ಕಬಕದಲ್ಲಿ ಮಹಾದೇವಿ ಇಂಜಿನಿಯರಿಂಗ್, ಮೋಟಾರ್ ವರ್ಕ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು;ಶ್ರೀಮಹಾದೇವಿ ಇಂಜಿನಿಯರಿಂಗ್ ಮತ್ತು ಮೋಟಾರ್ ವರ್ಕ್ಸ್ ನ.14ರಂದು ಮಾಣಿ-ಮೈಸೂರು ಹೆದ್ದಾರಿಯ ಕಬಕದಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮಿಜಿಯವರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕೊರೋನಾದಿಂದ ಉದ್ಯಮ, ವ್ಯವಹಾರ ಕ್ಷೇತ್ರಗಳಲ್ಲಿ ಬಹಳಷ್ಟು ಸಂಕಷ್ಟ ಬಂದಿದೆ. ನಿರುದ್ಯೋಗ ಸಮಸ್ಯೆ ಎದುರಾಗಿದ್ದು ಮುಂದಿನ ಜೀವನ ಬಗ್ಗೆ ಚಿಂತೆಯಲ್ಲಿ ಜನತೆಯಿದ್ದಾರೆ. ಆದರೂ ದೇಶಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆ ಎಂಬ ಪ್ರಗತಿಪರ ಚಿಂತನೆ, ಯೋಜನೆ, ಯೋಚನೆಯೊಂದಿಗೆ ಉದ್ಯಮ ಪ್ರಾರಂಭಗೊಂಡಿದ್ದು ನಿಮ್ಮ ಯೋಚನೆಗಳು ಸಾಕರಗೊಳ್ಳಲಿ ಎಂದರು. ಮಹಾದೇವಿ ಭಜನಾ ಮಂದಿರದಲ್ಲಿಯೂ ಸಾಕಷ್ಟು ಸೇವೆ ನೀಡುತಿದ್ದು ನಿಮ್ಮ ಆಶಯವನ್ನು ಮಹಾದೇವಿ ಈಡೇರಿಸಲಿ. ಶ್ರೀಧರ ಭಟ್‌ರವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಬೆಳೆದಿದೆ. ಸಂಸ್ಥೆ ಅಭಿವೃದ್ಧಿ ಹೊಂದಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶಗಳು ದೊರೆಯುವಂತಾಗಲಿ ಎಂದು ಶುಭಹಾರೈಸಿದ ಸ್ವಾಮಿಜಿಯವರು ನನ್ನ ವಾಹನವು ಕೆಟ್ಟು ಹೋದಾಗ ಕ್ಲಪ್ತ ಸಮಯದಲ್ಲಿ ಉತ್ತಮ ಸೇವೆ ನೀಡಿರುವುದನ್ನು ಸ್ವಾಮೀಜಿಯವರು ಸ್ಮರಿಸಿದರು.

ಶ್ರೀಧರ ಭಟ್ ಕಬಕರವರ ಪೌರೋಹಿತ್ಯದಲ್ಲಿ ಗಣಪತಿ ಹವನ ಹಾಗೂ ಶ್ರೀ ಲಕ್ಷ್ಮೀ ಪೂಜೆಯು ನೆರವೇರಿತು. ಇಡ್ಕಿದು ಸೇವಾ ಸಹಕಾರಿ ಸಂಘ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಫರ್ಟಿಲೈಸರ್ ಅಡ್ವೈಸರ್ ಫಾರಂನ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾ.ಪಂ ಅಧ್ಯಕ್ಷ ಸುಧೀರ್ ಶೆಟ್ಟಿ ಮಿತ್ತೂರು, ಕಬಕ ಗ್ರಾ.ಪಂ ಸದಸ್ಯ ಶಾಬಾ, ಕೊಡಿಪ್ಪಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ ಹಣಿಯೂರು, ಕಬಕ ಗ್ರಾ.ಪಂ ಮಾಜಿ ಸದಸ್ಯ ವಸಂತ ನೆಕ್ಕರೆ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.