ವಿಧಾನ ಪರಿಷತ್ ಚುನಾವಣೆ: ನ.16ರಂದು ನೀತಿ ಸಂಹಿತೆ ಜಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅವಿಭಜಿತ ದ.ಕ.ಜಿಲ್ಲೆಯಲ್ಲಿ 389 ಮತಗಟ್ಟೆಗಳು 5914 ಮತದಾರರು

ಪುತ್ತೂರು:ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿನ ಎರಡು ಸ್ಥಾನದ ಪದಾವಧಿಯು ಜ.5ರಂದು ಮುಕ್ತಾಯಗೊಳ್ಳಲಿದ್ದು, ಸದ್ರಿ ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಭಾರತ ಚುನಾವಣಾ ಆಯೋಗವು ನಿರ್ದೇಶಿಸಿದ್ದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ.ನ.16ರಂದು ಅಧಿಸೂಚನೆ ಜಾರಿಯಾಗಲಿದೆ. ಈ ಕ್ಷೇತ್ರವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತದೆ.ಈ ಚುನಾವಣೆಯಲ್ಲಿ ಗ್ರಾಮ/ತಾಲೂಕು/ಜಿಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು, ಲೋಕಸಭಾ/ ರಾಜ್ಯಸಭಾ ಸದಸ್ಯರು ಹಾಗೂ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಲಿದ್ದಾರೆ.

ಚುನಾವಣಾ ವೇಳಾಪಟ್ಟಿ:
ಅಧಿಸೂಚನೆ ಹೊರಡಿಸುವ ದಿನಾಂಕ ನ.16
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ನ.23
ನಾಮಪತ್ರ ಪರಿಶೀಲನೆ ದಿನಾಂಕ ನ.24
ನಾಮಪತ್ರಗಳ ಹಿಂತೆಗೆದುಕೊಳ್ಳುವಿಕೆ ನ.26
ಮತದಾನ ದ.10: ಪೂರ್ವಾಹ್ನ 8 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರಗೆ
ಮತಗಳ ಎಣಿಕೆ ದ.14
ಚುನಾವಣೆ ಮುಗಿಯುವ ದಿನಾಂಕ 16

ನ.16ರಿಂದ ದ.16ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ, ಕೇಂದ್ರ ಅಥವಾ ರಾಜ್ಯ ಮಂತ್ರಿಗಳು(ಮುಖ್ಯಮಂತ್ರಿ ಸೇರಿದಂತೆ) ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಯಾವುದೇ ಕೌನ್ಸಿಲ್ ಕ್ಷೇತ್ರದಿಂದ ಯಾವುದೇ ದ್ವೈವಾರ್ಷಿಕ/ಉಪ-ಚುನಾವಣೆ ನಡೆಯುವ ಯಾವುದೇ ಜಿಲ್ಲೆಗಳಿಗೆ ಅಧಿಕೃತ ಭೇಟಿ ನೀಡಬಹುದು:
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಅಂಗವಾಗಿರುವ ಯಾವುದೇ ಶಿಕ್ಷಣ ಸಂಸ್ಥೆಯ ಯಾವುದೇ ಉದ್ಘಾಟನೆ/ಶಿಲಾನ್ಯಾಸವನ್ನು ಅವರು ಮಾಡಬಾರದು.ಅಧಿಕೃತ ಭೇಟಿಯನ್ನು ಚುನಾವಣಾ ಸಂಬಂಧಿತ ಕೆಲಸ/ಪ್ರವಾಸಗಳೊಂದಿಗೆ ಸಂಯೋಜಿಸಬಾರದು.ಪದವೀಧರರು/ ಶಿಕ್ಷಕರು, ಮತದಾನಕ್ಕೆ ಹೋಗುವ ಕ್ಷೇತ್ರಗಳ ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರದ ಯಾವುದೇ ಹೊಸ ಯೋಜನೆ /ಕಾರ್ಯಕ್ರಮ/ನೀತಿಯನ್ನು ಪ್ರಕಟಪಡಿಸುವಂತಿಲ್ಲ.ಚುನಾವಣಾ ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ದ್ವೈವಾರ್ಷಿಕ/ಉಪ-ಚುನಾವಣೆಗಳು ನಡೆಯುವಲ್ಲಿ ಚುನಾವಣೆ ಸಂಬಂಧಿತ ಕೆಲಸದಲ್ಲಿ ವ್ಯವಹರಿಸುವ ಜಿಲ್ಲೆಗಳ ಯಾವುದೇ ಶ್ರೇಣಿಯ, ಯಾವುದೇ ಅಧಿಕಾರಿಯು ಯಾವುದೇ ಸರ್ಕಾರದ ಕಾರ್ಯಕ್ರಮದಲ್ಲಿ ಯಾವುದೇ ಸ್ಥಳದಲ್ಲಿ ಯಾವುದೇ ಸಭೆಗೆ ಹಾಜರಾಗಲು ನಿಷೇಧಿಸಲಾಗಿದೆ ಹಾಗೂ ಚುನಾವಣೆ ನಡೆಯುತ್ತಿರುವ ಕ್ಷೇತ್ರಕ್ಕೆ ಅವರ ಖಾಸಗಿ ಭೇಟಿಯ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾಗುವ ಯಾವುದೇ ಅಧಿಕಾರಿಯನ್ನು ಸಂಬಂಧಿತ ಸೇವಾ ನಿಯಮಗಳ ಅಡಿಯಲ್ಲಿ ದುರ್ನಡತೆಯ ಅಪರಾಧಿ ಎಂದು ಪರಿಗಣಿಸಲಾಗುವುದು ಮತ್ತು ಅವರು ಪ್ರಜಾಪ್ರತಿನಿಧಿ ಕಾಯಿದೆ-1951ರ ಸೆಕ್ಷನ್ 129(1)ರಲ್ಲಿ ಉಲ್ಲೇಖಿಸಲಾದ ಅಧಿಕಾರಿಯಾಗಿದ್ದರೆ, ಅವರು ಹೆಚ್ಚುವರಿಯಾಗಿ ಆ ವಿಭಾಗದ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಲಾಗುವುದು ಮತ್ತು ಅದರ ಅಡಿಯಲ್ಲಿ ಒದಗಿಸಲಾದ ದಂಡದ ಕ್ರಮಕ್ಕೆ ಹೊಣೆಗಾರರಾಗಿದ್ದಾರೆ.

ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರದ ಮತದಾರರ ಭಾಗವಾಗಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯರನ್ನು ಯಾವುದೇ ಸಚಿವರು (ಸಚಿವರಾಗಿ ಅವರ ಸಾರಥ್ಯದಲ್ಲಿ) ಯಾವುದೇ ಸಭೆ/ವೀಡಿಯೋ ಕಾನ್ಫರೆನ್ಸ್‍ಗೆ ಕರೆಯುವಂತಿಲ್ಲ.ಸ್ಥಳೀಯ ಸಂಸ್ಥೆಗಳ ವಾಡಿಕೆಯ ಸಭೆಗಳು ಅಗತ್ಯವಿದ್ದಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿಯೊಂದಿಗೆ ನಡೆಸಬಹುದು.

ಚುನಾವಣಾ ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಯಾವುದೇ ಪೈಲಟ್ ಕಾರುಗಳು ಅಥವಾ ಇತರ ಕಾರುಗಳು ಯಾವುದೇ ಬಣ್ಣದ ಬೀಕನ್ ಲೈಟ್‍ಗಳು ಅಥವಾ ಯಾವುದೇ ರೀತಿಯ ಸೈರನ್‍ಗಳನ್ನು ಅಂಟಿಸಿರುವ ಕಾರುಗಳು ಯಾವುದೇ ಸಚಿವರು ಕ್ಷೇತ್ರಕ್ಕೆ ಅವರ ಖಾಸಗಿ ಭೇಟಿಯ ಸಮಯದಲ್ಲಿ ಬಳಸಬಾರದು.ರಾಜ್ಯ ರ್ಕಾರವು ಅವರಿಗೆ ಪ್ರವಾಸದಲ್ಲಿ ಸಶಸ್ತ್ರ ಗಾರ್ಡ್‍ಗಳ ಅಗತ್ಯವಿರುವ ಭದ್ರತೆಯನ್ನು ನೀಡಬಹುದು.

ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಯಾವುದೇ ನೀತಿ ಘೋಷಣೆ ಅಥವಾ ಕಾರ್ಯಕ್ರಮವನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಸರ್ಕಾರಿ ಇಲಾಖೆಗಳಲ್ಲಿ ಪ್ರಾರಂಭಿಸುವಂತಿಲ್ಲ.ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಾಪಾಡಲು ರಾಜ್ಯದ ಮುಖ್ಯ ಚುನಾವಣಾಧಿಕಾರಿ/ಭಾರತ ಚುನಾವಣಾ ಆಯೋಗದ ವೀಕ್ಷಕರೊಂದಿಗೆ ಸಮಾಲೋಚಿಸಿ, ಸರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಸಭೆಗಳನ್ನು ವೀಡಿಯೊಗ್ರಾಫ್ ಮಾಡಲು ಮತ್ತು ಮಂತ್ರಿಗಳು ಮತ್ತು ಇತರ ಪ್ರಮುಖ ರಾಜಕೀಯ ಪಕ್ಷಗಳ/ ಕಾರ್ಯಕರ್ತರ ಭೇಟಿಗಳನ್ನು ದಾಖಲಿಸಲು ಪ್ರತಿ ತಾಲೂಕಿಗೆ ವಿಶೇಷ ವೀಡಿಯೊ ತಂಡವನ್ನು ಜಿಲ್ಲಾಧಿಕಾರಿ/ಚುನಾವಣಾಧಿಕಾರಿ ರಚಿಸಬೇಕು. ಭಾರತ ಚುನಾವಣಾ ಆಯೋಗದ ವೀಕ್ಷಕರು ಅದೇ ದಿನದ ಸಂಜೆ ವೀಡಿಯೊ ರೆಕಾರ್ಡಿಂಗ್ ಅನ್ನು ವೀಕ್ಷಿಸಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ/ಉಲ್ಲಂಘನೆಯಾಗದಿರುವ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು.

ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರಗಳಿಂದ ಚುನಾವಣೆಯ ಸಂದರ್ಭದಲ್ಲಿ, ಮೇಲಿನ ನಿರ್ಬಂಧಗಳು ಕೇಂದ್ರ ಮತ್ತು ರಾಜ್ಯ ಮಂತ್ರಿಗಳ ಅಧಿಕೃತ ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ಸರ್ಕಾರದ ಅಧಿಕೃತ ಕಾರುಗಳ ಬಳಕೆಗೆ ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳು(ಉದಾಹರಣೆಗೆ, ಮುನ್ಸಿಪಲ್ ಕಾಪೆರ್Çರೇಷನ್‍ಗಳ ಮೇಯರ್‍ಗಳು, ಮುನ್ಸಿಪಲ್ ಕೌನ್ಸಿಲ್‍ಗಳು ಮತ್ತು ಜಿಲ್ಲಾ ಪರಿಷತ್‍ಗಳ ಅಧ್ಯಕ್ಷರು)ಅವರ ಅಧಿಕೃತ ಕಾರುಗಳ ಬಳಕೆಯನ್ನು ಕಚೇರಿಯಿಂದ ನಿವಾಸಕ್ಕೆ ಪ್ರಯಾಣಿಸಲು ಮಾತ್ರ ಅವಕಾಶವಿರುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ/ಮೈದಾನಗಳಲ್ಲಿ ಚುನಾವಣಾ ಸಭೆಗಳನ್ನು ನಡೆಸಲು ಹಾಗೂ ವಿಮಾನ/ ಹೆಲಿಕಾಪ್ಟರ್‍ಗಳಿಗೆ ಸ್ಥಳಾವಕಾಶವನ್ನು ಒದಗಿಸಲು ಅಧಿಕಾರದಲ್ಲಿರುವ ಪಕ್ಷದವರು ಏಕಸ್ವಾಮ್ಯವನ್ನು ಹೊಂದಿರುವುದಿಲ್ಲ.ಇತರ ಪಕ್ಷಗಳು ಸಹ ಅವುಗಳನ್ನು ಬಳಕೆ ಮಾಡಲು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲು ಕ್ರಮವಹಿಸುವುದು.

ಮತದಾರರ ಮೇಲೆ ಪ್ರಭಾವ ಬೀರುವ MP/MLA/MLC ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ನಡೆಸಲು ಯಾವುದೇ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಸಂಪರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಯಾವುದೇ ಹೊಸ ಕಾಮಗಾರಿಗಳಿಗೆ ಮಂಜೂರು/ ಅನುಮತಿ ನೀಡುವಂತಿಲ್ಲ.

ರಾಜ್ಯ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿರುವುದರಿಂದ ಈಗಾಗಲೇ ನೇಮಕಗೊಂಡ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳನ್ನು ಸದ್ರಿ ಚುನಾವಣೆಯು ಪೂರ್ಣಗೊಳ್ಳುವವರೆಗೆ ವರ್ಗಾವಣೆ ಮಾಡುವಂತಿಲ್ಲ.ಆಡಳಿತಾತ್ಮಕ ಅಗತ್ಯತೆಗಳ ಕಾರಣದಿಂದ ಅಧಿಕಾರಿಯ ವರ್ಗಾವಣೆ ಅಗತ್ಯವಿದ್ದಲ್ಲಿ, ಅಂತಹ ಸಂದರ್ಭಗಳಲ್ಲಿ ಚುನಾವಣಾ ಆಯೋಗದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.

ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಬೇಕಾಗಿರುವುದರಿಂದ ಕಪ್ಪು ಹಣದ ಸಾಗಣೆಯನ್ನು ತಡೆಯಲು 29.05.2015ರಂದು ಹೊರಡಿಸಲಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸೀಜರ್ (SOP)ಅನ್ವಯಿಸುವಂತೆ ಮಾಡಬೇಕು ಹಾಗೂ ಇದರಲ್ಲಿ ಸ್ಥಾಯೀ ಕಣ್ಗಾವಲು ತಂಡಗಳ ನಿಯೋಜನೆಯನ್ನು ಹೊರತುಪಡಿಸಿರಬೇಕು.

