ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕಡೇಶಿವಾಲಯದ ಜಯಲಕ್ಷ್ಮಿಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 20 ಬಾರಿ ಗೋಲ್ಡ್ ಮೆಡಲ್ ಪಡೆದ ಕುವರಿ
  • 2017ರಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ


ಉಪ್ಪಿನಂಗಡಿ: ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕಡೇಶಿವಾಲಯ ಗಾನದಕೊಟ್ಯ ನಿವಾಸಿ ಕು| ಜಯಲಕ್ಷ್ಮೀಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಸಮಿತಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಕಡೇಶಿವಾಲಯ ಗಾನದಕೊಟ್ಯ ನಿವಾಸಿ ಧಮಯಂತಿ ವಿಶ್ವನಾಥ ಸಪಲ್ಯರವರ ಪುತ್ರಿಯಾಗಿರುವ ಕು| ಜಯಲಕ್ಷ್ಮೀಯವರು ಅತ್ಯುತ್ತಮ ಬಾಲ್ ಬಾಡ್ಮಿಂಟನ್ ಪಟುವಾಗಿದ್ದು, ಪ್ರಸಕ್ತ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಯಲಕ್ಷ್ಮೀಯವರ ಸಾಧನೆಗಳು:
ಅತ್ಯುತ್ತಮ ಬಾಲ್ ಬಾಡ್ಮಿಂಟನ್ ಪಟುವಾಗಿರುವ ಜಯಲಕ್ಷ್ಮಿಯವರು ೬ ಬಾರಿ ಗೋಲ್ಡ್ ಮೆಡಲ್ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೫ ಬಾರಿ ಗೋಲ್ಡ್ ಮೆಡಲ್ ಸೀನಿಯರ್ ನೇಷನಲ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೩ ಬಾರಿ ಗೋಲ್ಡ್ ಮೆಡಲ್ ಫೆಡರೇಷನ್ ಕಪ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೩ ಬಾರಿ ಗೋಲ್ಡ್ ಮೆಡಲ್ ಇಂಟರ್ ಝೋನ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೩ ಬಾರಿ ಗೋಲ್ಡ್ ಮೆಡಲ್ ಸೌತ್ ಝೋನ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೧ ಬಾರಿ ಸಿಲ್ವರ್ ಮೆಡಲ್ ಸೀನಿಯರ್ ನೇಷನಲ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಫ್, ೪ ಬಾರಿ ಸ್ಟಾರ್ ಆಫ್ ಇಂಡಿಯಾ ಬಾಲ್ ಬಾಡ್ಮಿಂಟನ್ ಫೆಡರೇಷನ್ ಆಫ್ ಇಂಡಿಯಾ, ೩ ಬಾರಿ ಕರ್ನಾಟಕ ತಂಡದ ನಾಯಕತ್ವ, ೨೦೧೭ರಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಸಾಧನೆಗಳನ್ನು ಮಾಡಿ ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ಜಯಲಕ್ಷ್ಮೀಯವರು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಾಡಿದ್ದು, ತದ ನಂತರ ಪಿಯುಸಿ, ಬಿ.ಕಾಂ., ಎಂ.ಕಾಂ., ಪಿಜಿಡಿಬಿಯಂ. ಪದವಿಯನ್ನು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಡೆದಿದ್ದು, ಈದೀಗ ಆಳ್ವಾಸ್ ಕಾಲೇಜಿನಲ್ಲಿ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.