ಮಾಣಿ ಬಿಲ್ಲವ ಸಂಘದಲ್ಲಿ ಗುರುಪೂಜೆ, ವಾರ್ಷಿಕ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಸ್ತೆ ಅಗಲೀಕರಣಕ್ಕಾಗಿ ಸಭಾಂಗಣ ತೆರವು, ಬದಲಿ ನಿವೇಶನ ಖರೀದಿಗೆ ಚಿಂತನೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಅಗಲೀಕರಣ ಯೋಜನೆಯನ್ವಯ ಪ್ರಸ್ತುತ ಇರುವ ಶ್ರೀ ನಾರಾಯಣ ಗುರು ಸಭಾಂಗಣವನ್ನು ತೆರವುಗೊಳಿಸಬೇಕಾಗಿದ್ದು, ಸಂಘಕ್ಕೆ ಹೊಸದಾಗಿ ನಿವೇಶನ ಖರೀದಿಯ ಪ್ರಕ್ರಿಯೆಯ ಜೊತೆಗೆ ಹೊಸ ಸಭಾಭವನದ ನಿರ್ಮಾಣಕ್ಕಾಗಿ ಎಲ್ಲರು ಸಹಕಾರ ನೀಡುವ ಕುರಿತು ಮಾಣಿ ಬಿಲ್ಲವ ಸಂಘದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪದಾಧಿಕಾರಿಗಳು ವಿನಂತಿಸಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೬೭ನೇ ಜನ್ಮ ದಿನಾಚರಣೆಯ ನಿಮಿತ್ತ ಗುರುಪೂಜೆ ಹಾಗೂ ಸಂಘದ ೨೭ ನೇ ವಾರ್ಷಿಕ ಮಹಾಸಭೆಯು ನ.೭ರಂದು ಮಾಣಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆಸಲಾಯಿತು. ಭಜನಾ ಸಂಕೀರ್ತನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಾಯಿ ಶಾಂತಿ ಮಣಿನಾಲ್ಕೂರು ಹಾಗೂ ಸುರೇಶ್ ಶಾಂತಿ ಮಿತ್ತೂರು ಇವರುಗಳು ಗುರುಪೂಜೆಯನ್ನು ನೆರವೇರಿಸಿಕೊಟ್ಟರು. ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ಹಿರ್ತಡ್ಕ ಮಾತನಾಡಿ, ” ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಅಗಲೀಕರಣ ಯೋಜನೆಯನ್ವಯ ಪ್ರಸ್ತುತ ಇರುವ ಸಭಾಂಗಣವನ್ನು ನಾವು ತೆರವುಗೊಳಿಸಬೇಕಾಗಿದ್ದು, ಸಂಘಕ್ಕೆ ಹೊಸದಾಗಿ ನಿವೇಶನ ಖರೀದಿಯ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹೊಸ ಸಭಾಭವನದ ನಿರ್ಮಾಣದ ಅವಶ್ಯಕತೆಯಿದ್ದು ನಾವೆಲ್ಲರೂ ಸಹಕರಿಸೋಣ ” ಎಂದು ನುಡಿದರು.

ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ಮಂಜಲಹಿತ್ಲು, ಉಪಾಧ್ಯಕ್ಷ ಸೋಮಪ್ಪ ಪೂಜಾರಿ ಮಾದೇಲು ಸಂದರ್ಭೋಚಿತವಾಗಿ ಮಾತನಾಡಿದರು. ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸುರೇಶ್ ಸೂರ್ಯ,ಇಡ್ಕಿದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ರಮೇಶ್ ಪೂಜಾರಿ ಮುಜಲ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ರಾಜೇಶ್ ಪೂಜಾರಿ ಬಾಬನಕಟ್ಟೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಭಾರತಿ ಜನಾರ್ದನ, ಯುವವಾಹಿನಿ, ಮಾಣಿ ಘಟಕದ ಅಧ್ಯಕ್ಷ ಪ್ರಶಾಂತ್ ಅನಂತಾಡಿ, ಕಾರ್ಯಕಾರಿ ಸಮಿತಿಯ ಮಾರಪ್ಪ ಸುವರ್ಣ ಪೇರಮೊಗರು, ತನಿಯಪ್ಪ ಪೂಜಾರಿ ಹೊಸಮನೆ, ಜಯಂತ ಪೂಜಾರಿ ಪಂಜುರ್ಲಿಗುಡ್ಡೆ, ಹರೀಶ್ ಪೂಜಾರಿ, ಬಾಕಿಲ, ನಾಗೇಶ್ ಪೂಜಾರಿ ಕೊಂಕಣಪದವು ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗುರುಪ್ರಸಾದ್ ಬಲ್ಯ, ಭಜನಾ ಸಮಿತಿಯ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷರುಗಳಾದ ಜಯಂತಿ ವಿ.ಪೂಜಾರಿ, ರೋಹಿಣಿ ಶ್ರೀನಿವಾಸ್, ಲಕ್ಷ್ಮಿ ಗುಡ್ಡಕೋಡಿ ಸೇರಿದಂತೆ ಸಂಘ ಹಾಗೂ ಯುವವಾಹಿನಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭಾಭವನದ ವ್ಯವಸ್ಥಾಪಕರಾದ ಜನಾರ್ದನ ಪೂಜಾರಿ ಕೊಡಂಗೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.