ಕೊಂಡಾಡಿಕೊಪ್ಪ ದೀಪಾವಳಿ ಕ್ರೀಡಾ ಕೂಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕ್ರೀಡಾಕೂಟಗಳು ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ: ಜಯಂತ್ ವೈ


ಪುತ್ತೂರು: ಕ್ರೀಡೆಗಳಿಂದ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸಾಧ್ಯ.ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಜನರು ಸಂಘಟಿತರಾಗಿ ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಂಡು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬಹುದು. ಕ್ರೀಡಾಕೂಟಗಳು ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ ಎಂದು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ ವೈ ಹೇಳಿದರು. ಅವರು ದೀಪಾವಳಿ ಕ್ರೀಡಾಕೂಟ ಸಮಿತಿ ಕೊಂಡಾಡಿಕೊಪ್ಪ ಇದರ ವತಿಯಿಂದ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಚೇತನ್ ಕುಂಬಾರ ಕೊಂಡಾಡಿಕೊಪ್ಪ ವಹಿಸಿದ್ದರು.ಅತಿಥಿಗಳಾಗಿ ಆಲಂಕಾರು ಗ್ರಾಮ ಪಂಚಾಯತ್ ಸದಸ್ಯೆ ವಾರಿಜಾ ಕೆ ಸಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಕುಂಬಾರ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶರವೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಶೀನಪ್ಪ ಕುಂಬಾರ, ಎಸ್ ಡಿ ಎಂಸಿ ಅಧ್ಯಕ್ಷ ಮೋಹನ ಕಮಿತ್ತಿಲು, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರತ್ನ ಬಿ ಕೆ, ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿಕೊಪ್ಪ ಇದರ ಅಧ್ಯಕ್ಷ ಶಶಿಧರ ಕುಂಬಾರ, ಎಸ್ ಡಿ ಸಿ ಸಿ ಬ್ಯಾಂಕ್ ಕೊಕ್ಕಡ ಶಾಖೆಯ ಚಂದ್ರಶೇಖರ ಕುಂಬಾರ ಉಪಸ್ಥಿತರಿದ್ದರು.ಕಾರ್ಯದರ್ಶಿ ಕೀರ್ತನ್ ಕುಂಬಾರ ಕ್ರೀಡಾ ಕಾರ್ಯದರ್ಶಿ ದಿನೇಶ ಗೌಡ ಏಂತಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

 

ಸನ್ಮಾನ:
ಕಾರ್ಯಕ್ರಮದಲ್ಲಿ ಹುಕ್ರಪ್ಪ ಮುಗೇರ ಕಮಿತ್ತಿಲು ಕುಮಾರಿ ರಶ್ಮಿತಾ ಕುಮಾರಿ ಚಿತ್ರಲೇಖ ಇವರನ್ನು ಸನ್ಮಾನಿಸಲಾಯಿತು.ರಾಜ್ಯಮಟ್ಟದ ವೀಕ್ಷಕ ವಿವರಣೆಕಾರರಾದ ಸುರೇಶ್ ಪಡಿಕಂಡ ಇವರನ್ನು ಗೌರವಿಸಲಾಯಿತು. ಕೃಷ್ಣ ಕುಂಬಾರ ಸ್ವಾಗತಿಸಿ,ದಿವಾಕರ ಕುಂಬಾರ ಕೊಂಡಾಡಿಕೊಪ್ಪ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.