ಕಬಕ ಮೀನುಮಾರುಕಟ್ಟೆ ಬರೋಬ್ಬರಿ ರೂ.12.10ಲಕ್ಷಕ್ಕೆ ಏಲಂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು:ಕಬಕ ಗ್ರಾ.ಪಂನಿಂದ ಕಬಕ ಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಮೀನು ಮಾರುಕಟ್ಟೆಯ ಮೂರು ಸ್ಟಾಲ್‌ಗಳು ಬರೋಬ್ಬರಿ ರೂ.12,10,400ಕ್ಕೆ ಲಕ್ಷಕ್ಕೆ ಏಲಂ ಆಗಿರುತ್ತದೆ.

 

ಏಲಂ ಪ್ರಕ್ರಿಯೆಯು ನ.6ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಒಟ್ಟು 14ಮಂದಿ ಬಿಡ್ಡುದಾರರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಒಟ್ಟು ಮೂರು ಸ್ಟಾಲ್‌ಗಳ ಪೈಕಿ  1 ಹಾಗೂ 2ನೇ ಸ್ಟಾಲ್‌ನ ಏಲಂನಲ್ಲಿ ಕಬಕ ಗ್ರಾಮದ ಬಿಡ್ಡುದಾರರಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ೩ನೇ ಸ್ಟಾಲ್ ಹೊರಗಿನ ಗ್ರಾಮದವರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಏಲಂನಲ್ಲಿ ಖಾಯಂ ಆದ ಬಿಡ್ಡುದಾರರಿಗೆ ನ.11ರಿಂದ ಪ್ರಾರಂಭಿಸಿ 2023 ರ ಮಾರ್ಚ್ 30ರ ತನಕ ಅಂದರೆ 17 ತಿಂಗಳುಗಳ ಅವಧಿಯ ವ್ಯಾಪಾರದ ಹಕ್ಕನ್ನು ನೀಡಲಾಗಿದೆ.

ಬಿಡ್‌ನ ಆರಂಭಿಕ ಮೊತ್ತ ತಿಂಗಳಿಗೆ ರೂ.6000ಕ್ಕೆ ನಿಗಧಿಪಡಿಸಲಾಗಿತ್ತು. ಏಲಂನಲ್ಲಿ ಪ್ರಥಮ ಸ್ಟಾಲ್ ತಿಂಗಳಿಗೆ ರೂ.21,600ರಂತೆ 17 ತಿಂಗಳಿಗೆ ರೂ.3,67,200, ಎರಡನೇ ಸ್ಟಾಲ್ ತಿಂಗಳಿಗೆ ರೂ.27,600ರಂತೆ 17 ತಿಂಗಳಿಗೆ ರೂ.4,69,200 ಹಾಗೂ ಮೂರನೇ ಸ್ಟಾಲ್ ತಿಂಗಳಿಗೆ ರೂ.22,000ದಂತೆ 17 ತಿಂಗಳಿಗೆ ರೂ.3,74,000 ಏಲಂ ಆಗಿದ್ದು ಒಟ್ಟು ಮೂರು ಸ್ಟಾಲ್‌ಗಳು ರೂ.12,10,400ಕ್ಕೆ ಏಲಂ ಆಗಿರುತ್ತದೆ. 1 ಹಾಗೂ 2ನೇ ಸ್ಟಾಲ್ ಶಾಹುಲ್ ಹಮೀದ್ ಪೋಳ್ಯ ಹಾಗೂ ಮೂರನೇ ಸ್ಟಾಲ್‌ನ್ನು ಅಬ್ದುಲ್ ಹಮೀದ್ ಗಡಿಯಾರರವರ ಪಡೆದುಕೊಂಡಿರುತ್ತಾರೆ.

ಗ್ರಾಂ ಪಂಅಧ್ಯಕ್ಷ ವಿನಯಕುಮಾರ್, ಉಪಾಧ್ಯಕ್ಷ ರುಕ್ಮಯ್ಯ ಗೌಡ, ಸದಸ್ಯರಾದ ಶಾಬಾ, ಉಮ್ಮರ್ ಫಾರೂಕ್, ನಜೀರ್, ಪಿಡಿಓ ಆಶಾ, ಕಾರ್ಯದರ್ಶಿ ಸುರೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.