ಪುತ್ತೂರು ಸುದ್ದಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ | ವ್ಯವಹಾರ ರೂ. 22 ಕೋಟಿ 38 ಲಕ್ಷ , ನಿವ್ವಳ ಲಾಭ ರೂ.16,87,895, ಶೇ.10 ಡಿವಿಡೆಂಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಸೌಹಾರ್ದ ಸಹಕಾರಿ ನಿ. ಇದರ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ನ.13 ರಂದು ಪುತ್ತೂರು ಮನೀಶಾ ರೋಟರಿ ಸಭಾಭವನದಲ್ಲಿ ಸಹಕಾರಿಯ ಅಧ್ಯಕ್ಷ ಡಾ.ಯು.ಪಿ.ಶಿವಾನಂದರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ನರೇಂದ್ರರವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 6 ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು 2020-21 ನೇ ಸಾಲಿನಲ್ಲಿ ಎ ತಗತಿಯ ಒಟ್ಟು 2211 ಮಂದಿ ಸದಸ್ಯರಿದ್ದು, ರೂ.43,85,400 ಪಾಲು ಬಂಡವಾಳ ಇದ್ದು ಪಾಲು ಬಂಡವಾಳ ಸಂಗ್ರಹಣೆಯಲ್ಲಿ ಶೇ.18 ರಷ್ಟು ಏರಿಕೆಯನ್ನು ಕಂಡಿದೆ ಎಂದರು. ಸಂಘವು ಒಟ್ಟು ರೂ.5,61,06,758 ರಷ್ಟು ಠೇವಣಾತಿಗಳನ್ನು ಹೊಂದಿದ್ದು ಸಂಘವು ಅವಧಿ ಠೇವಣಾತಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದು 1 ವರ್ಷದ ಅವಧಿಗೆ ಶೇ.9 ಹಾಗೂ ಹಿರಿಯ ನಾಗರೀಕರಿಗೆ ಶೇ.0.5 ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತಿದೆ ಎಂದರು. ಠೇವಣಾತಿ ಸಂಗ್ರಹಣೆಯಲ್ಲಿ ಹಿಂದಿನ ಅವಧಿಗಿಂತ ಶೇ.23 ರಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಿದ್ದು ಮುಂದಿನ ಅವಧಿಗೆ 7 ಕೋಟಿ ಠೇವಣಿ ಸಂಗ್ರಹಣೆಯ ಗುರಿಯನ್ನು ಹೊಂದಲಾಗಿದೆ ಎಂದರು. ವಿವಿಧ ಸಂಘ ಮತ್ತು ಬ್ಯಾಂಕ್‌ಗಳಲ್ಲಿ ಧನ ವಿನಿಯೋಗ ಮಾಡಲಾಗಿದ್ದು ಒಟ್ಟು ರೂ.1,07,00,000 ಧನ ವಿನಿಯೋಗ ಮಾಡಲಾಗಿದೆ ಎಂದರು.

