ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಉಚಿತ ರೋಗ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

  • ಸೂಕ್ತ ಆರೋಗ್ಯ ತಪಾಸಣೆಯಿಂದ ರೋಗ ಬರದಂತೆ ತಡೆಗಟ್ಟಿ-ಡಾ.ದೀಪಕ್ ರೈ

ಪುತ್ತೂರು: ಕ್ಯಾನ್ಸರ್ ರೋಗ ಬರುವುದು ಹವ್ಯಾಸಗಳಿಂದಲ್ಲ ಅಥವಾ ಜೀವನಶೈಲಿಯಿಂದಲ್ಲ. ಕ್ಯಾನ್ಸರ್ ರೋಗ ಯಾರಿಗೂ ಬರಬಹುದು. ದೇಹದಲ್ಲಿ ಯಾವುದೇ ಗೆಡ್ಡೆ ಅಥವಾ ಗುಳ್ಳೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಡಯೋಗ್ನೋಸ್ ಮಾಡುವ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ರೋಗವು ಉಲ್ಬಣವಾಗದಂತೆ ತಡೆಗಟ್ಟಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರು ಹೇಳಿದರು.

ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾದಳ ಹಾಗೂ ಯೇನಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ನ.೭ ರಂದು ಅಕ್ಷಯ ಕಾಲೇಜಿನಲ್ಲಿ ಜರಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಯಸ್ಸು ೪೦ ಕಳೆದೊಡನೆ ಕೆಲವರಿಗೆ ಕ್ಯಾನ್ಸರ್ ರೋಗದ ಲಕ್ಷಣಗಳು ಕಂಡು ಬರಬಹುದು. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಎಂಬುದು ಭಾರತದಲ್ಲಿ ಜಾಸ್ತಿಯಾಗಿ ಕಂಡು ಬಂದಿರುವುದಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಕೆಲವೊಮ್ಮೆ ರಕ್ತಸಂಬಂಧಿಗಳಲ್ಲಿ ಇಂತಹ ಲಕ್ಷಣಗಳು ಇದ್ದಲ್ಲಿ ಬರುವ ಸಂಭವ ಕೂಡ ಜಾಸ್ತಿ ಇರುತ್ತದೆ. ಭಾರತದಲ್ಲಿ ಪ್ರಾರಂಭಿಕ ಹಂತದಲ್ಲಿ ಕಂಡುಬಂದ ಟಿಬಿ, ಸಿಡುಬು, ಪೋಲಿಯೋ, ಮಲೇರಿಯಾ ಮುಂತಾದ ರೋಗಗಳು ಆಯಾ ಕಾಲದಲ್ಲಿ ನಡೆಸಲಾದ ಜಾಗೃತಿ ಕಾರ್ಯಕ್ರಮಗಳಿಂದ ಬಹಳಷ್ಟು ನಿಯಂತ್ರಣಕ್ಕೆ ಬಂದಿವೆ. ಆದ್ದರಿಂದ ಸಮಾಜವು ಸುಸ್ಥಿತಿ ಹಂತದಲ್ಲಿರಬೇಕಾದರೆ ಉತ್ತಮ ಆರೋಗ್ಯ ಮತ್ತು ಉತ್ತಮ ಶಿಕ್ಷಣದ ಅರಿವು ಪ್ರಮುಖವಾಗಿ ಬೇಕಾಗಿರುತ್ತದೆ ಎಂದರು.

