ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘದ ಗಣನೀಯ ಸಾಧನೆಗೆ ಸತತ 7ನೇ ಬಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಿಶೇಷ ಸಾಧನೆಯ ಮೂಲಕ ಈ ಬಾರಿಯೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ೨೦೨೦-೨೧ನೇ ಸಾಲಿನ ಸಂಘದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಕೊಡಲ್ಪಡುವ ಈ ಪ್ರಶಸ್ತಿಗೆ ಸಂಘವು ಸತತ ೭ನೇ ಬಾರಿ ಆಯ್ಕೆಯಾಗಿದೆ. ೨೦೨೦-೨೧ನೇ ಸಾಲಿನಲ್ಲಿ ಕೊರೋನಾ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿಯೂ ಸಂಘದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಭಾಜನವಾಗಿದೆ.

ಸಂಘದ ಕಾರ್ಯ ವೈಖರಿ: ಸುದೀರ್ಘ ೯೭ವರ್ಷಗಳ ಇತಿಹಾಸ ಹೊಂದಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೃಷಿಕ ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಾ ಲೆಕ್ಕ ಪರಿಶೋಧನಯಲ್ಲಿ ಸತತ ೭ ವರ್ಷಗಳಿಂದ `ಎ’ ತರಗತಿಯಲ್ಲಿ ಮುನ್ನಡೆದಿದ್ದು, ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ ೭ ವರ್ಷಗಳಿಂದ ಪ್ರಶಸ್ತಿ ಸ್ವೀಕರಿಸಿಕೊಂಡು ಸಹಕಾರಿ ಬಂಧುಗಳ ಪ್ರಶಂಸೆಗೆ ಪಾತ್ರವಾಗಿ ಅಭಿವೃದ್ಧಿಯತ್ತ ಸಾಗಿ ಬಂದಿದೆ. ಸಂಘದಲ್ಲಿ ಮಾರ್ಚ್ ೨೦೨೧ರ ವರ್ಷಾಂತ್ಯಕ್ಕೆ ೨೬೪೦ `ಎ’ ತರಗತಿ ಸದಸ್ಯರಿದ್ದು ರೂ ೨,೫೭ಕೋಟಿ ಪಾಲು ಬಂಡವಾಳ, ನಿಧಿಗಳು ರೂ ೧.೬೦ ಕೋಟಿ, ದ.ಕ ಜಿಲ್ಲಾ ಬ್ಯಾಂಕಿನಿಂದ ಪಡೆದ ಸಾಲ ರೂ ೨೧.೬೬ ಕೋಟಿ, ಠೇವಣಿಗಳು ಒಟ್ಟು ರೂ ೧೨.೪೬ಕೋಟಿ ಹೊಂದಿರುತ್ತದೆ. ಸಂಘದ ಸದಸ್ಯರಿಗೆ ಬೆಳೆಸಾಲ, ದೀರ್ಘಾವಧಿ, ಕೃಷಿಸಾಲ, ಕೃಷಿಯೇತರ ಸಾಲ, ಆಭರಣ ಈಡಿನ ಸಾಲ, ಠೇವಣಿ ಸಾಲ ನೀಡುತ್ತಿದ್ದು ಒಟ್ಟು ೨೩.೭೯ ಕೋಟಿ ಸಾಲ ಹೊರಬಾಕಿ ಹೊಂದಿರುತ್ತದೆ. ವಾರ್ಷಿಕ ೧೫೫.೫೮ ಕೋಟಿಯಷ್ಟು ವ್ಯವಹಾರ ನಡೆಸಿ ರೂ ೩೫,೮೦ಲಕ್ಷ ನಿವ್ವಳ ಲಾಭಗಳಿಸಿ, ಲೆಕ್ಕ ಪರಿಶೋಧನಾ ವರದಿಯಲ್ಲಿ `ಎ’ ತರಗತಿಯಲ್ಲಿ ಮುನ್ನಡೆದಿದೆ.

 

