‌ಕಬಾಬ್‌ ನ 20 ರೂಪಾಯಿ ವಿವಾದ – ಫಾಸ್ಟ್ ಫುಡ್‌ ಅಂಗಡಿ ಯುವಕನಿಗೆ ಹಲ್ಲೆ – ಕೇಸು ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಹೆದ್ದಾರಿ ಬದಿಯಲ್ಲಿರುವ ಫಾಸ್ಟ್‌ಫುಡ್ ಗಾಡಿಯಲ್ಲಿ ಕಬಾಬ್‌ಗೆ 20 ರೂ. ಹೆಚ್ಚುವರಿ ಪಡೆಯಲಾಗಿದೆ ಎಂಬ ಕಾರಣಕ್ಕಾಗಿ  ಅಲ್ಲಿ ಕೆಲಸಕ್ಕಿರುವ ಯುವಕನಿಗೆ ಅಪರಿಚಿತರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ನ.17ರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.

34ನೆಕ್ಕಿಲಾಡಿಯ ಆದರ್ಶನಗರದ ನಿವಾಸಿ ಮುಹಮ್ಮದ್ ಬಾತಿಷಾ (20) ಇವರು ಪದವಿ ವಿದ್ಯಾರ್ಥಿಯಾಗಿದ್ದು, ಸಂಜೆಯ ಬಳಿಕ  ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಠದ ಇಲ್ಯಾಸ್ ಎಂಬವರ ಫಾಸ್ಟ್‌ಫುಡ್ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಇವರು ಕೆಲಸ ಮಾಡುತ್ತಿದ್ದಾಗ ರಾತ್ರಿ 10:30ರ ಸುಮಾರಿಗೆ ಇನೋವಾ ಹಾಗೂ ರಿಡ್ಜ್ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು  ಅದರಿಂದ ಇಳಿದ ನಾಲ್ವರು ನಮ್ಮ ಪೈಕಿಯವರೋರ್ವರಲ್ಲಿ ಕಬಾಬ್‌ಗೆ ನೀವು 20 ರೂ. ಜಾಸ್ತಿ ತೆಗೆದುಕೊಂಡಿದ್ದೀರಿ ಎಂದು ತಗಾದೆ ತೆಗೆದು, ಜಗಳಕ್ಕೆ ಇಳಿದಿದ್ದರು. ಆಗ ನಾವು ಆ ರೀತಿ ಮಾಡಲಿಲ್ಲ ಎಂದು ಫಾಸ್ಟ್‌ಫುಡ್ ಗಾಡಿಯವರು ಹೇಳಿದ್ದು, ಒಂದು ವೇಳೆ ಕಣ್ತಪ್ಪಿನಿಂದ ಆಗಿದ್ದರೆ ಆ ಹಣವನ್ನು ವಾಪಸ್ ಕೊಡುತ್ತೇವೆ. ನೀವು ಜಗಳ ಮಾಡಬೇಡಿ ಎಂದು ತಿಳಿಸಿದ್ದರು. ಆದರೂ ಅದನ್ನು ಕೇಳಿಸಿಕೊಳ್ಳದ ತಂಡವು ಮತ್ತಷ್ಟು ಮಾತಿನ ಚಕಮಕಿಗೆ ಮುಂದಾದಾಗ ಅಲ್ಲೇ ಇದ್ದ ಗ್ರಾಹಕರೋರ್ವರು 20 ರೂಪಾಯಿಗಾಗಿ ನೀವು ಜಗಳ ಮಾಡಬೇಡಿ. ಅದನ್ನು ನಾನು ನಿಮಗೆ ಕೊಡುತ್ತೇನೆ ಎಂದಿದ್ದರು. ಆಗ ಆ ಗುಂಪು ಅವರಿಗೆ ಹೊಡೆಯಲು ಮುಂದಾಗಿದ್ದು, ಆಗ ಅಡ್ಡ ಬಂದ ಮುಹಮ್ಮದ್ ಬಾತಿಷನ ಮೇಲೆ  ಕಾರಿನಲ್ಲಿದ್ದ  ಗುಂಪು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾಗಿದೆ. ಈ ಬಗ್ಗೆ ಬಾತಿಷ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಆರೋಪಿಗಳು ವಿಟ್ಲ ಕಡೆಯವರು ಎಂಬ ಮಾಹಿತಿ ಇದೆ. 

ಉಪ್ಪಿನಂಗಡಿ: ಫಾಸ್ಟ್ ಫುಡ್ ಅಂಗಡಿಯ ಮಾಲೀಕನಿಗೆ ಅಪರಿಚಿತ ತಂಡದಿಂದ ಹಲ್ಲೆ – ಪರಾರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.