ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ಸಾನ್ನಿಧ್ಯದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಅನ್ನಸಂತರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಮತ್ತು ಕುರಿಯ ಗ್ರಾಮದ ಗಡಿ ಪ್ರದೇಶವಾಗಿರುವ ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನ್ನಿಧ್ಯದಲ್ಲಿ ದೋಷಗಳ ಪರಿಹಾರ ಮತ್ತು ಜೀರ್ಣೋದ್ಧಾರ ಬಗ್ಗೆ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆಯು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.13 ರಂದು ಬೆಳಿಗ್ಗೆ ನಡೆಯಿತು. ಮೊದಲಿಗೆ ಮಹಾಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಘೋರ ಶಾಂತಿ ಹೋಮ, ತಿಲ ಹೋಮ, ಪವಮಾನ ಪ್ರಾಯಶ್ಚಿತ ಹೋಮ ಚಕ್ರಾಬ್ಜ ಪೂಜೆ, ಅನುಜ್ಞಾ ಕಲಶ ಪೂಜೆ ನಡೆದು ಶ್ರೀ ರಾಜಗುಳಿಗನಲ್ಲಿ ಅನುಜ್ಞಾ ಕಲಶಾಭಿಷೇಕ ನಡೆದು ತಂಬಲ ಸೇವೆ ನಡೆಯಿತು. ಬಳಿಕ ಮಂಗಳಾರತಿ, ಬಾಲಾಲಯ ಪ್ರತಿಷ್ಠೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ನ.12 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ ಸ್ವಸ್ತೀ ಪುಣ್ಯಾಹ ವಾಚನ, ಮಹಾಸುದರ್ಶನ ಹೋಮ, ಆವಾಹನೆ, ಉಚ್ಛಾಟನೆ, ಅಘೋರ ಹೋಮ, ವಾಗ್ದೇವಿ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಕುರಿಯ, ಆರ್ಯಾಪು, ಒಳಮೊಗ್ರು ಗ್ರಾಮ ಸೇರಿದಂತೆ ಊರಪರವೂರ ಅಪಾರ ಭಕ್ತರ ಆರಾಧ್ಯ ದೈವವಾದ ರಾಜಗುಳಿಗ ಸರ್ವರಿಗೂ ರಕ್ಷ ಕವಚವಾಗಿದ್ದಾನೆ. ಬಹಳ ಪುರಾತನವಾದ ಈ ದೈವ ಸಾನ್ನಿಧ್ಯ ಕಾಲಾಂತರದಲ್ಲಿ ಕ್ಷೀಣಿಸಿದುದರಿಂದ ಭಕ್ತ ಜನರಿಗೆ ತೊಂದರೆಗಳು ತಲೆದೋರುತ್ತಿದ್ದು ಸಾನ್ನಿಧ್ಯ ವೃದ್ಧಿಯಾಗಬೇಕೆನ್ನುವ ಸಂಕಲ್ಪದಿಂದ ಏಳ್ನಾಡುಗುತ್ತಿನವರು ಮತ್ತು ಊರ ಪರವೂರ ಭಕ್ತ ಜನರು ಸೇರಿ ದೈವಜ್ಞ ಸತ್ಯನಾರಾಯಣ ಭಟ್ ಪಂಜರವರ ಮುಲಕ ಪ್ರಶ್ನಾ ಚಿಂತನೆ ನಡೆಸಿದ್ದರು. ಅದರಂತೆ ಈಗ ಜೀರ್ಣೋದ್ಧಾರ ಕಾರ್ಯಗಳಿಗೆ ಮುನ್ನುಡಿ ಇಡಲಾಗಿದೆ. ಜೀರ್ಣೋದ್ಧಾರ ಕಾರ್ಯದ ಮೊದಲ ಹಂತವಾಗಿ ದೋಷಗಳ ಪರಿಹಾರ ಮತ್ತು ಜೀರ್ಣೋದ್ಧಾರ ಬಗ್ಗೆ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ನಡೆದಿದೆ. ಗ್ರಾಮದ ಮತ್ತು ಊರಪರವೂರ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು. ಸಾನ್ನಿಧ್ಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಮಲಾರು ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರುಗಳು ಭಕ್ತರನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.