ಉಪ್ಪಿನಂಗಡಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ತಂಡದ ಹೊಡೆದಾಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಇತ್ತಂಡದ 5 ಮಂದಿ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ:ಇಲ್ಲಿನ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ 2 ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಇತ್ತಂಡದ 5 ಮಂದಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.ವಿದ್ಯಾರ್ಥಿನಿಯೋರ್ವಳ ಮೊಬೈಲ್ ಸಂಖ್ಯೆಯನ್ನು ನೀಡಬೇಕೆಂದು ಭಿನ್ನ ಕೋಮಿನ ಸಹಪಾಠಿ ವಿದ್ಯಾರ್ಥಿಯೋರ್ವ ಕೇಳಿದ್ದು ಇದನ್ನು ಆಕ್ಷೇಪಿಸಿ ವಿದ್ಯಾರ್ಥಿನಿ ಪರ ತಂಡ ವಿಚಾರಿಸಿದಾಗ ಇತರೇ ವಿದ್ಯಾರ್ಥಿಗಳು ಮುಗಿಬಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಇನ್ನೊಂದು ಮೂಲಗಳ ಪ್ರಕಾರ, ಕಾಲೇಜಿನಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ತಂಡವೊಂದು ಜೊತೆಯಾಗಿ ಫೊಟೋ ತೆಗೆಸಿಕೊಂಡಿದ್ದು, ಈ ತಂಡದಲ್ಲಿ ಭಿನ್ನ ಕೋಮಿನ ಓರ್ವ ವಿದ್ಯಾರ್ಥಿಯೂ ಇದ್ದು,ಈ ವಿಚಾರದಲ್ಲಿ ಇತರೇ ಕೆಲ ವಿದ್ಯಾರ್ಥಿಗಳು, “ಅವರುಗಳೊಂದಿಗೆ ನೀನು ಯಾಕೆ ಫೊಟೋ ತೆಗೆಯಲು ನಿಂತಿದ್ದು” ಎಂದು ಭಿನ್ನಕೋಮಿನ ವಿದ್ಯಾರ್ಥಿಯಲ್ಲಿ ವಿಚಾರಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಒಟ್ಟಿನಲ್ಲಿ ಒಂದು ತಂಡದಿಂದ ಮೂವರು ವಿದ್ಯಾರ್ಥಿಗಳು ಮತ್ತು ಇನ್ನೊಂದು ತಂಡದಿಂದ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.