ಮೊಟ್ಟೆತ್ತಡ್ಕ-ಮಣ್ಣಾಪು ಕೊರಗಜ್ಜ, ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಸಂಕ್ರಮಣ ಸೇವೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನ.16ರಂದು ಶ್ರೀ ಕ್ಷೇತ್ರದಲ್ಲಿ ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ ನಡೆಯಿತು.


ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ, ಸಹ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಅಮ್ಮುಂಜ, ಪ್ರಮುಖರಾದ ಸುಜೀರ್ ಶೆಟ್ಟಿ ನುಳಿಯಾಲು, ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿ ನಾರಾಯಣ ನಾಕ್ ಸಿಂಹವನ ಪಂಜಳ, ಶ್ರೀ ಕ್ಷೇತ್ರದ ಮುಖ್ಯಸ್ಥರಾದ ಕುಂಡ ಮೊಗೇರ, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಗಣೇಶ್ ಪೂಜಾರಿ ಕೆಮ್ಮಿಂಜೆ, ಗಂಗಾಧರ್ ಮಣ್ಣಾಪು, ಸುಧೀರ್ ಅತ್ತಾಳ, ಬಾಬು ಮಣ್ಣಾಪು, ಸತೀಶ್ ಮಣ್ಣಾಪು ಹಾಗೂ ಊರಿನ ಮತ್ತು ಶ್ರೀ ಕ್ಷೇತ್ರದ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಧಿ ವಿಧಾನದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.


ಪ್ರತೀ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ(ಅಗೇಲು ಬಾಬ್ತು ರೂ.1200) ನಡೆಯಲಿದ್ದು, ಆದಿತ್ಯವಾರ, ಮಂಗಳವಾರ, ಶುಕ್ರವಾರ ಭಕ್ತಾಧಿಗಳಿಗೆ ಪ್ರಾರ್ಥನೆ ಸಲ್ಲಿಸಲು ಶ್ರೀ ಕ್ಷೇತ್ರದಲ್ಲಿ ಅವಕಾಶವಿದೆ. ಅಗೇಲು ಸೇವೆ ನೀಡುವ ಭಕ್ತಾಧಿಗಳು ಎರಡು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರ ಮಣ್ಣಾಪು ಆಡಳಿತ ಸಮಿತಿ(ಮೊ:9591546107, 7349237945, 7760580714)ಯನ್ನು ಸಂಪರ್ಕಿಸಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.