ಜ್ನಾನೋದಯ ಬೆಥನಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: 2021 ನವೆಂಬರ್ 13ರಂದು ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಎಂದಿನಂತೆ ಶಾಲಾರಂಭ ಸಭೆಯನ್ನು ವಿದ್ಯಾರ್ಥಿಗಳಿಗೆ ಬದಲಾಗಿ ಶಿಕ್ಷಕರು ನೆರವೇರಿಸಿದರು.ಶಾಲಾ ವಠಾರದಲ್ಲಿ ಶಿಕ್ಷಕರ ನೇತೃತ್ವದಲ್ಲಿ ಚಿಣ್ಣರ ವರ್ಣರಂಜಿತ ರಾಲಿ ನಡೆಯಿತು. ಶಾಲಾ ವಠಾರದಲ್ಲಿ ವಿದ್ಯಾರ್ಥಿಗಳ ಕಲರವ ಎಲ್ಲರ ಮನಸ್ಸನ್ನು ಸೆಳೆಯುವಂತಿತ್ತು. 

ಶಾಲಾ ಹಿರಿಯ ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಂತೆ 1ರಿಂದ 11ನೇ ತರಗತಿಯ ವರೆಗಿನ ಎಲ್ಲಾ ಪಾಠ ಪ್ರವಚನಗಳನ್ನು ಉತ್ಸಾಹದಿಂದ ನೆರವೇರಿಸಿದರು. ಪಿಯುಸಿ ವಿಜ್ಞಾನ ವಿಭಾಗದ ಶಮಂತ್ ಕೃಷ್ಣ ಶಾಲಾ ಪ್ರಾಂಶುಪಾಲರಾಗಿ ಮಕ್ಕಳ ದಿನಾಚರಣೆಯ ದಿನ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿ ಶಿಕ್ಷರು ಹಾಗೂ ವಿದ್ಯಾರ್ಥಿಗಳು ಲವಲವಿಕೆಯಿಂದ ಹೂಗುಚ್ಚ ಸ್ಪರ್ಧೆಯಲ್ಲಿ ಭಾಗವಹಿಸಿ ನವೀನ ರೀತಿಯಲ್ಲಿ ಕಲಾತ್ಮಕವಾಗಿ ಹೂಗುಚ್ಚವನ್ನು ರಚಿಸಿ ಪ್ರಾಂಶುಪಾಲರಿಗೆ ಹಾಗೂ ಚಾಚಾ ನೆಹರೂರವರಿಗೆ ನೀಡಿರುವುದು ಕಾರ್ಯಕ್ರಮದ ಆಕರ್ಷಣೆಯಲ್ಲೊಂದಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿಯವರು ಶಿಕ್ಷಕರಿಗೆ ಹಲವು ಮನರಂಜನಾ ಆಟಗಳನ್ನು ಹಾಗೂ ಸ್ಪರ್ಧೆಗಳನ್ನು ನಡೆಸಿ ಶಿಕ್ಷಕ ಸಮುದಾಯವನ್ನು ಸಂತೋಷಗೊಳಿಸಿದರು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಥನಿ ನವಜ್ಯೋತಿ ಪ್ರೋವಿನ್ಸಿನ ವೈಸ್ ಪ್ರೊವಿನ್ಶಿಯಲ್ ರೆ|ಡಾ| ವರ್ಗೀಸ್ ಕೈಪನಡುಕ್ಕ ಮಾತನಾಡಿ ಮಕ್ಕಳು ಸಮಾಜದ ಆಸ್ತಿ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಮಕ್ಕಳು ತಮಗಾಗಿ ಕಷ್ಟಪಡುವ ತಂದೆ ತಾಯಿಯರನ್ನು ಪ್ರೀತಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಜೋಸ್ ಎಂ.ಜೆ.. ಸಂಸ್ಥೆಯ ಸಂಚಾಲಕರಾದ ರೆ|ಫಾ| ಸತ್ಯನ್ ತೋಮಸ್ ಒಐಸಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದು ಶುಬ ಹಾರೈಸಿದರು. ಶಿಕ್ಷಕಿ ಲಿಸ್ಸಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.