ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖ ಅವರ ಸಮ್ಮುಖದಲ್ಲಿ ದೀಪ ಪ್ರದಾನ ಮಾಡುವುದರ ಮೂಲಕ ನೂತನ ಆಡಳಿತ ಮಂಡಳಿಯ ಸದಸ್ಯರು ಜವಾಬ್ದಾರಿಯನ್ನು ವಹಿಸಿಕೊಂಡರು.

 

ಈ ಸಂದರ್ಭದಲ್ಲಿ ಮಾತನಾಡಿದ ರೂಪಲೇಖ ಅವರು ಮುಂದಿನ ವರ್ಷಗಳಲ್ಲಿ ಕಾಲೇಜು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ  ಶ್ರೀಕಾಂತ ಕೊಳತ್ತಾಯ, ಸಂಚಾಲಕರಾಗಿ  ಸಂತೋಷ್ ಬಿ. , ಕೋಶಾಧಿಕಾರಿ  ಅರವಿಂದ ವಳಕಟ್ಟೆ, ಸದಸ್ಯರಾಗಿ  ಸಂಪತ್ ಕುಮಾರ್ ಬಿ., ಮೋಹಿನಿ ದಿವಾಕರ್,  ಸೂರ್ಯನಾಥ ಆಳ್ವ, ಶ್ರೀ ಪ್ರಸನ್ನ ಕುಮಾರ್,  ಸುಧಾ ಹೇರಳೆ,  ಕೇಶವ ಮೂರ್ತಿ ಇವರು ನಿಯುಕ್ತಿಗೊಂಡರು. ಈ ಸಂದರ್ಭದಲ್ಲಿ ಹಿಂದಿನ ಆಡಳಿತ ಮಂಡಳಿಯ ಕೋಶಾಧಿಕಾರಿ  ಭಾಸ್ಕರ ರಾವ್, ಸದಸ್ಯರಾದ  ಚಂದ್ರಶೇಖರ ನಾಯ್ಕ,  ಅರುಣ ಬಿ.ಕೆ ಉಪಸ್ಥಿತರಿದ್ದರು ಎಂದು ಪ್ರಾಂಶುಪಾಲರಾದ  ಪ್ರಸಾದ್ ಶಾನ್ ಭಾಗ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.