ಕೃಷಿಗೆ ತೊಂದರೆಯಾದ ವಿದ್ಯುತ್ ಕಂಬ: ತೆರವು ಮಾಡುವಂತೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಕೃಷಿಗೆ ತೊಂದರೆಯಾಗುವ ರೀತಿಯಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ಕಂಬವನ್ನು ಹಾಕಿದ್ದು ಅದನ್ನು ತೆರವು ಮಾಡುವಂತೆ ಜಾಗದ ಮಾಲಿಕ ಮೆಸ್ಕಾಂಗೆ ಮನವಿ ಮಾಡಿದ್ದಾರೆ.


ಕಾವು ಮಾಡ್ನೂರು ಗ್ರಾಮದ ಕೆ ಅಣ್ಣಪ್ಪ ನಾಯ್ಕ ಎಂಬವರ ಕೃಷಿ ಭೂಮಿಗೆ ತೊಂದರೆಯಾಗುವ ರೀತಿಯಲ್ಲಿ ವಿದ್ಯುತ್ ಕಂಬವನ್ನು ಹಾಕಲಾಗಿದೆ. ಇವರ ಜಾಗದ ಪಕ್ಕದ ವ್ಯಕ್ತಿಯಾಗಿರುವ ಸುಶೀಲ ಎಂಬವರು ಕಂಬವನ್ನು ಹಾಕಿಸಿದ್ದು, ನಿಯಮ ಬಾಹಿರವಾಗಿ ಹಾಕಿರುವ ಕಾರಣ ಅದನ್ನು ಸ್ಥಳಾಂತರ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಅಣ್ಣಪ್ಪ ನಾಯ್ಕರವರ ತೆಂಗಿನ ತೋಟಕ್ಕೆ ತಾಗಿಕೊಂಡು ಹೊಸ ಕಂಬವನ್ನು ಹಾಕಿದ್ದು ಇದರಿಂದ ಜೀವ ಹಾನಿಯ ಭಯವಿದ್ದು ಕೂಡಲೇ ತೆರವು ಮಾಡಬೇಕೆಂದು ವಿನಂತಿಸಿದ್ದಾರೆ. ಅವೈಜ್ಞಾನಿಕವಾಗಿ ಕಂಬ ಅಳವಡಿಸಿರುವುದರ ವಿರುದ್ದ ಜಾಗದ ಮಾಲಿಕ ಅಣ್ಣಪ್ಪ ನಾಯ್ಕರವರು ಪುತ್ತೂರು ಶಾಸಕರಿಗೂ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.