ನ.7: ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕದ ವತಿಯಿಂದ 4ನೇ ವರ್ಷದ ಕೆಸರುಡೊಂಜಿ ದಿನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುವ ಶ್ರೀ ವಿಷ್ಣು ಮಜ್ಜಾರಡ್ಕದ ವತಿಯಿಂದ 3ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ಮಜ್ಜಾರು ಗದ್ದೆಯಲ್ಲಿ ನ.7ರಂದು ನಡೆಯಲಿದೆ ಎಂದು ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕದ ಸಾಂಸ್ಕೃತಿಕ ಕಾರ್ಯದರ್ಶಿ ಭವಿತ್ ಮಜ್ಜಾರು ಹೇಳಿದರು.

ಅವರು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನ.೬ ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.‘ಕಳೆದ ಮೂರು ವರ್ಷಗಳಿಂದ ಎಲ್ಲರ ಮನೆಮಾತಾಗಿರುವ ಕೆಸರುಡೊಂಜಿ ದಿನ ಕಾರ್ಯಕ್ರಮ ೪ನೇ ವರ್ಷಕ್ಕೆ ಕಾಲಿಟ್ಟಿದ್ದು ಈ ಬಾರಿ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು,ಸಾಧಕರಿಗೆ ಸನ್ಮಾನ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಉದ್ಘಾಟನಾ ಸಮಾರಂಭದಲ್ಲಿ ಮಜ್ಜಾರಡ್ಕ ಶ್ರೀ ವಿಷ್ಣು ಯುವ ಶಕ್ತಿ ಬಳಗ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರುರವರ ಗೌರವ ಉಪಸ್ಥಿತಿ ಇರಲಿದೆ. ಶ್ರೀ ವಿಷ್ಣು ಯುವ ಶಕ್ತಿ ಬಳಗದ ಅಧ್ಯಕ್ಷ ರವಿ ಮಜ್ಜಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಅರಿಯಡ್ಕ ಗ್ರಾಂ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ,ಅರಿಯಡ್ಕ ಅರಣ್ಯ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ,ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಮಕೃಷ್ಣ ಪಡುಮಲೆ,ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಬನ್ನೂರು,ಅರಿಯಡ್ಕ ಗ್ರಾಂ.ಪಂ ಸದಸ್ಯರಾದ ರಾಜೇಶ್ ಮಣಿಯಾಣಿ,ಉಷಾ ರೇಖಾ.ರೈ,ನೆಹರು ಯುವ ಕೇಂದ್ರ ಮಂಗಳೂರಿನ ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು,ಸಮಾಜ ಸೇವಕ ಕೆ.ಮಂಜುನಾಥ್ ಬಾಬು,ಶ್ರೀ ವಿಷ್ಣು ಯುವ ಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ಗೋಳ್ತಿಲ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.