ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ.೪೧.೬೮ ಲಕ್ಷ ಲಾಭ, ೧೩.೫೦% ಡಿವಿಡೆಂಡ್, ೯೯.೨೦% ಸಾಲ ವಸೂಲಾತಿ

ಪುತ್ತೂರು; ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ.೮೪,೪೨,೧೯,೯೬೧.೨೨ ವ್ಯವಹಾರ ನಡೆಸಿ ರೂ.೪೧,೬೮,೯೦೩.೬೦ ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.೧೩.೫೦ ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎ.ಎಂ ಪ್ರಕಾಶ್ಚಂದ್ರ ಆಳ್ವ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ನ.೭ರಂದು ಬೆಳಿಯೂರುಕಟ್ಟೆ ಹಿ.ಪ್ರಾ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದಲ್ಲಿ `ಎ’ ತರಗತಿ ಸದಸ್ಯರಿಂದ ರೂ.೧,೭೩,೩೫,೦೩೦, `ಸಿ’ ತರಗತಿ ಸದಸ್ಯರಿಂದ ರೂ.೪೩,೦೧೦ ಹಾಗೂ `ಡಿ’ ತರಗತಿ ಸದಸ್ಯರಿಂದ ೧,೧೦೦ ಪಾಲು ಬಂಡವಾಳ ಹೊಂದಿರುತ್ತದೆ. ರೂ.೬,೩೪,೭೧,೫೫೪.೫೨ ವಿವಿಧ ರೂಪದ ಠೇವಣಿ ಹೊಂದಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ರೂ.೧೨,೫೨,೫೯,೧೭೭ ಸಾಲ ಪಡೆದುಕೊಂಡಿದೆ. ರೂ.೧೬,೪೧,೬೩,೮೦೬ ವಿವಿಧ ರೂಪದ ಸಾಲ ವಿತರಿಸಲಾಗಿದ್ದು ರೂ.೧೫,೮೩,೮೬,೪೩೪ ಸಾಲ ಹೊರಬಾಕಿಯಿರುತ್ತದೆ. ರೂ.೧೩,೨೯,೦೫೭ ಸುಸ್ತಿ ಸಾಲವಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.೯೯.೨೦ ಸಾಧನೆ ಮಾಡಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘ ಗಳಿಸಿದ ನಿವ್ವಳ ಲಾಭವನ್ನು ಉಪನಿಬಂಧನೆಯಂತೆ ವಿಂಗಡಣೆ ಮಾಡಲಾಗಿದೆ ಎಂದ ಅವರು ಗ್ರಾಮದ ಜನತೆಗೆ ಕಂದಾಯ ಇಲಾಖೆಯಿಂದ ಶೀಘ್ರವಾಗಿ ಸೇವೆ ದೊರೆಯುವ ನಿಟ್ಟಿನಲ್ಲಿ ಗ್ರಾಮಕರಣಿಕರ ಕಚೇರಿಗೆ ಲ್ಯಾಪ್‌ಟಾಪ್‌ನ್ನು ಸಹಕಾರಿ ಸಂಘದಿಂದ ಕೊಡುಗೆಯಾಗಿ ನೀಡಲಾಗಿದೆ ಎಂದು ಹೇಳಿದರು.