ರಾಜ್ಯ ಮತ್ತು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು(MCMC)ಚುನಾವಣಾ ವೆಚ್ಚದ ಮೇಲ್ವಿಚಾರಣೆಯ ಸೂಚನೆಗಳ ಸಂಕಲನದಲ್ಲಿ ಸೂಚಿಸಿದಂತೆ, ಚುನಾವಣಾ ಜಾಹೀರಾತುಗಳ ಪೂರ್ವ-ಪ್ರಮಾಣೀಕರಣಕ್ಕಾಗಿ ತಂಡವನ್ನು ತಕ್ಷಣವೇ ರಚಿಸಬೇಕು.ಸದ್ರಿ ತಂಡವು ಟಿವಿ ನೆಟ್‍ವರ್ಕ್, ರೇಡಿಯೋ (ಖಾಸಗಿ ಎಫ್‍ಎಂ ಚಾನೆಲ್‍ಗಳು),ಸಿನಿಮಾ ಹಾಲ್‍ಗಳು, ಸಾರ್ವಜನಿಕ ಸ್ಥಳ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ-ದೃಶ್ಯ ಪ್ರದರ್ಶನಗಳು ಮತ್ತು ಪ್ರಚಾರದ ಸಮಯದಲ್ಲಿ ರಾಜಕೀಯ ಕಾರ್ಯಕರ್ತರ ಸಾಮಾನ್ಯ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡುವುದು.

BULK SMS ಎಸ್‍ಎಂಎಸ್‍ಗಳು/ಧ್ವನಿ ಸಂದೇಶಗಳನ್ನು ಚುನಾವಣಾ ಸಂದರ್ಭದಲ್ಲಿ ಜಾಹೀರಾತು ಪ್ರದರ್ಶನ ನೀಡಲು ಪೂರ್ವಾನುಮತಿಯನ್ನು ಪಡೆದು ಟಿವಿ ಚಾನೆಲ್‍ಗಳು/ಕೇಬಲ್ ನೆಟ್‍ವರ್ಕ್, ರೇಡಿಯೊ ಸೇರಿದಂತೆ ಖಾಸಗಿ ಎಫ್‍ಎಂ ಚಾನೆಲ್‍ಗಳು, ಸಿನಿಮಾ ಹಾಲ್‍ಗಳು, ಆಡಿಯೊ-ವಿಷುವಲ್ ಡಿಸ್ಪ್ಲೇಗಳನ್ನು ಮಾಡತಕ್ಕದ್ದು. ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 29ರ ಅಡಿಯಲ್ಲಿ ಹಾಗೂ ಚುನಾವಣಾ ನಿಯಮಗಳ ನಡವಳಿಕೆ, 1961ರ ನಿಯಮ 69ರಂತೆ ವಿಧಾನ ಪರಿಷತ್ತಿಗೆ ಚುನಾವಣೆಗೆ ಸ್ಥಳೀಯ ಸದಸ್ಯರಿಂದ ಮತದಾನವನ್ನು ನಡೆಸಲು ಮತದಾನದ ಸ್ಥಳವನ್ನು ನಿಗದಿಪಡಿಸಲಾಗಿದೆ ಹಾಗೂ ಸೆಕ್ಷನ್ 135 ಸಿ ಪ್ರಕಾರ, ಮತದಾನದ ಪ್ರದೇಶಗಳಲ್ಲಿ “DRY DAY” ವನ್ನು ಘೋಷಿಸಬೇಕು.ಲೋಕಸಭಾ/ ವಿಧಾಸಭಾ ಚುನಾವಣಾ ಸಂದರ್ಭದಲ್ಲಿ ವಾಹನಗಳ ದುರುಪಯೋಗ ಹಾಗೂ ನಿಯಮಗಳನ್ನು ಪಾಲಿಸುವ ರೀತಿಯಲ್ಲಿಯೇ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿಯೂ ಸದ್ರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.ಲೋಕಸಭಾ/ ವಿಧಾಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಮತದಾನ ಮುಕ್ತಾಯವಾಗುವ 48 ಗಂಟೆಗಳ ಮೊದಲ ನಿಯಮವು ಕೂಡ ವಿಧಾನ ಪರಿಷತ್ತಿನ ಚುನಾವಣೆಗೂ ಅನ್ವಯಿಸುತ್ತದೆ.

ಅಂದಾಜು ಮತದಾರರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 230 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದ್ದು 3397 ಮತದಾರರು ಮತಚಲಾಯಿಸಲಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಒಟ್ಟು 159 ಮತಗಟ್ಟೆಗಳಿದ್ದು 2517 ಮತದಾರರಿದ್ದಾರೆ.ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು 389 ಮತಗಟ್ಟೆಗಳಿದ್ದು 5914 ಮತದಾರರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.