರ ಪುನ: ಪ್ರತಿಷ್ಠಾಪಿಸುವುದು ಗುಳಿಗ ಸಾನಿಧ್ಯಕ್ಕೆ ಆಯ ಪ್ರಕಾರ ಆಗ್ನೇಯ ಭಾಗದಲ್ಲಿ ದೈವಸ್ಥಾನಕ್ಕೆ ಅಬಿಮುಖವಾಗಿ ಕಟ್ಟೆಯನ್ನು ಕಟ್ಟಿ ಜಲಶಿಲೆಯನ್ನು ಪ್ರತಿಷ್ಠಾಪಿಸುವುದು.ತ್ರಿಶೂಲವನ್ನು ಆರಾದನೆಯ ಸಮಯದಲ್ಲಿ ಕಟ್ಟೆಯಲ್ಲಿಟ್ಟು ಬಾಕಿ ಉಳಿದ ಕಾಲದಲ್ಲಿ ದೈವಸ್ಥಾನದ ಒಳಗೆ ಇಡುವುದು ಮತ್ತು ದೈವಸ್ಥಾನದ ಮೂಲಸ್ಥಾನದ ಬನವನ್ನು ಅರಸು ಉಳ್ಳಾಕುಲು ಸಂಕಲ್ಪದಲ್ಲಿ ಬನದ ರೀತಿಯಲ್ಲಿಯೇ ಸಂಕಲ್ಪಿಸಿ ಮೂಲ ಸಂಕಲ್ಪದಲ್ಲಿ ಪ್ರಾರ್ಥಿಸುವುದು. ದೇವಸ್ಥಾನದ ಪೂರ್ವಭಾಗದಲ್ಲಿರುವ ನಾಗ ರಕ್ತೇಶ್ವರಿ ಗುಳಿಗ ಸಾನಿಧ್ಯಕ್ಕೆ ವಾರ್ಷಿಕ ತಂಬಿಲ, ದೈವಗಳ ನೇಮ ಇತ್ಯಾದಿಗಳು ಈಗಿನಂತೆ ನಡೆಸಿಕೊಂಡು ಬರುವುದು ,ದೇವಸ್ಥಾನದ ಜೀರ್ಣೋದ್ದಾರ ಕಾಲಘಟ್ಟದಲ್ಲಿ ದೈವಗಳ ಸ್ಥಾನವನ್ನು ಯಥಾ ಯೋಗ್ಯವಾಗಿ ನವೀಕರಣ ಇತ್ಯಾದಿಗಳನ್ನು ಶಾಸ್ತ್ರೀಯವಾಗಿ ಮಾಡಿಕೊಳ್ಳುವುದು . ಚಾವಡಿಗುಡ್ಡೆ ಸ್ಥಳದಲ್ಲಿರುವ ನಾಗದೋಷಕ್ಕಾಗಿ ಆಶ್ಲೇಷ ಬಲಿ, ಬ್ರಹ್ಮರಾಕ್ಷಸಧಿ ಉಚ್ಚಾಟನೆಗೆ ಅಘೋರ ಹೋಮ,ದೈವ ದೇವ ಬಂಧನದಲ್ಲಿರುವ ಪ್ರೇತಾತ್ಮಗಳನ್ನು ಸ್ವರ್ಣ ಹಾಗು ಬೆಳ್ಳಿಯ ಪ್ರತಿಮೆಗೆ ಅಹ್ವಾನಿಸಿ ಸದ್ಗತಿಗಾಗಿ ತಿಲಹೋಮ,ನಾರಾಯಣಬಲಿ, ಅಭಿವೃದ್ದಿಗಾಗಿ ಭಾಗವತದಶಮಸ್ಕಂಧ ಪಾರಾಯಣ,ಖುಗ್ವೇಧ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ,ಚಕ್ರಾಬ್ಜ ಪೂಜೆ,ಬ್ರಾಹ್ಮಣ ಅರಾಧನೆ ಮಾಡಿದ ನಂತರ ಸಂಗಮ ಕ್ಷೇತ್ರದಲ್ಲಿ ಜಲವಿಸರ್ಜನೆ ಮಾಡಬೇಕು. ಶೈವ,ವೈಷ್ಣವ,ಶಾಕ್ತೇಯ ದುಮೃತಿ ಪ್ರೇತಗಳನ್ನು ಮುಕ್ತಿಗೊಳಿಸಬೇಕು.ದೈವಸ್ಥಾನದ ಸಂಬಂಧಪಟ್ಟ ಜಾಗಕ್ಕೆ ಅವರಣ ರಚಿಸಿ ಶುಚಿತ್ವ ಕಾಪಡಿಕೊಂಡು ಬರಬೇಕೆಂದು ದೈವಜ್ಞರಾದ ವಿಘ್ನೇಶ್ವರ ಭಟ್ಟ್ ವಳಕುಂಜರವರು ಪ್ರಶ್ನಾ ಚಿಂತನೆಯಲ್ಲಿ ತಿಳಿಸಿದ್ದಾರೆ. ಪ್ರಶ್ನಾಚಿಂತನೆ ಹಾಗು ಜಾತ್ರೋತ್ಸವಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದಲ್ಲಿ ಭಕ್ತಾಧಿಗಳ ಸಭೆಯನ್ನು ನ.14 ಅದಿತ್ಯವಾರ ಸಂಜೆ 4:00 ಗಂಟೆಗೆ ಕರೆಯಲಾಗಿದೆ ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ ಹಾಗು ವ್ಯವಸ್ಥಾಪನ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.