ರಾಷ್ಟ್ರೀಯ ಮಟ್ಟದ ಚತುರ್ಭಾಷಾ ಭಾಷಣ ಸ್ಪರ್ಧೆಯಲ್ಲಿ ಮಿಂಚಿದ ಮಾಡನ್ನೂರು ನೂರುಲ್ ಹುದಾದ ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಅರೆಬಿಕ್ ವಿಭಾಗದಲ್ಲಿ ಶಹೀರ್ ಪರ್ಲಡ್ಕ ಪ್ರಥಮ-ಉರ್ದು ವಿಭಾಗದಲ್ಲಿ ನಶಾತ್ ಕಡಬರವರಿಗೆ 5ನೇ ರ್‍ಯಾಂಕ್

ಪುತ್ತೂರು: ದಾರುಲ್ ಹುದಾ ವಿಶ್ವ ವಿದ್ಯಾನಿಲಯ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಚತುರ್ಭಾಷಾ ಭಾಷಣ ಸ್ಪರ್ಧೆಯಲ್ಲಿ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ 6ನೇ ತರಗತಿ ವಿದ್ಯಾರ್ಥಿ ಶಹೀರ್ ಪರ್ಲಡ್ಕರವರು ಅರೆಬಿಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು  ಉರ್ದು ವಿಭಾಗದಲ್ಲಿನ ನಶಾತ್ ಕಡಬ 5ನೇ ರ್‍ಯಾಂಕ್   ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.


ದೇಶದ 33 ಸಂಸ್ಥೆಗಳಿಂದ 200 ಸ್ಪರ್ದಾರ್ಥಿಗಳು 4 ಭಾಷೆಗಳಲ್ಲಿ ನಡೆಸಿದ ಪ್ರಭಾಷಣದಲ್ಲಿ ಮಾಡನ್ನೂರು ನೂರುಲ್ ಹುದಾದ ವಿದ್ಯಾರ್ಥಿಗಳಾದ ಶಹೀರ್ ಪರ್ಲಡ್ಕ(ಅರೆಬಿಕ್), ಶಿಬ್ಲಿ ಪರ್ಲಡ್ಕ(ಇಂಗ್ಲೀಷ್), ನಶಾಂತ್ ಕಡಬ(ಉರ್ದು), ಮುಬೀನ್ ಅಲಿ(ಇಂಗ್ಲೀಷ್), ಯು.ಪಿ ಹಾಶಿಂ(ಅರಬಿ) ವಿಭಾಗದಲ್ಲಿ ಸ್ಪರ್ಧಿಸಿದ್ದರು. ಸಿಬಾಕ್ ರಾಷ್ಟ್ರೀಯ ಮಟ್ಟದ ಕಲೋತ್ಸವದಲ್ಲಿ ಸಂಸ್ಥೆಯು 2ನೇ ಸ್ಥಾನ ಪಡೆದುಕೊಂಡಿತು.

ಅಭಿನಂದನೆ:
ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂಡ ವಿದ್ಯಾರ್ಥಿಗಳಿಗೆ ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಅಸ್ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್, ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ವ್ಯವಸ್ಥಾಪಕ ಖಲೀಲ್ ರಹ್ಮಾನಿ ಅರ್ಷದಿ ಕೋಲ್ಪೆ, ಪ್ರ.ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ ಈಶ್ವರಮಂಗಲ, ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ, ಮಾಡನ್ನೂರು ಜಮಾಅತ್ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ, ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಹಾಜಿ ಮುಸ್ತಫಾ ಕೆಂಪಿ, ಇಬ್ರಾಹಿಂ ಹಾಜಿ ಮಂಡೆಕೋಲು, ಅಶ್ರಫ್ ಹಾಜಿ ಪಳ್ಳತ್ತೂರು, ಅಬೂಬಕ್ಕರ್ ಹಾಜಿ ಮಂಗಳಾ, ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ಹಾಜಿ ಅಶ್ರಫ್, ಹಸೈನಾರ್ ಎಂ.ಡಿ, ಸಿ.ಕೆ ಮಹಮ್ಮದ್ ದಾರಿಮಿ, ಫಾರೂಕ್ ದಾರಿಮಿ, ಅಬ್ದುಲ್ಲಾ ಸಿ.ಎಚ್, ಅಬ್ದುಲ್ ಅಝೀಝ್ ಸಿ.ಎಚ್, ಎನ್.ಎಸ್ ಅಬ್ದುಲ್ಲ ಹಾಜಿ ಈಶ್ವರಮಂಗಲ, ಹಸೈನಾರ್ ಸಿ.ಕೆ, ಖಾಲಿದ್ ಬಿ.ಎಂ, ಇಬ್ರಾಹಿಂ ಹಾಜಿ(ಲುಲು ಗ್ರೂಪ್), ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ಖಲಂದರ್ ಶಾಫಿ, ಇದ್ದೀನ್ ಕುಂಞಿ, ಅಬ್ದುಲ್ಲಾ ಬಿ.ಕೆ, ಯುಎಇ ನ್ಯಾಶನಲ್ ಕಮಿಟಿ ಅಧ್ಯಕ್ಷ ಶರೀಫ್ ಬಿ.ಕೆ, ಕಾರ್ಯದರ್ಶಿ ಲತೀಫ್ ಕೌಡಿಚ್ಚಾರ್, ಕೋಶಾಧಿಕಾರಿ ಅಶ್ರಫ್ ಯಾಕೂತ್, ರಕ್ಷಕ ಶಿಕ್ಷಕ ಸಮಿತಿಯ ಅಲೀ ಮುಸ್ಲಿಯಾರ್, ನೌಫಲ್ ಹುದವಿ, ಮಾಡನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ನೂರುಲ್ ಹುದಾ ಇಸ್ಲಾಂ ಮದ್ರಸದ ಪ್ರಧಾನ ಅಧ್ಯಾಪಕ ಅಮೀರ್ ಅರ್ಶದಿ, ಸ್ಟಾಫ್ ಕೌನ್ಸಿಲ್ ಸದಸ್ಯರಾದ ಅಸ್ಸಯ್ಯದ್ ಬುರ್ಹಾನ್ ಅಲೀ ತಂಙಳ್, ಅಮೀರ್ ಜಾನ್ ಹುದವಿ ಮೂಡಿಗೆರೆ, ತ್ವಾಹಾ ಹುದವಿ, ಆಶಿಕ್ ಅಜ್ಜಿಕಲ್ಲು, ಖಲಂದರ್ ಹುದವಿ, ನೌಫಲ್ ಹುದವಿ ಮೊದಲಾದವರು ಅಭಿನಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.