ರಾಮಕುಂಜ: ಜಲಜೀವನ್ ಮಿಷನ್, ಸ್ವಚ್ಛ ಭಾರತ ಮಿಷನ್ ವತಿಯಿಂದ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿಯಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.


ಜಿಲ್ಲಾ ಮಾಹಿತಿ ಸಂವಹನ ಸಂಯೋಜನಾ ಅಧಿಕಾರಿ ಮಹಾಂತೇಶ್‌ರವರು ನೀರಿನ ಮಹತ್ವವನ್ನು, ಅಂತರ್ಜಲದ ಸಂರಕ್ಷಣೆ ಮತ್ತು ಮರುಪೂರಣೆಯ ಬಗ್ಗೆ ವಿವರಿಸಿ ಜಲಸಂರಕ್ಷಣೆಯತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ರಾಮಕುಂಜ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್‌ರವರು ಜಲ ಸಂರಕ್ಷಣೆಯ ಬಗ್ಗೆ ಸರಕಾರದಿಂದ ಲಭ್ಯವಿರುವ ಯೋಜನೆಗಳ ಬಗ್ಗೆ ವಿವರಿಸಿದರು.


ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳಾದ ಮಹಂತೇಶ್ ಮತ್ತು ಜೆರಾಲ್ಡ್ ಮಸ್ಕರೇನಸ್ ಇವರು ಬಹುಮಾನವನ್ನು ವಿತರಿಸಿದರು. ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲಾ ಶಿಕ್ಷಕಿ ಸುಪ್ರಿತಾರವರು ವಾಚಿಸಿದರು. ಅಂತರ್ಜಲ ಸಂರಕ್ಷಣೆ ಮತ್ತು ಮರುಪೂರಣೆ ಎಂಬ ವಿಷಯದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಮಧುಶ್ರೀ ಎ.,(೯ನೇ ತರಗತಿ)ರವರು ಪ್ರಥಮ, ಪಣಮ್ಯ ಎ.,(೮ನೇ ತರಗತಿ) ದ್ವಿತೀಯ ಸ್ಥಾನ ಮತ್ತು ಯಜ್ಞ ಎಮ್ (೮ನೇ ತರಗತಿ) ತೃತೀಯ ಬಹುಮಾನ ಪಡೆದುಕೊಂಡರು. ಸ್ವಚ್ಛ ಗ್ರಾಮ ಎಂಬ ವಿಷಯದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ಶ್ರವಣ್(೮ನೇ ತರಗತಿ) ಪ್ರಥಮ, ಧೀರಜ್ ಎಮ್ (೯ನೇ ತರಗತಿ) ದ್ವಿತೀಯ, ಕುಶನ್ ಬಿ (೯ನೇ ತರಗತಿ) ಮತ್ತು ವರ್ಷಾ.ಕೆ (೧೦ನೇ ತರಗತಿ)ರವರು ತೃತೀಯ ಬಹುಮಾನ ಪಡೆದುಕೊಂಡರು. ಪರಿಸರ ಸಂರಕ್ಷಣೆ ಸಾಧ್ಯವೇ ಎಂಬ ವಿಷಯದಲ್ಲಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಜೀವನ್ ಎಸ್(೧೦ನೇ ತರಗತಿ) ಪ್ರಥಮ, ರಾಮಕೃಷ್ಣ ಎಮ್ (೯ನೇ ತರಗತಿ) ದ್ವಿತೀಯ ಮತ್ತು ನಿಶ್ಮಾ (೧೦ನೇ ತರಗತಿ)ರವರು ತೃತೀಯ ಸ್ಥಾನ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್‌ರವರು ಸ್ವಾಗತಿಸಿ, ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ‘ಜಲ ಸಂರಕ್ಷಣಾ’ ಜಾಥಾ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.