ಉಜ್ರುಪಾದೆ ಶಾಖೆಗೆ ಜಾಗ ಖರೀದಿ- ಬ್ಯಾಂಕಿಂಗ್ ವ್ಯವಹಾರ ವಿಸ್ತರಣೆ;
ಉಜ್ರುಪಾದೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ಶಾಖೆಗೆ ಸ್ವಂತ ಕಟ್ಟಡ ಹಾಗೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲು ಶಾಖೆಯ ಸಮೀಪದಲ್ಲಿ ಕಟ್ಟಡವಿರುವ ೧೫ ಸೆಂಟ್ಸ್ ಜಾಗವನ್ನು ಖರೀದಿಸಿ ಅಲ್ಲಿ ಪಡಿತರ ಸಾಮಾಗ್ರಿಗಳ ಜೊತೆಗೆ ಬ್ಯಾಂಕಿಂಗ್ ವ್ಯವಹಾರವನ್ನು ಶಾಖೆಗೆ ವಿಸ್ತರಿಸಲಾಗುವುದು. ಸದಸ್ಯರ ಬೇಡಿಕೆಯಂತೆ ಗೃಹ ನಿರ್ಮಾಣ, ಕಟ್ಟಡ ಮತ್ತು ಇತರ ಆಸ್ತಿಗಳ ಆದಾರದ ಸಾಲವನ್ನು ರೂ.೧೦ ಲಕ್ಷದಿಂದ ಗರೀಷ್ಠ ರೂ.೨೫ಲಕ್ಷಕ್ಕೆ ಏರಿಕೆ, ವಾಹನ ಹಾಗೂ ಯಂತ್ರೋಪಕರಣಗಳ ಸಾಲವನ್ನು ರೂ. ೫ಲಕ್ಷದಿಂದ ರೂ.೧೦ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸದಸ್ಯನ ಒಟ್ಟು ಸಾಲವನ್ನು ರೂ.೪೦ ಲಕ್ಷಕ್ಕೆ ಮಿತಿಗೊಳಿಸಲಾಗಿದ್ದು, ಇತರ ಸಾಲಗಳಿಗೆ ಉತ್ಪತ್ತಿ ಈಡಿನ ಮತ್ತು ಚಿನ್ನಾಭರಣ ಈಡಿನ ಸಾಲಗಳು ಅನ್ವಯವಾಗುವುದಿಲ್ಲ. ಗೃಹ, ಕಟ್ಟಡ ಸಾಲ ಮರುಪಾವತಿಗೆ ೨೦ ವರ್ಷ, ಹೊಸ ವಾಹನ ಸಾಲ ಮರುಪಾವತಿಗೆ ೫ ವರ್ಷ ಹಾಗೂ ಹಳೆ ವಾಹನ ಸಾಲ ಮರು ಪಾವತಿಗೆ ೩ ವರ್ಷ ಅವಧಿಯನ್ನು ನಿಗದಿಗೊಳಿಸಲಾಗಿದೆ ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ತಿಳಿಸಿದರು.

ಸುಸಜ್ಜಿತ ಕೇಂದ್ರ ಕಚೇರಿ:
ನೂತನ ಯೋಜನೆಗಳಿಗೆ ಮುನ್ನ ಕೇಂದ್ರ ಕಚೇರಿಯ ಕಟ್ಟಡದ ದುರಸ್ಥಿಕಾರ್ಯವನ್ನು ಆಧ್ಯತೆಯಲ್ಲಿ ಮಾಡುವಂತೆ ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕೇಂದ್ರ ಕಚೇರಿ ಕಟ್ಟಡವನ್ನು ದುರಸ್ಥಿಗೊಳಿಸಲಾಗುವುದು. ಅಲ್ಲದೆ ಕೇಂದ್ರ ಕಚೇರಿ ಕಟ್ಟಡವಿರುವ ಜಾಗದ ದಾಖಲೆಯಲ್ಲಿ ಕೆಲaವೊಂದು ನ್ಯೂನ್ಯತೆಗಳಿವೆ ಎಂದರು. ಕಟ್ಟಡ ನಿವೇಶನ ಹಿಂದಿನ ಅಧ್ಯಕ್ಷರ ಹೆಸರಿನಲ್ಲಿ ದಾಖಲಾಗಿದ್ದು, ಅವರು ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ಸದಸ್ಯ ಶರೀಪ್ ಆರೋಪಿಸಿದರು. ಅದು ದುರುಪಯೋಗ ಮಾಡಿರುವುದಲ್ಲ. ಅಂದಿನ ನಿಯಮಕ್ಕೆ ಸರಿಯಾಗಿ ದಾಖಲೆಯಲ್ಲಿ ಅಧ್ಯಕ್ಷರ ಹೆಸರಿನಲ್ಲಿ ದಾಖಲಿಸಲಾಗಿದೆ. ದುರುಪಯೋಗ ಮಾಡಿರುದಾಗಿ ಪದ ಬಳಕೆ ಮಾಡಿರುವುದನ್ನು ಖಂಡಿಸುವುದಾಗಿ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದರು. ಇದೇ ವಿಚಾರದಲ್ಲಿ ಚರ್ಚೆಗಳು ನಡೆಯಿತು. ಜಾಗದ ದಾಖಲೆಯನ್ನು ಸರಿಪಡಿಕೊಳ್ಳುವ ಕಾರ್ಯಗಳು ಪ್ರಗತಿಯಲ್ಲಿದೆ. ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಕೇಂದ್ರ ಕಚೇರಿಗೂ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ರೈಯವರು ಭರವಸೆ ನೀಡಿದರು.