ಬಳಿಕ ಪುರುಷರಿಗೆ ಮಡಕೆ ಒಡೆಯುವುದು,ಕಬಡ್ಡಿ,ಹಿಮ್ಮುಖ ಓಟ,ಹಗ್ಗ ಜಗ್ಗಾಟ ಹಾಗೂ ಮಹಿಳೆಯರಿಗೆ ಮಡಕೆ ಒಡೆಯುವುದು,ಲಿಂಬೆ ಚಮಚ ಓಟ,ಸಂಗೀತ ಕುರ್ಚಿ ಸ್ಪರ್ದೆಗಳು ಮಕ್ಕಳಿಗೆ ವಿವಿಧ ಸ್ಪರ್ದೆಗಳು ದಂಪತಿಗಳಿಗೆ ಹಾಗೂ ಹಿರಿಯರಿಗೆ ವಿಶೇಷ ಆಟೋಟ ಸ್ಪರ್ದೆಗಳು ನಡೆಯಲಿದ್ದು ಸ್ಥಳೀಯರಿಗೆ ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಾಟ ಅಪರಾಹ್ನ ೩ ಗಂಟೆಯಿಂದ ನಡೆಯಲಿದೆ ಎಂದು ಹೇಳಿದ ಅವರು ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಎಂ.ಆರ್ ಗ್ರೂಫ್ ಬೆಂಗಳೂರು ಇಲ್ಲಿನ ಉದ್ಯಮಿ ಮನ್ಮಿತ್.ರೈ ಓಲೆಮುಂಡೋವು ಹಾಗೂ ರಂಗ ಭೂಮಿ ಕಲಾವಿದ ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಗೌರವ ಉಪಸ್ಥಿತರಲಿದ್ದಾರೆ,ಶ್ರೀ ವಿಷ್ಣು ಯುವ ಶಕ್ತಿ ಬಳಗ ಅಧ್ಯಕ್ಷ ರವಿ ಮಜ್ಜಾರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಇಲ್ಲಿನ ಉಪನಿರೀಕ್ಷಣಾಧಿಕಾರಿ ಉದಯ ರವಿ,ಪ್ರಗತಿಪರ ಕೃಷಿ ಕಡಮಜಲು ಸುಭಾಷ್.ರೈ,ಗೆಜ್ಜೆಗಿರಿ ಶ್ರೀ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ,ಅರಿಯಡ್ಕ ಗ್ರಾಂ.ಪಂ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ,ಬೆಂಗಳೂರು ಅವಲಹಳ್ಳಿ ಪೊಲೀಸ್ ಸ್ಟೇಷನ್ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ.ಕೆ,ನಿರೂಪಕಿ ರೇಣುಕಾ ಕಣಿಯೂರು ಮುಖ್ಯ ಅತಿಥಿಗಳಾಗಿ ಭಾಗವಿಸಲಿದ್ದಾರೆ.ಬಳಿಕ ಮೋಹನ್.ರೈ ಓಲೆಮುಂಡೋವು ಪ್ರಾಯೋಜಕತ್ವದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ನಾಟಕ ರಾತ್ರಿ ೯ ಗಂಟೆಗೆ ನಡೆಯಲಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು,ತುಳು ನಾಟಕ ರಂಗದ ವಿಜಯ ಕುಮಾರ್ ಕೋಡಿಯಾಲ್ ಬೈಲ್,‌ ಪೊಲೀಸ್ ಉಪನಿರೀಕ್ಷಣಾಧಿಕಾರಿ ಉದಯ ರವಿ,ಪೊಲೀಸ್ ಸಬ್ ಇನ್ಸೆ÷್ಪಕ್ಟರ್ ಪ್ರದೀಪ್ ಪೂಜಾರಿ.ಕೆ,ಸಾಮಾಜುಕ ಮುಂದಾಳುಗಳಾದ ಲೋಕೇಶ್ ರೈ ಅಮೈ,ಮೋಹನ್ ದಾಸ್ ರೈ,ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ಸಿ.ಶೇ ಕಜೆಮಾರು,ದೈವ ನರ್ತಕ ಕೃಷ್ಣ ಅಜಿಲ ಮಾಡದಗುಡ್ಡೆ,ಸಂಘಟನಾ ಪ್ರಮುಖ ರಘುನಾಥ ಪೂಜಾರಿ,ಸ್ಥಳದಾನಿಗಳಾದ ಜಯಂತಿ ಮಜ್ಜಾರು ಮತ್ತು ಸಂಘಟನೆಯ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರು ಮಕ್ಕಳಾದ ಆಧ್ಯ ಆರ್.ಜೆ,ಭುವನ್,ಸುಜನ್,ಹೇಮಚಂದ್ರ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರವಿ ಮಜ್ಜಾರು,ಪ್ರಧಾನ ಕಾಯದರ್ಶಿ ಸದಾಶಿವ ಮಣಿಯಾಣಿ ಗೋಳ್ತಿಲ,ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ಗೋಳ್ತಿಲ ಹಾಗೂ ಸದಸ್ಯ ರಘನಾಥ ಗೋಳ್ತಿಲ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.