ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್‌ ರೈ ಬಾಲ್ಯೊಟ್ಟು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯು ನ, 5 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ 18 ತಿಂಗಳ ನಮ್ಮ ಅವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಕರೋನಾದ ಸಮಯದಲ್ಲಿ ಸಮರ್ಥವಾಗಿ ಸಂಘವು ತನ್ನ ಸಮಾಜಮುಖಿ ಕಾರ್‍ಯವನ್ನು ನಿರಂತರವಾಗಿ ಮುಂದುವರಿಸಿದೆ, ಸಂಘದ ಬೆಳವಣಿಗೆಯೇ ನಮ್ಮ ಗುರಿಯಾಗಿದ್ದು, ಇನ್ನೂ ಮುಂದಿನ ಅವಧಿಗೆ ಶಶಿಕುಮಾರ್ ರೈ ಬಾಲ್ಯೊಟ್ಟುರವರ ತಂಡವು ಉತ್ತಮವಾದ ಸಮಾಜಮುಖಿ ಕಾರ್‍ಯವನ್ನು ಮಾಡಲಿ ಎಂದು ಶುಭಹಾರೈಸಿದರು.

ಶಶಿಕುಮಾರ್ ರೈ ಬಾಲ್ಯೊಟ್ಟು
ರಮೇಶ್ ಬಿ.ರೈ ಡಿಂಬ್ರಿ
ಕೃಷ್ಣಪ್ರಸಾದ್ ಆಳ್ವ

ಶಶಿಕುಮಾರ್ ರೈ ಬಾಲ್ಯೊಟ್ಟು ತಂಡಕ್ಕೆ ಅಧಿಕಾರ ಹಸ್ತಾಂತರ
ಸಂಘದ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್‍ಯದರ್ಶಿಯಾಗಿ ರಮೇಶ್ ಬಿ.ರೈ ಡಿಂಬ್ರಿ ಹಾಗೂ ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆಯವರಿಗೆ ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರವನ್ನು ಮಾಡಲಾಯಿತು. ಅಧಿಕಾರ ಸ್ವೀಕರಿಸಿ, ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಪುತ್ತೂರು ತಾಲೂಕು ಬಂಟರ ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಿ, ಸಮಾಜದ ಎಲ್ಲರನ್ನು ಒಂದಡೆ ಸೇರಿಸುವ ಕಾಯಕ ನಿರಂತರವಾಗಿ ನಡೆಯಲಿದೆ ಎಂದರು.

 

ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ವಿಭಜಿತ ದ.ಕ,ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘ ಮಾದರಿ ಸಂಘಟನೆಯಾಗಲಿ, ಆ ಮೂಲಕ ನಮ್ಮ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸ ನಿರಂತರವಾಗಿ ನಡೆಯಲಿ. ಶಶಿಕುಮಾರ್ ರೈರವರ ಅಧ್ಯಕ್ಷತೆಯಲ್ಲಿ ಸಂಘ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂದು ಶುಭಹಾರೈಸಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರುಗಳು ಶಶಿಕುಮಾರ್ ರೈ ಮತ್ತು ಅವರ ತಂಡ ಉತ್ತಮ ಸಮಾಜ ಕಾರ್‍ಯವನ್ನು ನಡೆಸಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಣಾಮ್ ಶೆಟ್ಟಿ ಕೈಕಾರ ಹಾಗೂ ಬಂಟರ ಸಂಘದ ನೂತನ ಪ್ರಧಾನ ಕಾರ್‍ಯದರ್ಶಿ ರಮೇಶ್ ಬಿ.ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ಉಪಸ್ಥಿತರಿದ್ದರು.

 

ಚಂದ್ರಹಾಸ್ ಶೆಟ್ಟಿ ಗೌರವರ್ಪಣೆ
ದಿ.ರೇಖಾ ಮುತ್ತಪ್ಪ ರೈ ಹಾಗೂ ದಿ.ಜಯಂತ ರೈ ಸ್ಮರಣಾರ್ಥ ಕ್ರೀಡಾ ಪ್ರಶಸ್ತಿ ದತ್ತಿನಿಧಿ ಪ್ರಾಯೋಜಕತ್ವಕ್ಕೆ ರೂ, ಎರಡು ಲಕ್ಷವನ್ನು ಬಂಟರ ಸಂಘದ ಮೂಲಕ ನೀಡಿರುವ ಪುತ್ತೂರು ತಾಲೂಕು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ್ ಶೆಟ್ಟಿರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಸಮಾರಂಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ರೋಶನ್ ರೈ ಬನ್ನೂರು ಹಾಗೂ ನಿರ್ದೇಶಕರುಗಳು ಮತ್ತು ಕಾರ್‍ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡುತ್ತಿರುವುದು