ಸಹಕಾರಿಯು ಸದಸ್ಯರಿಗೆ ವೇತನ ಸಾಲ, ಅಡವು ಸಾಲ, ವಾಹನ ಖರೀದಿ ಸಾಲ, ಗೃಹಸಾಲ, ಜಾಮೀನು ಸಾಲ, ಭೂ ಖರೀದಿ ಸಾಲ, ಚಿನ್ನಾಭರಣ ಈಡಿನ ಸಾಲಗಳನ್ನು ತ್ವರಿತಗತಿಯಲ್ಲಿ ನೀಡುತ್ತಿದೆ ಎಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ವರದಿ ವರ್ಷಕ್ಕೆ ಒಟ್ಟು ರೂ.5,04,82,497 ಸಾಲ ನೀಡಲಾಗಿದೆ ಎಂದರು. ಸಾಲ ನೀಡಿಕೆಯಲ್ಲಿ ಶೇ.20 ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಅದೇ ರೀತಿ ಸಾಲ ವಸೂಲಾತಿಯು ಬಹಳ ಪ್ರಾಮುಖ್ಯವಾಗಿದ್ದು ಹೆಚ್ಚಿನ ಶ್ರಮ ವಹಿಸಿ ಶೇ.92.8 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ವರದಿ ವರ್ಷದಲ್ಲಿ ಕೋವಿಡ್ 19 ನಿಂದಾಗಿ ಸಾಲ ವಸೂಲಾಯಿತಿಗೆ ಹಿನ್ನಡೆಯಾಗಿದೆ, ಸದಸ್ಯರು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿ ಸಂಘದ ವ್ಯವಹಾರವನ್ನು ಹೆಚ್ಚಿಸಬೇಕಾಗಿ ವಿನಂತಿ ಮಾಡಿಕೊಂಡರು.
ಸಂಘವು ವರದಿ ವರ್ಷದಲ್ಲಿ ಒಟ್ಟು ರೂ. 22 ಕೋಟಿ 38 ಲಕ್ಷ ವ್ಯವಹಾರ ನಡೆಸಿದ್ದು ಒಟ್ಟು ರೂ.16,87,895.68 ರಷ್ಟು ನಿವ್ವಳ ಲಾಭ ಗಳಿಸಿಕೊಂಡಿದೆ ಇದರಲ್ಲಿ ಶೇ.10 ಡಿವಿಡೆಂಟ್ ಕೊಡುವುದು ಎಂದರು. ಒಟ್ಟು ಲಾಭಾಂಶದಲ್ಲಿ ಎಲ್ಲಾ ನಿಧಿಗಳಿಗೆ ವಿನಿಯೋಗಿಸಿ ಉಳಿಕೆಯಾದ 3,19,433 ರೂಪಾಯಿಗಳನ್ನು ಕ್ಷೇಮನಿಧಿಗೆ ವಿನಿಯೋಗಿಸುವುದು ಎಂದು ಎಂ.ನರೇಂದ್ರರವರು ತಿಳಿಸಿದರು. ಸಂಘದಲ್ಲಿ ಒಟ್ಟು 4 ಮಂದಿ ಸಿಬ್ಬಂದಿಗಳಿದ್ದು , 3 ಮಂದಿ ಪಿಗ್ಮಿ ಸಂಗ್ರಾಹಕರಿದ್ದಾರೆ. ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಅತೀ ಬಡವರಿಗೆ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆಯಲಾಗಿದೆ ಎಂದರು.

 

ನಿವೃತ್ತ ಫಾರೆಸ್ಟರ್ ಕೆ.ಕೃಷ್ಣಪ್ಪ, ಸದಸ್ಯರುಗಳಾದ ಮಹಮ್ಮದ್ ಕುಂಞ ಕಾವು, ಶೈಲಜಾ ಸುದೇಶ್, ಶ್ರೀಧರ ರೈ ಕೋಡಂಬು, ಶಶಿಕಲಾ ಎಸ್.ರೈ, ನಿವೃತ್ತ ಕಮೀಷನರ್ ಎಂ.ಎನ್.ಗೌಡರವರುಗಳು ವಿವಿಧ ಸಲಹೆ ಸೂಚನೆ ನೀಡಿದರು. ಠೇವಣಿದಾರರಾದ ಲೋಕೇಶ್ ಜೆ, ಪರಿವಾರ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಸುದೇಶ್ ಕುಮಾರ್‌ ಚಿಕ್ಕಪುತ್ತೂರು, ಮಹಮ್ಮಾಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶೀನ ನಾಯ್ಕ, ಉಪಾಧ್ಯಕ್ಷ ಚೋಮ ನಾಯ್ಕ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

 

