ಆರ್ಯಾಪು ಕಂಬಳತಡ್ಡ ಅಂಗನವಾಡಿ ಪುನರಾರಂಭೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಆರ್ಯಾಪು ಗ್ರಾಮದ ಕಂಬಳತಡ್ಡ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಪುನರಾರಂಭೋತ್ಸವ ನಡೆಯಿತು. ಅಲಂಕೃತಗೊಂಡ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಹೂಗುಚ್ಚ ನೀಡಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ ರೈ ದೀಪ ಬೆಳಗಿಸಿ ಹಾಗೂ ಅಂಗನವಾಡಿಯ ಪುಟಾಣಿ ಮಕ್ಕಳು ಆರತಿಯನ್ನು ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ಹೊಸಮನೆ ಅಧ್ಯಕ್ಷತೆ ವಹಿಸಿದ್ದರು. ಕಂಬಳತಡ್ಡ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಸುವರ್ಣ ಮೇರ್ಲ, ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಕಿರಿಯ ಆರೋಗ್ಯ ಸಹಾಯಕಿಯರಾದ ಕುಸುಮಾವತಿ, ವಂದನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಯಾಪು ಗ್ರಾ.ಪಂ ಸದಸ್ಯರಾದ ಪವಿತ್ರ ರೈ ಉದ್ಯಂಗಳ, ಚೇತನ್ ಗೌಡ ದೇವಸ್ಯ, ಬಾಲವಿಕಾಸ ಸಮಿತಿಯ ಪೂರ್ವಾಧ್ಯಕ್ಷೆ ನಳಿನಿ ಕೊಲ್ಯ, ಶ್ರೀ ಕೃಷ್ಣ ಯುವಕ ಮಂಡಲದ ಮಾಜಿ ಅಧ್ಯಕ್ಷ ಲೋಕೇಶ್ ರೈ ಮೇರ್ಲ, ವರಮಹಾಲಕ್ಷ್ಮಿ ಪೂಜಾಸಮಿತಿಯ ಅಧ್ಯಕ್ಷೆ ಭವ್ಯಾ ರೈ ಮೇರ್ಲ, ಅಂಗನವಾಡಿ ಸಹಾಯಕಿ ಪುಷ್ಪಾವತಿ, ಹಾಗೂ ಬಾಲವಿಕಾಸ ಸಮಿತಿಯ ಸರ್ವ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಬೂಡಿಯಾರು ಹೊಸಮನೆ ಇದರ ಆಡಳಿತ ಸಮಿತಿಯ ಅಧ್ಯಕ್ಷ ಗಂಗಾಧರ್ ಅಮಿನ್ ಹೊಸಮನೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಚಂದ್ರಾವತಿ ಅಡ್ಕ ಪ್ರಾರ್ಥಿಸಿದೆಉ. ಚಂದ್ರಾವತಿ ಮೇರ್ಲ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.