ನೂತನ ಅಧ್ಯಕ್ಷ, ಪ್ರಧಾನ ಕಾರ್‍ಯದರ್ಶಿ ಹಾಗೂ ಕೋಶಾಧಿಕಾರಿರವರುಗಳ ಪರಿಚಯ
ಶಶಿಕುಮಾರ್ ರೈ ಬಾಲ್ಯೊಟ್ಟುರವರು ಪ್ರಗತಿಪರ ಕೃಷಿಕರಾಗಿದ್ದು, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿದ್ದರು, 8 ವರ್ಷಗಳ ಕಾಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಇರ್ದೆ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬೆಂದ್ರ್‌ತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರಲ್ತಡ್ಕ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಇರ್ದೆವಿಷ್ಣುಮೂರ್ತಿ ದೇವಸ್ಥಾನದ ಮೋಕ್ತೇಸರಾಗಿ, ನಿಡ್ಪಳ್ಳಿಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್‍ಯಧ್ಯಕ್ಷರಾಗಿ, ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾಗಿ, ಸಾರ್ವಜನಿಕ ಶಾರದೋತ್ಸವ ಸಮಿತಿ ಪಾಣಾಜೆ ಇದರ ಗೌರವಾಧ್ಯಕ್ಷರಾಗಿ, ಇರ್ದೆ ವಿಷ್ಣುಮೂರ್ತಿ ದೇವಾಲಯದ ಶಾರದೋತ್ಸವ ಸಮಿತಿಯಲ್ಲಿ 23 ವರ್ಷಗಳ ಕಾಲ ಅಧ್ಯಕ್ಷರಾಗಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನ ರಕ್ಷಕ_ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿಯ ಸಂಚಾಲಕರಾಗಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಕೋಶಾಧಿಕಾರಿಯಾಗಿ, ನಂತರ ಮೂರು ಅವಧಿಗಳ ಕಾಲ ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿಯಾಗಿ, ಪ್ರಸ್ತುತ ಪುತ್ತೂರು ಸೌಹಾರ್ದ ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷರಾಗಿ, ಪುತ್ತೂರು ಟಿಎಪಿಎಂಎಸ್‌ನ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ’

ಪ್ರಧಾನ ಕಾರ್‍ಯದರ್ಶಿ ರಮೇಶ್ ಬಿ.ರೈ ಡಿಂಬ್ರಿ
ರಮೇಶ್ ಬಿ.ರೈ ಡಿಂಬ್ರಿಯವರು ಪ್ರಗತಿಪರ ಕೃಷಿಕರಾಗಿದ್ದು, ಆರ್ಯಾಪು ಗ್ರಾ.ಪಂ, ಸದಸ್ಯರಾಗಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿಯಾಗಿ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್‍ಯದರ್ಶಿಯಾಗಿ ಸೇವೆಸಲ್ಲಿಸಿದ್ದಾರೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ತುಳುನಾಡ ಸೇನೆ ಸಂಘಟನೆಯನ್ನು ಆರಂಭಿಸಿ, ಆದರ ಸ್ಥಾಪಕಾಧ್ಯಕ್ಷರಾಗಿದ್ದರು. 14 ವರ್ಷಗಳ ಪುತ್ತೂರು ಹಿಂದೂಜಾಗರಣ ವೇದಿಕೆಯ ಅಧ್ಯಕ್ಷರಾಗಿ, ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

ಚಂದ್ರಹಾಸ್ ಶೆಟ್ಟಿ ಯವರಿಗೆ ಸನ್ಮಾನ

ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ
ಕೃಷ್ಣಪ್ರಸಾದ್ ಆಳ್ವರವರು ಪ್ರಗತಿಪರ ಕೃಷಿಕರಾಗಿದ್ದು, 2 ಅವಧಿಯಲ್ಲಿ ಬಂಟರ ಸಂಘದ ನಿರ್ದೇಶಕರಾಗಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ಗಾಂಧಿಕಟ್ಟೆಯ ಸ್ಥಾಪಕಾಗಿ ಮತ್ತು ಸಂಚಾಕರಾಗಿ, ಪುತ್ತೂರು ತುಳುಕೂಟದ ಉಪಾಧ್ಯಕ್ಷರಾಗಿ, ತಾಲೂಕು ಯುವ ಬಂಟರ ಸಂಘದ ವಾರ್ಷಿಕ ಕ್ರಿಕೆಟ್ ಪಂದ್ಯಾಟದ ಸ್ಥಾಪನೆಯ ರೂವಾರಿ, ಇರ್ದೆ ಉಪ್ಪಳಿಗೆ ಪ್ರೌಢಶಾಲೆಯ ಉತ್ತುಂಗ ಸಭಾಭವನ ಇವರ ನೇತ್ರತ್ವದಲ್ಲಿ ನಡೆದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.