ಆಲಂಕಾರು ಸರಕಾರಿ ಶಾಲಾ ಮುಖ್ಯಶಿಕ್ಷಕ ನಿಂಗರಾಜುರವರಿಗೆ ‘ ಯೆನೆಪೋಯ ಶಿಕ್ಷಕ ಪ್ರಶಸ್ತಿ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಮಂಗಳೂರಿನ ಯೆನೆಪೋಯ ಶಾಲೆ ಮತ್ತು ಯೆನೆಪೋಯ ಪದವಿ ಪೂರ್ವ ಕಾಲೇಜು ಪ್ರಾಯೋಜಿತ ಯೆನೆಪೋಯ ಮೊದ್ದೀನ್ ಕುಂಞಿ ಮೆಮೋರಿಯಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನೀಡುವ ‘ಯೆನೆಪೋಯ ಶಿಕ್ಷಕ ಪ್ರಶಸ್ತಿ-2021’ಕ್ಕೆ ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ನಿಂಗರಾಜುರವರು ಆಯ್ಕೆಗೊಂಡಿದ್ದಾರೆ.

ನಿಂಗರಾಜುರವರು ಶಾಲೆಗೆ ಸುಸಜ್ಜಿತ ಶಾಲಾ ಕಟ್ಟಡ, ಇಂಗ್ಲಿಷ್‌ನ ನಾವೀನ್ಯಯುತ ಕಲಿಕೆ, ಗುಬ್ಬಚ್ಚಿ ಸ್ಪೀಕಿಂಗ್, ಹೆಣ್ಣು ಮಕ್ಕಳ ಮತ್ತು ವಿಕಲಚೇತನರ ಶಿಕ್ಷಣಕ್ಕೆ ಪ್ರೋತ್ಸಾಹ, ವಿಶೇಷ ದಾಖಲಾತಿ ಆಂದೋಲನ, ಬಾಲ ಕಾರ್ಮಿಕರ ಶಾಲೆಗೆ ಸೇರ್ಪಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸರಕಾರಿ ಶಾಲೆಯ ಸರ್ವತೋಮುಖ ಏಳಿಗೆಗೆ ಶ್ರಮಿಸಿರುವುದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ನಿಂಗರಾಜುರವರಿಗೆ ೨೦೧೬-೧೭ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.