ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 14.28 ಲಕ್ಷ ಲಾಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸದಸ್ಯರಿಗೆ ಶೇ.13 ಡಿವಿಡೆಂಡ್ ಘೋಷಣೆ – ಗೋಪಾಲಕೃಷ್ಣ ಭಟ್

ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಮತ್ತು ವಿಟ್ಲದಲ್ಲಿ ಶಾಖಾ ಕಚೇರಿ ಹೊಂದಿದ್ದು ಉತ್ತಮವಾಗಿ ವ್ಯವಹಾರ ನಡೆಸುತ್ತಿರುವ ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘವು ವಷಾಂತ್ಯಕ್ಕೆ ರೂ. 14,28,764 ಲಾಭ ಗಳಿಸಿದೆ. ಲಾಭವನ್ನು ಉಪ ನಿಬಂಧನೆಯಂತೆ ಹಂಚಲಾಗಿದ್ದು, ಸದಸ್ಯರ ಅನುಮತಿ ಪಡೆದು ಶೇ.13 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್‌ನಲ್ಲಿ ಸಂಘದ ಕೇಂದ್ರ ಕಚೇರಿಯ ಬಳಿಯ ಸಭಾಂಗಣದಲ್ಲಿ ನ.20ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲೂ ಸಂಘದ ಸದಸ್ಯರ ಸಹಕಾರದಿಂದ ಉತ್ತಮ ವ್ಯವಹಾರ ನಡೆಸಲಾಗಿದೆ. ಸಂಘದ ಒಟ್ಟು ವ್ಯವಹಾರದಿಂದ ಬಂದಿರುವ ಲಾಭಕ್ಕೆ ಸಂಬಂಧಿಸಿ ಶೇ.13 ಡಿವಿಡೆಂಡ್ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ.

 

ಕಬಕ ಶಾಖೆ ತೆರೆಯಲು ಅನುಮತಿ:
ಸಹಕಾರಿಯು ಪುತ್ತೂರಿನಲ್ಲಿ ಕೇಂದ್ರ ಕಚೇರಿ ಮತ್ತು ವಿಟ್ಲದಲ್ಲಿ ಶಾಖೆಗಳನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಬಕದಲ್ಲಿ ರಾಜ್ಯ ಸೌಹಾರ್ದ ಸಹಕಾರಿಯಿಂದ ಶಾಖೆಯನ್ನು ತೆರೆಯಲು ಚಿಂತಿಸಿದಂತೆ ಶಾಖೆಯನ್ನು ತೆರಯಲು ಅನುಮತಿ ಸಿಕ್ಕಿದೆ ಎಂದು ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮಂಜುನಾಥ್ ವಾರ್ಷಿಕ ವರದಿ ಸೇರಿದಂತೆ ವಿವಿಧ ನಿಯಮಾವಳಿಗಳನ್ನು ಸಭೆಗೆ ಮಂಡಿಸಿದರು. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಕುಂತಳಾ ಟಿ ಶೆಟ್ಟಿ, ಕೆ.ಸಂಜೀವ ನಾಯಕ್, ರಾಮಚಂದ್ರ ಗೌಡ, ಬಾಲಕೃಷ್ಣ ಬೋರ್ಕರ್, ರಘುರಾಮ ರೈ, ಮನಮೋಹನ ರೈ, ವಿಶಾಲ್ ರೈ ಎಂ, ಬಿ.ನಾರಾಯಣ ನಾಯ್ಕ, ಸರಸ್ವತಿ ಇ ಭಟ್, ಕೃಷ್ಣಪ್ಪ ಪೂಜಾರಿ, ಚಿದಾನಂದ ಸುವರ್ಣ, ಗೌರವ ಸಲಹೆಗಾರ ವಿಶ್ವನಾಥ ರೈ ಎಂ.ಬಿ, ವಿಟ್ಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜಾನ್ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಕಲಾಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಬಾಲಕೃಷ್ಣ ಬೋರ್ಕರ್ ಸ್ವಾಗತಿಸಿ, ಗಂಗಾರತ್ನ ವಿ.ರೈ ಎಂ ವಂದಿಸಿದರು. ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖಾ ಮೆನೇಜರ್ ಲಕ್ಷ್ಮೀರಾಜ್, ಪುತ್ತೂರು ಮತ್ತು ವಿಟ್ಲ ಶಾಖೆಯ ಸಿಬ್ಬಂದಿಗಳಾದ ಮಮತಾ, ಮಂಗಳ, ಸುಮಿತ್ರ, ರಂಜಿತ್, ಭವ್ಯ, ರಮೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.