ಸಂಘದ ಕಾರ್ಯವ್ಯಾಪ್ತಿ: ಸಂಘದ ಕಾರ್ಯಕ್ಷೇತ್ರದ ೩ ಗ್ರಾಮಗಳಾದ ಕಾಣಿಯೂರು, ಚಾರ್ವಾಕ, ದೋಳ್ಪಾಡಿಗಳಲ್ಲಿ ಸ್ವಂತ ನಿವೇಶನದಲ್ಲಿ ಕಛೇರಿ ಹೊಂದಿದ್ದು, ೩ ಕಛೇರಿಗಳಲ್ಲಿ ಗಣಕೀಕರಣಗೊಳಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಕೃಷಿಕ ಸದಸ್ಯರಿಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಪಡಿತರ ಮಾರಾಟ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ. ಸಂಘದ ಆಡಳಿತ ಮಂಡಳಿಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ೧೨ ಮಂದಿ ಸದಸ್ಯರಿದ್ದು, ಆನಂದ ಗೌಡ ಮೇಲ್ಮನೆ ಅಧ್ಯಕ್ಷರಾಗಿ, ಮುರಳೀಧರ ಪುಣ್ಚತ್ತಾರು ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಧರ್ಮೇಂದ್ರ ಕಟ್ಟತ್ತಾರು, ಆನಂತ್ ಕುಮಾರ್ ಬೈಲಂಗಡಿ, ಹರೀಶ ಗೌಡ ಅಂಬುಲ, ವಿಶ್ವನಾಥ ಗೌಡ ಮರಕ್ಕಡ, ಜಯರಾಮ ಕೆಳಗಿನಕೇರಿ, ವಿಶ್ವನಾಥ ಕೂಡಿಗೆ, ಕಮಲ ಮುದುವ, ರಮೇಶ ಉಪ್ಪಡ್ಕ, ರತ್ನಾವತಿ ಮುದುವ ಹಾಗೂ ವಲಯ ಮೇಲ್ವಿಚಾರಕಾದ ವಸಂತ್ ಎಸ್ ಇವರುಗಳು ಕಾರ್ಯನಿರ್ವಹಿಸುತ್ತಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಶೋಕ್ ಗೌಡ ಹಾಗೂ ಸಿಬ್ಬಂದಿಗಳು ಸಂಘದ ಶ್ರೇಯೋಭಿವೃದ್ಧಿಗೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ಸತತ ೭ ವರ್ಷಗಳಿಂದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿರುವ ಸಂಘದ ಅಪೂರ್ವ ಕಾರ್ಯವೈಖರಿಗೆ ಸಂದಿವೆ ಹಲವು ಪ್ರಶಸ್ತಿಗಳು..: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಪೂರ್ವ ಕಾರ್ಯವೈಖರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ೨೦೧೪-೧೫ ರಲ್ಲಿ ಶೇಕಡಾ ೧೦೦ ವಸೂಲಾತಿ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ,೨೦೧೫-೧೬ರಲ್ಲಿ ಶೇಕಡಾ ೧೦೦ ಸಾಲ ವಸೂಲಾತಿ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಧನ ಪ್ರಶಸ್ತಿ, ೨೦೧೬.೧೭ರಲ್ಲಿ ಗಣನೀಯ ಸೇವೆಗೆ ದ.ಕ ಜಿಲ್ಲಾ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ, ೨೦೧೭-೧೮ ರಲ್ಲಿ ಶೇಕಡಾ ೧೦೦ಸಾಲ ವಸೂಲಾತಿಗೆ ದ.ಕ ಜಿಲ್ಲಾ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ, ೨೦೧೮-೧೯ರಲ್ಲಿ ಸಂಘದ ಉತ್ತಮ ಸಾಧನೆಗೆ ದ.ಕ ಜಿಲ್ಲಾ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ, ೨೦೧೯-೨೦ ರಲ್ಲಿ ಶೇಕಡಾ ೧೦೦ ವಸೂಲಾತಿ ಸಾಧನೆ ಗೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ, ೨೦೧೯-೨೦ ರಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ದಲ್ಲಿ ಸಂಘದ ಸಾಧನೆಗೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದೀಗ ದ.ಕ ಜಿಲ್ಲಾ ಬ್ಯಾಂಕಿನಿಂದ ಗಣನೀಯ ಸೇವೆಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸತತ ೭ ವರ್ಷಗಳಿಂದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಗಳನ್ನು ಪಡೆದುಕೊಂಡು ಸಂಘದ ಇತಿಹಾಸಕ್ಕೆ ತನ್ನದೇ ಆದ ಅಚ್ಚಳಿಯದ ಛಾಪನ್ನು ಮೂಡಿಸಿದೆ.


ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ೨೦೨೦-೨೧ರ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ. ಸಾಧನೆಗೆ ಕಾರಣಕರ್ತರಾದ, ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಸುಸಂಸ್ಕೃತಿಯನ್ನು ಬೆಳೆಸಿಕೊಂಡಿರುವ ಜವಾಬ್ಧಾರಿಯುತ ಸಂಘದ ಸರ್ವ ಸದಸ್ಯರ ಸಹಕಾರ , ದ.ಕ ಜಿಲ್ಲಾ ಬ್ಯಾಂಕಿನ ಅಧ್ಯಕ್ಷ ರು ಮತ್ತು ನಿರ್ದೇಶಕ ರು ಗಳಿಗೆ, ಬ್ಯಾಂಕ್ ನ ಅಧಿಕಾರಿಗಳಿಗೆ, ಇಲಾಖಾಧಿಕಾರಿಗಳಿಗೆ, ಮತ್ತು ನಮ್ಮ ಸಂಘದ ಸಿಬ್ಬಂದಿ ಗಳ ಪ್ರಾಮಾಣಿಕ ಸೇವೆಗೆ, ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸುತ್ತಿzವೆ – ಆನಂದ ಗೌಡ ಮೇಲ್ಮನೆ, ಅಧ್ಯಕ್ಷರು, ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘ

ನ.12ರಂದು ಪ್ರಶಸ್ತಿ ಪ್ರದಾನ
ನ.12 ರಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ನಡೆಯುವ ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರು ಪ್ರಶಸ್ತಿಯನ್ನು ವಿತರಿಸಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.