ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ-ಅತಿಥಿಗಳಾಗಿ ವೇದಿಕೆ ಹಂಚಿಕೊಂಡ ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳೇ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು. ಜವಹಾರ್‌ಲಾಲ್ ನೆಹರೂರವರ ಕುರಿತು ವಿದ್ಯಾರ್ಥಿಗಳು ಭಾಷಣ ಹಾಗೂ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳಾದ ಆಯಿಷತ್ ಸನಾ, ಶಾಮಿಲ್ ಮಧುರಾ, ಮುಹಮ್ಮದ್ ಮಾಯಿಝ್, ಲಿಬಾ ಆಯಿಷಾ, ಮುಹಮ್ಮದ್ ಜಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕರಾದ ಕೆ.ಅಬುಬಕರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೇಶಕರಾದ ನಝೀರ್ ಅಹಮ್ಮದ್, ಪಿಯುಸಿ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ರಮ್ಲತ್ ಕೆ, ಶಿಕ್ಷಕಿಯರಾದ ಶ್ವೇತಾ ಮರಿಯಾ ಡಿಸೋಜ, ಮನೋದ, ಶಿಕ್ಷಕ ಮಹಮ್ಮದ್ ಅನೀಸ್, ಶಿಕ್ಷಕೇತರ ವೃಂದದವರಾದ ಖದೀಜತ್ ರೈಹಾನ, ಪ್ರತೀಕ್ಷಾ, ಇಬ್ರಾಹಿಂ ಬಡಗನ್ನೂರ್, ಶಿವಬಾಲನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಾಮಿಲ್ ಮಧುರಾ ಸ್ವಾಗತಿಸಿ ಆಯಿಷತ್ ಸನಾ ವಂದಿಸಿದರು. ಫಾತಿಮತ್ ಮುಬಶ್ಶಿರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.