ನೆಲ್ಲಿಕಟ್ಟೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ ಆರೋಪ – ವಿದ್ಯಾರ್ಥಿಗಳಲ್ಲದವರ ಜೊತೆ ಮಾತಿನ ಚಕಮಕಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ ಆರೋಪಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಸಹಪಾಠಿಗಳು ವಿದ್ಯಾರ್ಥಿಗಳಲ್ಲದವರನ್ನು ಪ್ರಶ್ನಿಸಿದ ಮತ್ತು ಈ ವೇಳೆ ಮಾತಿಗೆ ಮಾತು ಬೆಳೆದಾಗ ಸ್ಥಳಕ್ಕೆ ಮಹಿಳಾ ಠಾಣಾ ಪೊಲೀಸರು ಆಗಮಿಸಿದ ಘಟನೆ ನ.19ರಂದು ಸಂಜೆ ಪುತ್ತೂರು ನೆಲ್ಲಿಕಟ್ಟೆ ಸಮೀಪ ನಡೆದಿದೆ.

ಕಾಲೇಜು ವಿದ್ಯಾರ್ಥಿನಿಯರು ಸಂಜೆ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಅವರನ್ನು ಇಬ್ಬರು ಅಪರಿಚಿತರು ಹಿಂಬಾಲಿಸುತ್ತಿದ್ದರೆಂದು ಆರೋಪಿಸಿ ಇತರ ವಿದ್ಯಾರ್ಥಿಗಳು ಹಿಂಬಾಲಿಸುತ್ತಿದ್ದವರೆನ್ನಲಾದ ಬನ್ನೂರು ಮತ್ತು ಪುತ್ತೂರು ನಿವಾಸಿಯವರಿಬ್ಬರನ್ನು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಇದೇ ವೇಳೇ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸರು ಅಪರಿಚಿತರಿಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿನಿ ನೀಡಿದ ಹೇಳಿಕೆ ಆಧಾರದಲ್ಲಿ ಅಪರಿಚಿತರಿಬ್ಬರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅಪರಿಚಿರಿಬ್ಬರು ನಾವು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ್ದಲ್ಲ. ಅವರ ಮುಂದಿದ್ದ ಸಾರ್ವಜನಿಕರ ವ್ಯಕ್ತಿಗಳಿಬ್ಬರನ್ನು ಹಿಂಬಾಲಿಸಿದ್ದು, ಆದರೆ ವಿದ್ಯಾರ್ಥಿನಿಯರು ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.