ಬೆಳೆ ವಿಮೆ ಗೊಂದಲ ನಿವಾರಿಸಿ:
ಸದಸ್ಯ ಶ್ರೀಕೃಷ್ಣ ಭಟ್ ಮಾತನಾಡಿ, ರೈತರಿಗೆ ನೀಡಲಾಗುವು ಬೆಳೆ ವಿಮೆ ಯೋಜನೆಯ ಕುರಿತು ಜನರಲ್ಲಿ ಗೊಂದಲವಿದೆ. ಈ ಯೋಜನೆಯಲ್ಲಿ ಯಾವ ಯಾವ ಬೆಳೆಗಳು ದಾಖಲಾಗಿದೆ ಎಂದು ಜನರಿಗೆ ಮಾಹಿತಿಯಿಲ್ಲ. ಹೀಗಾಗಿ ಈ ಯೋಜನೆಯಿಂದ ಸಾಕಷ್ಟು ರೈತರು ವಂಚಿತರಾಗುತ್ತಿದ್ದಾರೆ. ಹೀಗಾಗಿ ಬೆಳೆ ವಿಮೆ ಪಾವತಿಗೆ ಸಂಬಂಧಿಸಿ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ, ಅದರಲ್ಲಿ ಗ್ರಾಮದ ಪ್ರತಿಯೊಬ್ಬ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಸಿಬಂದಯೊರ್ವನ್ನು ನೇಮಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಮುಂದಿನ ದಿನಗಳನ್ನು ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯಿಂದ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ತಾಲೂಕು ಮೇಲ್ವಿಚಾರಕಿ ಪ್ರೀತಿಕಾ ಮಾಹಿತಿ ನೀಡಿದರು. ಸದಸ್ಯರಾದ ರಾಮ ಭಟ್ ಹಸಂತಡ್ಕ, ಗೌರಿಶಂಕರ ರೈ, ಚಂದ್ರಹಾಸ ರೈ, ಮುರಳಿಕೃಷ್ಣ ಹಸಂತಡ್ಕ ಮೊದಲಾದವರು ಸಲಹೆ,ಸೂಚನೆಗಳನ್ನು ನೀಡಿದರು.

ಉಪಾಧ್ಯಕ್ಷ ಸತೀಶ್ ಗೌಡ, ನಿರ್ದೇಶಕರಾದ ಎ.ಎಂ ಪ್ರವೀಣ್‌ಚಂದ್ರ ಆಳ್ವ, ನವೀನ್ ಕರ್ಕೇರಾ, ಸುರೇಶ್ ಎನ್., ಪ್ರಮೋದ್ ಪಿ., ವಿನಯ, ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೀಪಾ ಪ್ರಾರ್ಥಿಸಿದರು. ಅಧ್ಯಕ್ಷ ಎ.ಎಂ ಪ್ರವೀಣ್ ಚಂದ್ರ ಆಳ್ವ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ವರದಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.