ಸುದ್ದಿ ಚಾನೆಲ್‌ನ ನಿರೂಪಕಿ, ನಟಿ ದೀಕ್ಷಾ ರೈ ಅಮೈ ಪ್ರಾರ್ಥಿಸಿದರು. ಸಹಕಾರಿಯ ಸಿಬ್ಬಂದಿ ಅನಂತರಾಮ ಮಹಾಸಭೆಯ ನೋಟೀಸ್ ಹಾಗೂ ಅಡಿಟ್ ವರದಿ ಮಂಡನೆ ಮಾಡಿದರು. ನಿರ್ದೇಶಕ ಎನ್.ಕೆ.ಜಗನ್ನೀವಾಸ ರಾವ್ ಸ್ವಾಗತಿಸಿದರು. ಸಹಕಾರಿಯ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

 

ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರುಗಳಾದ ಡಾ.ಜೆ.ಸಿ ಅಡಿಗ, ಜಾನ್ ಕುಟಿನ್ಹಾ, ಕೆ.ಸುಂದರ ನಾಯ್ಕ, ಎ.ವಿ.ನಾರಾಯಣ, ಮೋಹನ್ ರೈ ಕೆ.ಎಂ, ರಾಜೇಶ್ ಎಂ.ಎಸ್.ಮಾಡಾವು, ಸಿ.ಶೇಷಪ್ಪ ಕಜೆಮಾರ್, ಫಾರೂಕ್ ಶೇಖ್ ಮುಕ್ವೆ, ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ನಿರ್ದೇಶಕಿ ಜೊಹರಾ ನಿಸಾರ್ ಅಹಮ್ಮದ್ ವಂದಿಸಿದರು. ಸುದ್ದಿ ಚಾನೆಲ್‌ನ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಸಿಬ್ಬಂದಿಗಳಾದ ಚೇತನ್, ನೈಜಶ್ರೀ, ಪಿಗ್ಮಿ ಸಂಗ್ರಹಕರಾದ ಸುಬ್ರಹ್ಮಣ್ಯ ಕೆ, ಶ್ರೀಧರ್ ಮತ್ತು ಶಿವರಾಮ್ ತ್ಯಾಗರಾಜನಗರ ಸಹಕರಿಸಿದ್ದರು.

ಸುದ್ದಿ ಸೌಹಾರ್ದ ಸಹಕಾರಿಯು 2020-21 ನೇ ಸಾಲಿನಲ್ಲಿ ಒಟ್ಟು ರೂ. 16,87,895.68 ರಷ್ಟು ನಿವ್ವಳ ಲಾಭ ಗಳಿಸಿದೆ ಇದರಲ್ಲಿ ಶೇ.10 ಡಿವಿಡೆಂಟ್ ನೀಡಲಾಗುತ್ತಿದೆ. ಸಂಘದ ಸದಸ್ಯರ, ನಿರ್ದೇಶಕರ ಪ್ರೋತ್ಸಹ ಮತ್ತು ಬೆಂಬಲವನ್ನು ಪಡೆದುಕೊಂಡು ಸಂಘವನ್ನು ಜನಪರ ಸಂಘವಾಗಿ ರೂಪುಗೊಳಿಸುವುದು, ಎಲ್ಲರ ವಿಶ್ವಾಸ ಗಳಿಸಿಕೊಂಡು ಮುಂದಿನ ದಿನಗಳಲ್ಲಿ ಸುಳ್ಯ,ಬೆಳ್ತಂಗಡಿ ಮತ್ತು ಬಂಟ್ವಾಳಗಳಲ್ಲಿ ಸಂಘದ ಶಾಖೆ ತೆರೆಯುವ ಬಗ್ಗೆ ಸಮಾಲೋಚನೆ ನಡೆಸುವುದು. ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಸಹಕಾರ ಅತೀ ಅಗತ್ಯವಾಗಿದೆ – ಡಾ.ಯು.ಪಿ.ಶಿವಾನಂದ , ಅಧ್ಯಕ್ಷರು ಸುದ್ದಿ ಸೌಹಾರ್ದ ಸಹಕಾರಿ ನಿ.ಪುತ್ತೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.