ಕುಂಬ್ರ ಶ್ರೀ ಲಕ್ಷ್ಮೀ ಜುವೆಲ್ಲರಿ ವರ್ಕ್ಸ್ ಶಾಪ್ ನಲ್ಲಿ ಶ್ರೀ ಲಕ್ಷ್ಮೀಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ೨೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜುವೆಲ್ಲರಿ ವರ್ಕ್ಸ್ ಶಾಪ್ ನಲ್ಲಿ ೨೦ ನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ದೀಪವಾಳಿ ಪ್ರಯುಕ್ತ ಶ್ರೀ ಲಕ್ಷ್ಮೀಪೂಜೆ ಮತ್ತು ಗಣಹೋಮ ನ.೦೪ ರಂದು ಬೆಳಿಗ್ಗೆ ನಡೆಯಿತು. ಪುರೋಹಿತ್ ನವೀನ್ ಕಲ್ಲಗದ್ದೆ ಬೆಳ್ಳಾರೆಯವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಲಕ್ಷ್ಮೀ ಜುವೆಲ್ಲರಿ ವರ್ಕ್ಸ್ ಶಾಫ್‌ನ ಮಾಲಕ ಉದಯ ಆಚಾರ್ಯ ಕೃಷ್ಣನಗರ ಅತಿಥಿಗಳನ್ನು ಸ್ವಾಗತಿಸಿ,ಪ್ರಸಾದ ನೀಡಿ ಸತ್ಕರಿಸಿದರು. ಶುಭಾ ಉದಯ ಆಚಾರ್ಯ, ಹಿತಾಶ್ರೀ, ಹಿತೇಶ್ ಸಹಕರಿಸಿದ್ದರು.

೨೦ ನೇ ವರ್ಷಕ್ಕೆ ಪಾದಾರ್ಪಣೆ
ಶ್ರೀ ಲಕ್ಷ್ಮೀ ಜುವೆಲ್ಲರಿ ವರ್ಕ್ಸ ಶಾಫ್ ೨೦ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ತರದ ಚಿನ್ನ, ಬೆಳ್ಳಿ ಆಭರಣಗಳನ್ನು ಗ್ರಾಹಕರ ಮನದಿಚ್ಚೆಯಂತೆ ಕ್ಲಪ್ತ ಸಮಯದಲ್ಲಿ ತಯಾರಿಸಿಕೊಡುವ ವ್ಯವಸ್ಥೆ ಹಾಗೂ ಬೆಳ್ಳಿ ಆಭರಣಗಳಿಗೆ ಒಪ್ಪ ಹಾಕಿ ಕೊಡುವ ವ್ಯವಸ್ಥೆ ಇಲ್ಲಿದೆ. ಮದುವೆ ಇನ್ನಿತರ ಸಮಾರಂಭಗಳಿಗೆ ಬಾಡಿಗೆಗೆ ಆಭರಣಗಳು ಕೂಡ ದೊರೆಯುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.