ಗೌರವ ಅತಿಥಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಕ್ಯಾನ್ಸರ್ ಎಂಬ ಮಾರಕ ರೋಗವು ಮಾನವನಲ್ಲಿ ಬದುಕುಳಿಯಲು ಸಾಧ್ಯವೇ ಇಲ್ಲ ಎಂಬ ಕಾಲವಿತ್ತು. ಆದರೆ ಈಗ ಕ್ಯಾನ್ಸರ್ ರೋಗದ ಕುರಿತು ಅನೇಕ ಆಸ್ಪತ್ರೆಗಳು ಹಾಗೂ ಸಂಘ-ಸಂಸ್ಥೆಗಳು ಕ್ಯಾನ್ಸರ್ ರೋಗದ ಕುರಿತು ಮಾನವನಲ್ಲಿ ಜಾಗೃತಿ ಮೂಡಿಸುವ ಮೂಲಕ ಜೀವ ಉಳಿಸಲಾಗುವುದು ಎಂಬ ಅಭಿಯಾನದ ಮೂಲಕ ಪ್ರಸ್ತುತ ನಿಯಂತ್ರಣದಲ್ಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾಜದ ಬಗ್ಗೆ ಉತ್ತಮ ಚಿಂತನೆಯ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಿರುವ ಉದ್ಯಮಿ ಜಯಂತ್ ನಡುಬೈಲುರವರ ಮುಂದಾಳತ್ವದಲ್ಲಿ ಅಕ್ಷಯ ಕಾಲೇಜಿನಲ್ಲಿ ಕ್ಯಾನ್ಸರ್ ರೋಗದ ಕುರಿತಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಭಗವಂತ ಮಾನವನನ್ನು ಸೃಷ್ಟಿಸುವಾಗ ಇಂತಿಷ್ಟೆ ದಿನ ಬದುಕು, ಆದರೆ ಆರೋಗ್ಯಪೂರ್ಣವಾಗಿ ಬದುಕು ಎಂಬುದಾಗಿ ಭೂಮಿಗೆ ಕಳುಹಿಸಿ ಕೊಟ್ಟಿರುತ್ತಾನೆ. ಆದರೆ ಮಾನವ ದಿನ ಕಳೆದಂತೆ ತನ್ನ ಜೀವನಶೈಲಿ, ಆಹಾರಶೈಲಿಯಲ್ಲಿ ಬದಲಾವಣೆ ಕಂಡುಕೊಂಡು ಆರೋಗ್ಯದ ಏರುಪೇರಿಗೆ ಕಾರಣನಾಗುತ್ತಾನೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಮತ್ತೊಬ್ಬರ ಕೈಯಲ್ಲಿಲ್ಲ. ಇಡೀ ವಿಶ್ವವನ್ನೇ ತತ್ತರಗೊಳಿಸಿರುವ ಕೊರೋನಾ ರೋಗದಿಂದ ಅದೆಷ್ಟೋ ಜನರು ನಮ್ಮಿಂದ ಮರೆಯಾಗಿದ್ದಾರೆ ಎಂದ ಅವರು ಅಕ್ಷಯ ಕಾಲೇಜು ಜಾಬ್ ಓರಿಯೆಂಟೆಡ್ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿದೆ. ಆರೋಗ್ಯದ ಕುರಿತಾಗಿ ನಮ್ಮ ಸಂಸ್ಥೆಯಲ್ಲಿ ಪ್ರಥಮವಾಗಿ ಯೇನಪೋಯ ವಿಶ್ವವಿದ್ಯಾಲಯದ ಜೊತೆಗೂಡಿ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಅನುಗುಣವಾಗಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ವೈಎಂಸಿಎಚ್‌ನ ಸ್ತ್ರೀರೋಗತಜ್ಞೆ ಹಾಗೂ ಸರ್ಜನ್ ಡಾ.ಮರಿಯಮ್ ಅಂಜುಮ್ ಇಫ್ತಿಕಾರ್, ಯೇನಪೋಯ ಡೆಂಟಲ್ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ಇಮ್ರಾನ್ ಪಾಷಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿ ಸ್ವರ್ಣ ಮತ್ತು ಬಳಗ ಪ್ರಾರ್ಥಿಸಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರಿಯಾ ವಂದಿಸಿದರು. ಅಕ್ಷಯ ಕಾಲೇಜಿನ ಉಪನ್ಯಾಸಕರಾದ ಲಿಖಿತಾ ಬಿ, ಭವ್ಯಶ್ರೀ, ನಿವೇದಿತಾ, ಸಹನಾ, ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರ ಪತ್ನಿ ಕಲಾವತಿ ಜಯಂತ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

ಶಿಬಿರಗಳಿಂದ ರೋಗ ತಡೆಗಟ್ಟುವಿಕೆ ಸಾಧ್ಯ…
ಆರೋಗ್ಯ ಎಂಬುದು ಜೀವನದ ಸಂಪತ್ತು. ದಿನನಿತ್ಯದ ಜಂಜಾಟದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಂತಿದ್ದರೆ ಮಾತ್ರ ಆರೋಗ್ಯ. ಕ್ಯಾನ್ಸರ್ ರೋಗವಾಗಲಿ ಅಥವಾ ಇತರ ರೋಗವಾಗಲಿ, ಜನರಿಗೆ ಪರಿಪೂರ್ಣವಾದ ಮಾಹಿತಿಯ ಕೊರತೆಯಿಂದ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಇಂತಹ ಶಿಬಿರಗಳು ನಡೆಸುವ ಉದ್ಧೇಶ ಪ್ರತಿಯೊಂದು ಕಡೆಯಲ್ಲೂ ನಡೆದು ರೋಗದ ಬಗೆಗಿನ ಮಾಹಿತಿಯು ಹಳ್ಳಿ ಹಳ್ಳಿಗೂ ತಲುಪುವಂತಾಗಬೇಕು ಮತ್ತು ಕ್ಯಾನ್ಸರ್ ರೋಗವನ್ನು ತಡೆಗಟ್ಟುವುದಾಗಿದೆ. ಯೇನಪೋಯ ವಿಶ್ವವಿದ್ಯಾನಿಲಯವು ಇಲ್ಲಿತನಕ ವಿವಿಧ ಕಾಲೇಜಿನಿಂದ ಸುಮಾರು ೧೩೫೦೦ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ -ಡಾ.ಅಶ್ವಿನಿ ಶೆಟ್ಟಿ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ, ಯೇನಪೋಯ ಪರಿಗಣಿತ ವಿಶ್ವವಿದ್ಯಾನಿಲಯ

೨೦೦ಕ್ಕೂ ಮಿಕ್ಕಿ ಫಲಾನುಭವಿಗಳು..
ಯೇನಪೋಯ ಪರಿಗಣಿತ ವಿಶ್ವವಿದ್ಯಾಲಯದ ಮೂವರು ವೈದ್ಯರು, ೧೩ ಮಂದಿ ಶುಶ್ರೂಷಕಿಯರು, ನಾಲ್ವರು ವಾಹನ ಚಾಲಕರು, ಓರ್ವ ಪಿಆರ್‌ಒರವರು ಅಕ್ಷಯ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿ ಜೊತೆಗೂಡಿ ಉಚಿತ ಆರೋಗ್ಯ ತಪಾಸಣೆಗೆ ಸಹಕರಿಸಿದರು. ಬಾಯಿ, ಗರ್ಭಕೋಶ, ಸ್ತನ ಕ್ಯಾನ್ಸರ್ ಜೊತೆಗೆ ಮಧುಮೇಹ, ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ಈ ಸಂದರ್ಭದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಸುಮಾರು ೨೦೦ಕ್ಕೂ ಮಿಕ್ಕಿ ಸ್ಥಳೀಯರು, ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.