ಕೊಡಿಪ್ಪಾಡಿಯಲ್ಲಿ ದನ, ಎರಡು ಕರು ನಾಪತ್ತೆ: ಕಾರಿನಲ್ಲಿ ಅಪಹರಿಸುತ್ತಿರುವ ದೃಶ್ಯ ಸಿ.ಸಿ.‌ಟಿ.ವಿಯಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಡಿಪ್ಪಾಡಿಯಲ್ಲಿ ಮೇಯಲು ಬಿಟ್ಟಿದ್ದ ದನ ಮತ್ತು ಎರಡು ಕರುಗಳನ್ನು ಕಾರಿನಲ್ಲಿ ಅಪಹರಿಸಿರುವ ಘಟನೆ ನಡೆದಿದೆ. ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಲಕ್ಷ್ಮಣ ಗೌಡರವರ ಮನೆಯ ಒಂದು ದನ ಮತ್ತು ಎರಡು ಕರುವನ್ನು‌ ಅಲ್ಲಿಯೇ ಪಕ್ಕದ ಗುಡ್ಡೆಯಲ್ಲಿ ಮೇಯಲು ಬಿಡಲಾಗಿತ್ತು. ದನ ಹಾಗೂ ಕರುಗಳು ವಾಪಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಹಲವೆಡೆ ಹುಡುಕಾಟ ನಡೆಸಲಾಗಿತ್ತು. ಆದರೂ ಪತ್ತೆಯಾಗದ ನಿಟ್ಟಿನಲ್ಲಿ ಲಕ್ಷ್ಮಣ ಗೌಡರವರ ಪುತ್ರಿ ರಕ್ಷಿತಾರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.‌ ಬಳಿಕವೂ ಮನೆಯವರು ವಿವಿದೆಡೆ ಹುಡುಕಾಡಿದ್ದರು.‌ ಆದರೂ ದನ, ಕರು ಪತ್ತೆ ಆಗಿರಲಿಲ್ಲ. ಇದೀಗ ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಸಿ.ಸಿ.ಟಿ.ವಿ.ಯನ್ನು ಸ್ಥಳೀಯರು ಪರಿಶೀಲಿಸಿದಾಗ ದನ ಮತ್ತು ಕರುಗಳನ್ನು ಕಾರೊಂದರಲ್ಲಿ ತುಂಬಿಸಿ ಅಪಹರಿಸಿರುವ ದೃಶ್ಯ ಪತ್ತೆಯಾಗಿದೆ. ದನಗಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ಗೌಡರವರ ಮನೆಯವರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.