ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರು ನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ “ಸೇವಾದೀಕ್ಷಾ” ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

 

                      ಸುರೇಂದ್ರ ಕಿಣಿ
                     ವಿಜಯನಾರಾಯಣ ಕೆ.ಎಂ

 

                     ಯಶೋಧರ ಜೈನ್

ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿರುವ ಡಾ. ಸುಧಾ ಎಸ್ ರಾವ್ ಇವರು ನೂತನ ಸದಸ್ಯರುಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಪ್ರತಿಯೊಬ್ಬ ನೂತನ ಸದಸ್ಯರೂ ದೀಪ ಪ್ರಜ್ವಲನೆ ಮಾಡಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಸಾಂಕೇತಿಕವಾಗಿ ಸೇವಾದೀಕ್ಷೆಯನ್ನು ಪಡೆದುಕೊಂಡರು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪುತ್ತೂರಿನ ಖ್ಯಾತ ಉದ್ಯಮಿಯಾಗಿರುವ ಸುರೇಂದ್ರ ಕಿಣಿ ಜವಾಬ್ದಾರಿ ಸ್ವೀಕರಿಸಿದ್ದು, ಸಂಚಾಲಕರಾಗಿ ಪುತ್ತೂರಿನ ನ್ಯಾಯವಾದಿ ವಿಜಯನಾರಾಯಣ ಕೆ.ಎಂ, ಕೋಶಾಧಿಕಾರಿಯಾಗಿ ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಯಶೋಧರ ಜೈನ್ ಜವಾಬ್ದಾರಿ ಸ್ವೀಕರಿಸಿದರು.

 

ಇವರೊಂದಿಗೆ ನೂತನ ಸದಸ್ಯರಾಗಿ ನ್ಯಾಯವಾದಿಗಳಾದ  ನಾಗರಾಜ್,  ಅರುಣ್ ಬಿ.ಕೆ,  ಸುರೇಶ್ ರೈ ಪಡ್ಡಂಬೈಲು,  ಚೇತನ್ ನಾಯಕ್ ಎಸ್, ಸಂಘಟಕರಾದ  ಪ್ರಮಿತಾ ಸಿ ಹಾಸ್, ತಿ ವೀಣಾ ರೈ ಜವಾಬ್ದಾರಿ ಸ್ವೀಕರಿಸಿದರು. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ ಸ್ವಾಗತಿಸಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪರಿಚಯವನ್ನು ಮಾಡಿದರು. ಕಾನೂನು ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ ವಂದಿಸಿ, ಕಾಲೇಜಿನ ಆಂಗ್ಲ ಉಪನ್ಯಾಸಕಿ  ಸಂಧ್ಯಾ ಪಿ.ಎಂ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಕೋಶಾಧಿಕಾರಿ  ಅಚ್ಚುತ ನಾಯಕ್ ಮಾರ್ಗದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.