ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಭೂತಿ ಪ್ರಸಾದ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಂಧ ಪ್ರಸಾದ ವಿತರಣೆ ಜೊತೆ ಇದೀಗ ವಿಭೂತಿ ಪ್ರಸಾದ ವಿತರಣೆ ಆರಂಭಗೊಂಡಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರಿಂದ ಶಿವನಿಗೆ ಪ್ರಿಯವಾದ ಹಲವು ಕಾರ್ಯಗಳು ನಡೆಯುತ್ತಿದ್ದು, ಇದೀಗ ವಿಭೂತಿ ಪ್ರಸಾದವೂ ಅದರಲ್ಲಿ ಸೇರಿಕೊಂಡಿದೆ.

 

ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಶಿವ ದೇವರು ಎಲ್ಲಾ ದೇವತೆಗಳಿಂದ ವಿಭಿನ್ನ. ಭಸ್ಮ ಧಾರಿ, ತ್ರಿಶೂಲಧಾರಿ, ಹಾವನ್ನೇ ಆಭರಣವನ್ನಾಗಿಸಿಕೊಂಡಿರುವ ಮಹೇಶ್ವರ ದೇವಾಧಿ ದೇವ. ಚಿನ್ನದ ಆಭರಣಗಳನ್ನೇ ಧರಿಸದೇ ರುದ್ರಾಕ್ಷಿ, ಹಾವನ್ನೇ ತನ್ನ ಆಭರಣವನ್ನಾಗಿಸಿಕೊಂಡಿರುವ ಶಿವ ಸರಳತೆಯನ್ನೇ ಮೈಗೂಡಿಸಿಕೊಂಡವನು. ಹುಲಿಯ ಚರ್ಮವನ್ನೇ ತನ್ನ ಆಸನವಾಗಿಸಿ ಕೈಲಾಸ ವಾಸಿಯಾಗಿರುವ ಮಹಾದೇವ ಭಕ್ತನುರಾಗಿ.ಶಿವನನ್ನು ಅಲಂಕರಿಸಿರುವ ಈ ಆಭರಣಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಂಡಿವೆ. ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.16 ರಿಂದ ಶ್ರೀದೇವರ ನಡೆಯಲ್ಲಿ ವಿಭೂತಿಯನ್ನು ಇರಿಸಲಾಗಿದೆ. ಭಕ್ತರು ಶ್ರೀ ದೇವರ ದರುಶನ ಪಡೆದ ಬಳಿಕ ಅಲ್ಲೇ ಪಕ್ಕದಲ್ಲಿರುವ ವಿಭೂತಿ ಪ್ರಸಾದ ಸ್ವೀಕರಿಸಬಹುದು.

20 ವರ್ಷಗಳ ಹಿಂದೆಯೂ ವಿಭೂತಿ ಪ್ರಸಾದ:
ಸುಮಾರು 20 ವರ್ಷಗಳ ಹಿಂದೆಯೂ ಶ್ರೀ ದೇವಳದಲ್ಲಿ ಆಗಿನ ಆಡಳಿತ ಮೊಕ್ತೇಸರ ಎನ್.ಕೆ ಜಗನ್ನಿವಾಸ ರಾವ್ ಅವರ ಆಡಳಿತಾವಧಿಯಲ್ಲಿ ವಿಭೂತಿ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಅವರ ಆಡಳಿತದ ಬಳಿಕ ವಿಭೂತಿ ಪ್ರಸಾದ ನಿಲ್ಲಿಸಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ದಿವಾಣ ಗೋಪಾಲಕೃಷ್ಣ ಭಟ್

    ಎಲ್ಲ ಈಶ್ವರ ದೇವಸ್ಥಾನಗಳಲ್ಲಿ ವಿಭೂತಿಯನ್ನೆ ಪ್ರಸಾದ ರೂಪದಲ್ಲಿ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು. ಓಂ ನಮಃ ಶಿವಾಯ 🙏

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.