ನ.9: ರೋಟರಿ ಸೆಂಟ್ರಲ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ರೋಟರಿ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ನ.9ರಂದು ಅಧಿಕೃತ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ ಬಪ್ಪಳಿಗೆ-ಬೈಪಾಸ್ ಆಶ್ಮಿ ಕಂಫರ್ಟ್ ಬಳಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರನ್ನು ಸ್ವಾಗತಿಸುವುದು, ಬಳಿಕ ಉಪಹಾರ, ಸಾಮೆತ್ತಡ್ಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮ, ಕ್ವೀನ್ ಗ್ರೀನ್ ಸ್ಕೂಲ್ ಕ್ಯಾಮಪಸ್ ಉದ್ಘಾಟನೆ, ಓಪನ್ ವೇದಿಕೆಗೆ ಶಂಕು ಸ್ಥಾಪನೆ, ಕೈತೋಟಗಳ ಉದ್ಘಾಟನೆ, ಸಣ್ಣ ಸಭಾ ಕಾರ್ಯಕ್ರಮ, ಅಪರಾಹ್ನ ಬೈಪಾಸ್-ತೆಂಕಿಲ ಎನ್.ಎಚ್ ಎಂಟರ್‌ಪ್ರೈಸಸ್ ಬಳಿ ಡ್ರಾಪ್ ಯುವರ್ ಎಂಪ್ಟಿ ಪ್ಲಾಸ್ಟಿಕ್ ಬಾಟಲ್ ಕಾರ್ಯಕ್ರಮ ಉದ್ಘಾಟನೆ, ಆಶ್ಮಿ ಬಳಿ ಡ್ರಾಪ್ ಯುವರ್ ಎಂಪ್ಟಿ ಪ್ಲಾಸ್ಟಿಕ್ ಬಾಟಲ್ ಕಾರ್ಯಕ್ರಮ ಉದ್ಘಾಟನೆ, ಆಶ್ಮಿಯಲ್ಲಿ ಹೊಸ ಅಕ್ಕಿ ಊಟ, ಕ್ಲೋಸ್ ಡೋರ್ ಮೀಟಿಂಗ್, ಕ್ಲಬ್ ಅಸೆಂಬ್ಲಿ ಕಾಯಕ್ರಮಗಳಲ್ಲಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರು ಭಾಗವಹಿಸಲಿದ್ದಾರೆ.

ಸಂಜೆ ಬಪ್ಪಳಿಗೆ-ಬೈಪಾಸ್ ಇಲ್ಲಿನ ಆಶ್ಮಿ ಕಂಫರ್ಟ್‌ನಲ್ಲಿ ಸಮಾರಂಭ ಜರಗಲಿದ್ದು, ಈ ಸಮಾರಂಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ, ವಲಯ ಕಾರ್ಯದರ್ಶಿ ಅಬ್ಬಾಸ್ ಮುರ, ವಲಯ ಸೇನಾನಿ ಜಯಂತ ಶೆಟ್ಟಿ ಕೆ.ರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ ನಾಕ್, ಕಾರ್ಯದರ್ಶಿ ಡಾ|ರಾಜೇಶ್ ಬೆಜ್ಜಂಗಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.