ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ರೂ.8.20 ಲಕ್ಷ ಲಾಭ, 25% ಡಿವಿಡೆಂಡ್, 82 ಪೈಸೆ ಬೋನಸ್

ಪುತ್ತೂರು; ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘವು 2020-21ನೇ ಸಾಲಿನಲ್ಲಿ ರೂ.8,20,480.29 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 82 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ನ.9ರಂದು ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ವರ್ಷದಲ್ಲಿ 169 ಮಂದಿ ಸದಸ್ಯರಿದ್ದು ರೂ.38,330 ಪಾಲು ಬಂಡವಾಳವಿದೆ. ಒಟ್ಟು 4,74,404 ಲೀಟರ್‌ ಹಾಲು ಖರೀದಿಸಿದೆ. ಇದರಲ್ಲಿ2,893 ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಲವಣ ಮಿಶ್ರಣ ಮಾರಾಟದಿಂದ ರೂ.13,40,598.46 ಹಾಗೂ ಇತರ ಮೂಲಗಳಿಂದ 1,24,463.91 ಆದಾಯ ಬಂದಿರುತ್ತದೆ. ಲಾಭಾಂಶವನ್ನು ಉಪನಿಬಂದನೆಯಂತೆ‌ ವಿಂಗಡಿಸಲಾಗಿದೆ ಎಂದರು.

 

ಸನ್ಮಾನ;
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಜಯಗುರು ಆಚಾರ್ ಹಿಂದಾರ್, ಕೃಷ್ಣರಾಜ ವೈಲಾಯ, ಇಡಬೆಟ್ಟು, ಅನಿಲ್ ಕನ್ನರ್ ನೂಜಿ, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಸಿಂಚನಾ ಲಕ್ಷ್ಮೀ ಹಾಗೂ ಎಸ್.ಎಸ್.ಎಲ್.ಸಿ 611 ಅಂಕ ಪಡೆದ ಹಿತಾಶ್ರೀ ಯವರನ್ನು ಸನ್ಮಾನಿಸಲಾಯಿತು.

 

ಶೀಥಲೀಕರಣ ಘಟಕ ತೆರೆಯಲು ಆಗ್ರಹ:
ಹಾಲಿನ ಗುಣಮಟ್ಟ ಕಾಯ್ದುಕೊಂಡು ಉತ್ಪಾದಕರಿಗೆ ಉತ್ತಮ ದರವನ್ನು ಪಡೆಯುವ ನಿಟ್ಟಿನಲ್ಲಿ ಸಂಘದ ವತಿಯಿಂದ ಶೀಥಲೀಕರಣ ಘಟಕ ತೆರೆಯುವಂತೆ ಸದಸ್ಯ ಜಯಗುರು ಆಚಾರ್ ಒತ್ತಾಯಿಸಿದರು. ಸಂಘದ ದಾಖಲೆಯಲ್ಲಿ ತಾಂತ್ರಿಕ ತೊಂದರೆಗಳಿದ್ದು ಅವುಗಳನ್ನು ಸರಿಪಡಿಸಿಕೊಂಡು ಮುಂದಿನ‌ ದಿನಗಳಲ್ಲಿ ತೆರೆಯುವುದಾಗಿ ಅಧ್ಯಕ್ಷ ಶ್ರೀಕಾಂತ್ ಆಚಾರ್ ಭರವಸೆ ನೀಡಿದರು. ಸಂಘಕ್ಕೆ ಅತ್ಯಧಿಕ ಹಾಲನ್ನು ನೀಡುವ ಉತ್ಪಾದಕರಿಗೆ ಸಂಘದಲ್ಲಿ‌ ಸದಸ್ಯತ್ವ ನೀಡಬೇಕು. ಸಂಘ ಮುಂದಿನ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯುವುದನ್ನು ಸೇರಿಸಿಕೊಳ್ಳುವಂತೆ ರಮೇಶ್ ಪಜಿಮಣ್ಣು ಒತ್ತಾಯಿಸಿದರು.

 

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ರಮೇಶ್ ಪಜಿಮಣ್ಣು, ಜಯಗುರು ಆಚಾರ್, ಉಮೇಶ್ ಅಂಬಟ, ಕೃಷ್ಣರಾಜ ವೈಲಾಯ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ನಿರ್ದೇಶಕರಾದ ಉದಯ ಕುಮಾರ್, ಅನಿಲ್ ಕುಮಾರ್, ರಮೇಶ್ ಜಿ., ಸೇಸಪ್ಪ ರೈ, ರಂಜಿತ್ ಕೆ., ದೇವಕಿ ಎಚ್., ಚೇತನಾ, ಶಾರದಾ ಬಿ. ಹಾಗೂ ಗಿರಿಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಉಮೇಶ್ ಜಿ. ಸ್ವಾಗತಿಸಿದರು. ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ಜಯಾನಂದ ಆಳ್ವ ವಂದಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.