ಪುತ್ತೂರು, ಮರೀಲ್, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಪ್ರಿಯರಿಗೆ ಕ್ರಿಕೆಟ್ ಸುಗ್ಗಿ – ಡಿ.12ರಂದು ಡೊನ್ ಬೊಸ್ಕೊ ಕ್ಲಬ್‌ನಿಂದ ಸಿಪಿಎಲ್-2021

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)-2021′ ಡಿ.12 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದೆ.

ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯು ಈ ಕ್ರಿಕೆಟ್ ಕೂಟವನ್ನು ಸಂಘಟಿಸುತ್ತಿದ್ದು, ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಮೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ ಐಪಿಎಲ್ ಮಾದರಿಯಲ್ಲಿ ಸೀಮಿತ ಓವರ್‌ಗಳ ಓವರ್ ಆರ್ಮ್ ಟೆನ್ನಿಸ್ ಬಾಲ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ಬಲಿಷ್ಟ ಆರು ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಪ್ರತೀ ತಂಡವು ತಂಡದ ಮಾಲಕರು ಹಾಗೂ ತಂಡದಲ್ಲಿ ತಲಾ ಓರ್ವರಂತೆ ಒಟ್ಟು ಆರು ಮಂದಿ ಐಕಾನ್ ಆಟಗಾರರನ್ನು ಹೊಂದಿದೆ. ಆಟಗಾರರು ಸಂಘಟಕರು ಸೂಚಿಸಿದ ಚರ್ಚ್‌ನಲ್ಲಿ ಕಡ್ಡಾಯವಾಗಿ ಹೆಸರನ್ನು ಹೊಂದಿರಬೇಕು. ಆಟಗಾರರು ತಮ್ಮ ಭಾವಚಿತ್ರದೊಂದಿಗೆ ತಾವು ಬಲಗೈ ಅಥವಾ ಎಡಗೈ ಬ್ಯಾಟರ್, ಬೌಲರ್ ಅಥವಾ ಅಲ್‌ರೌಂಡರ್ ಎಂಬುದನ್ನು ನವೆಂಬರ್ ೭ರೊಳಗೆ ಸಂಘಟಕರು ನೀಡಿದ ಅರ್ಜಿ ಪತ್ರದಲ್ಲಿ ರೂ.೧೦೦ ನೋಂದಾವಣೆ ಶುಲ್ಕದೊಂದಿಗೆ ಸೂಚಿಸಬೇಕಾಗಿದೆ.

ನ.೧೪ ರಂದು ಬಿಡ್ಡಿಂಗ್ ಪ್ರಕ್ರಿಯೆ:
ಸಂಘಟಕರು ಆರಿಸಿದ ಬಲಿಷ್ಟ ಆರು ಮಂದಿ ಐಕಾನ್ ಆಟಗಾರರಲ್ಲದೆ ನೋಂದಾವಣೆ ಮಾಡಿದಂತಹ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪಾಯಿಂಟ್ಸ್ ಆಧಾರದಲ್ಲಿ ನವೆಂಬರ್ ೧೪ ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಸುಮಾರು ೮೦ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಆಯಾ ತಂಡಗಳಿಗೆ ಆಯ್ಕೆಯಾದಂತಹ ಆಟಗಾರರು ಕಡ್ಡಾಯ ಜರ್ಸಿಯೊಂದಿಗೆ ಧರಿಸತಕ್ಕದ್ದು. ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ತೇರ್ಗಡೆ ಹೊಂದುವ ಅರ್ಹತೆ ಹೊಂದುತ್ತದೆ. ಲೀಗ್, ಫ್ಲೇ ಆಫ್ ಸುತ್ತಿನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಒಟ್ಟು ೧೮ ಪಂದ್ಯಗಳು ನಡೆಯಲಿವೆ. ಫಿಲೋಮಿನಾದ ಎರಡು ಮೈದಾನಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.

ಆರು ತಂಡ/ಮಾಲಕರು:
ಆರು ತಂಡಗಳಾದ ಸಿಝ್ಲರ್ ಸ್ಟ್ರೈಕರ್‍ಸ್ ತಂಡಕ್ಕೆ ರೋಶನ್ ರೆಬೆಲ್ಲೋ ಕಲ್ಲಾರೆ, ಸೋಜಾ ಸೂಪರ್ ಕಿಂಗ್ಸ್ ತಂಡಕ್ಕೆ ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್ ದರ್ಬೆ, ಕ್ರಿಶಲ್ ವಾರಿಯರ್‍ಸ್ ತಂಡಕ್ಕೆ ಕ್ರಿಶಲ್ ಸ್ಟೀಲ್ಸ್‌ನ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಸ್ ನೂಜಿ, ರೋಯಲ್ ಚಾಲೆಂಜರ್‍ಸ್ ತಂಡಕ್ಕೆ ಸುನಿಲ್ ಪಿಂಟೋ ಪುತ್ತೂರು, ಎಸ್.ಎಲ್ ಗ್ಲ್ಯಾಡಿಯೇಟರ್‍ಸ್ ತಂಡಕ್ಕೆ ದರ್ಬೆ ಸಂತ ಲಾರೆನ್ಸ್ ಸಾ ಮಿಲ್‌ನ ಸಿಲ್ವೆಸ್ತರ್ ಡಿ’ಸೋಜ, ಲೂವಿಸ್ ಕ್ರಿಕೆಟರ್‍ಸ್ ತಂಡಕ್ಕೆ ಲೆಸ್ಟರ್ ಕೆಟರರ್‍ಸ್‌ನ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮರೀಲುರವರು ಮಾಲಕರಾಗಿ ಗುರುತಿಸಿಕೊಂಡಿದ್ದಾರೆ.
ಆಸಕ್ತ ಆಟಗಾರರು ನೋಂದಣಿ ಅರ್ಜಿಯನ್ನು ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಸಿಕ್ವೇರಾ(9844171998), ಆಲನ್ ಮಿನೇಜಸ್(945471178), ರಾಕೇಶ್ ಮಸ್ಕರೇನ್ಹಸ್(9686912316)ರವರನ್ನು ಸಂಪರ್ಕಿಸಬಹುದು ಎಂದು ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೋನ್ ಕುಟಿನ್ಹಾ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ರೋಹನ್ ಡಾಯಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರು ತಂಡಗಳು..ಮಾಲಕರು..
-ಸಿಝ್ಲರ್ ಸ್ಟ್ರೈಕರ್‍ಸ್-ರೋಶನ್ ರೆಬೆಲ್ಲೋ ಕಲ್ಲಾರೆ
-ಸೋಜಾ ಸೂಪರ್ ಕಿಂಗ್ಸ್-ದೀಪಕ್ ಮಿನೇಜಸ್ ದರ್ಬೆ
-ಕ್ರಿಶಲ್ ವಾರಿಯರ್‍ಸ್-ಕಿರಣ್ ಡಿ’ಸೋಜ/ಮೆಲ್ವಿನ್ ಪಾಸ್ ನೂಜಿ
-ರಾಯಲ್ ಚಾಲೆಂಜರ್‍ಸ್-ಸುನಿಲ್ ಪಿಂಟೋ ಪುತ್ತೂರು
-ಎಸ್.ಎಲ್ ಗ್ಲ್ಯಾಡಿಯೇಟರ್‍ಸ್-ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ
-ಲೂವಿಸ್ ಕ್ರಿಕೆಟರ್‍ಸ್-ಓಸ್ವಾಲ್ಡ್ ಲೂವಿಸ್/ಲೆಸ್ಟರ್ ಲೂವಿಸ್ ಮರೀಲು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.