ಶತಾಯುಷಿ ಸವಣೂರು ಗುರುಪುಂತ್ತಾರು ವೀರಪ್ಪ ಗೌಡರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನ.3 ರಂದು ನಿಧನರಾದ ಶತಾಯುಷಿ ಸವಣೂರು ಗ್ರಾಮದ ಗುರುಪುಂತ್ತಾರು ನಿವಾಸಿ, ವೀರಪ್ಪ ಗೌಡ ಸುಣ್ಣಾಜೆರವರ ವೈಕುಂಠ ಸಮಾರಾಧನೆಯು ನ. 18 ರಂದು ಸವಣೂರು ಗುರುಪುಂತ್ತಾರಿನಲ್ಲಿ ಜರಗಿತು.

ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಸಾಮಾಜಿಕ ಮುಂದಾಳು ಬೆಳಿಯಪ್ಪ ಗೌಡ ಚೌಕಿಮಠರವರು ಮಾತನಾಡಿ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ವೀರಪ್ಪ ಗೌಡರವರು ಸಮಾಜ ಮತ್ತು ಕುಟುಂಬದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಕೂಡು ಕುಟುಂಬದ ನೇತ್ರತ್ವವನ್ನು ವೀರಪ್ಪ ಗೌಡರವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ತನ್ನ ಕುಟುಂಬದ ಎಲ್ಲರ ಅಚ್ಚುಮೆಚ್ಚಿಗೆಗೆ ಪಾತ್ರರಾಗಿದ್ದರು. ವೀರಪ್ಪ ಗೌಡರವರ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಶಿಕ್ಷಕ, ಸವಣೂರು ಶ್ರವಣರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರುರವರು ಮಾತನಾಡಿ ವೀರಪ್ಪ ಗೌಡರವರು ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ, ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಕೃಷಿಕರಾಗಿದ್ದ ವೀರಪ್ಪ ಗೌಡರವರು ತನ್ನ ಮಕ್ಕಳನ್ನು ಸಮಾಜ ಸೇವಾ ಕಾರ್‍ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದರು. ಇದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದು ಹೇಳಿದರು.

ವೀರಪ್ಪ ಗೌಡರವರ ಪತ್ನಿ ಜಾಕಮ್ಮ, ಪುತ್ರರಾದ ಜತ್ತಪ್ಪ ಗೌಡ, ರಾಘವ ಗೌಡ, ಸುಂದರ ಗೌಡ, ಹೊನ್ನಪ್ಪ ಗೌಡ, ಶಿವಪ್ಪ ಗೌಡ, ಪುತ್ರಿಯರಾದ ಯಮುನಾ, ಪುಷ್ಪಾವತಿ, ಉಮಾವತಿ, ಅಳಿಯಂದಿರಾದ ದಿವಾಕರ, ಬಾಲಪ್ಪ, ರಾಧಾಕೃಷ್ಣ, ಸೊಸೆಯಂದಿರಾದ ರತ್ನಾ, ಪ್ರೇಮಲತಾ, ಭಾರತಿ, ವೀಣಾ, ಚಿತ್ರಾ ಹಾಗೂ ಮೊಮ್ಮಕ್ಕಳು ಮತ್ತು ಮರಿಮಕ್ಕಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಹಾಗೂ ರಾಜಕೀಯ ಮುಂದಾಳುಗಳು, ವಿವಿಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಊರ ಹಾಗೂ ಪರವೂರ ಹಿತೈಷಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.