ಗುಣಮಟ್ಟದ ಶಿಕ್ಷಣವಿದ್ದರೂ ಪಾಠ ಮಾಡಲು ಕೊಠಡಿಯ ಕೊರತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉಪ್ಪಿನಂಗಡಿ ಪಿಯು ಕಾಲೇಜಿಗೆ ದಾಖಲಾತಿ ಸಂಖ್ಯೆಯೇ ಭಾರ!!

ಉಪ್ಪಿನಂಗಡಿ: ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿ ವಿದ್ಯಾರ್ಥಿಗಳ ಉತ್ತಮ ದಾಖಲಾತಿ ಸಂಖ್ಯೆಯನ್ನು ಹೊಂದಿರುವ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಸಜ್ಜಿತ ಕೊಠಡಿಗಳ ಕೊರತೆಯಿದ್ದು, ಇದರಿಂದಾಗಿ ತೆರವುಗೊಳಿಸಲು ನಿರ್ದೇಶಿಸಲ್ಪಟ್ಟ ಹಳೆಯ ಕಟ್ಟಡದಲ್ಲೇ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.


ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗಣಕ ವಿಜ್ಞಾನ ವಿಭಾಗಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಈ ಬಾರಿ 1025 ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿದ್ದಾರೆ. ಪ್ರಸಕ್ತ ಇಲ್ಲಿ ೧೩ ತರಗತಿಗಳು ನಡೆಯುತ್ತಿದ್ದು, ಅವುಗಳಲ್ಲಿ 6 ತರಗತಿಗಳನ್ನು ಹಳೆಯ ಹಂಚು ಛಾವಣಿಯ ಕಟ್ಟಡದಲ್ಲೇ ನಡೆಸಲಾಗುತ್ತಿದೆ. ಅಲ್ಲದೇ, ಸನಿಹದಲ್ಲೇ ಇರುವ ಪ್ರೌಢಶಾಲಾ ವಿಭಾಗದ 2 ಕೊಠಡಿಗಳನ್ನು ಕಾಲೇಜಿನ ಬಳಕೆಗೆ ಪಡೆಯಲಾಗಿದೆ. ಕಾಲೇಜಿನ ಗ್ರಂಥಾಲಯವನ್ನು ಪ್ರಯೋಗಶಾಲೆಗೆ ಸ್ಥಳಾಂತರಿಸಿ, ಆ ಕೊಠಡಿಯನ್ನೂ ತರಗತಿ ಕೊಠಡಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಕೊಠಡಿಗಳ ಕೊರತೆಯ ನಡುವೆಯೂ ಈ ಕಾಲೇಜಿನಲ್ಲಿ ಕಲಿಕಾ ಗುಣಮಟ್ಟ ಉತ್ತಮವಾಗಿದ್ದು, ಇದರಿಂದಾಗಿ ಶಿಕ್ಷಣವನ್ನು ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಪ್ರತಿ ವರ್ಷ ಹೆಚ್ಚುತ್ತಿದೆ.

ಕಳೆದ 2020-21 ರ ಸಾಲಿನಲ್ಲಿ ಕೊರೋನಾ ಕಾರಣದಿಂದ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಉತ್ತೀರ್ಣರಾಗಿದ್ದು, ಪರೀಕ್ಷೆ ನಡೆದ 2019-20 ರ ಸಾಲಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇ. 99.5ಉತ್ತೀರ್ಣತೆಯನ್ನು ಸಾಧಿಸಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಶೇ. 98 ಉತ್ತೀರ್ಣತೆಯನ್ನು ದಾಖಲಿಸುವ ಮೂಲಕ ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಇಲ್ಲಿನ ಕಲಿಕಾ ಪದ್ಧತಿ ಗಮನ ಸೆಳೆದಿದೆ.

ತರಗತಿ ಕೊಠಡಿಯಲ್ಲಿ ತಲಾ 100 ವಿದ್ಯಾರ್ಥಿಗಳನ್ನು ಕೂಡಿಟ್ಟು ಪಾಠ ಮಾಡುವ ಸ್ಥಿತಿ ಇಲ್ಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ದ್ವನಿ ಕೇಳಿಸುವಂತಾಗಲು ಧ್ವನಿ ವರ್ಧಕವನ್ನು ಬಳಸಿ ಪಾಠ ಮಾಡುವ ಅನಿವಾರ್ಯತೆ ಇಲ್ಲಿದೆ. ಪ್ರಸಕ್ತ ಹಂಚಿನ ಛಾವಣಿಯ ಕಟ್ಟಡ ಹಲವು ದಶಕಗಳ ಹಿಂದೆ ನಿರ್ಮಿಸಿದ ಕಟ್ಟಡವಾಗಿದ್ದು, ಛಾವಣಿ ಕುಸಿಯದಂತೆ ತಾತ್ಕಲಿಕ ದುರಸ್ತಿ ಕಾರ್ಯವನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ಹಾಗೂ ಕಲಿಕಾ ಅನುಕೂಲತೆಯ ದೃಷ್ಟಿಯಿಂದ ಸುಸಜ್ಜಿತ ಕಟ್ಟಡದ ನಿರ್ಮಿಸುವ ಅಗತ್ಯತೆ ಇಲ್ಲಿದೆ.

ಸರಕಾರದ ಗಮನ ಸೆಳೆಯಲಾಗಿದೆ: ಸುರೇಶ್ ಅತ್ರೆಮಜಲು
ಕಂಪ್ಯೂಟರ್ ಶಿಕ್ಷಣವನ್ನು ಹೊಂದಿರುವ ಜಿಲ್ಲೆಯ ಕೆಲವೇ ಕೆಲವು ಸರಕಾರಿ ಕಾಲೇಜುಗಳ ಪೈಕಿ ಒಂದಾಗಿರುವ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ. ಆದರೆ ಸೂಕ್ತ ಸುಸಜ್ಜಿತ ಕಟ್ಟಡದ ಕೊರತೆಯಿಂದಾಗಿ ಹಳೆಯ ಹಂಚಿನ ಛಾವಣಿಯ ಕಟ್ಟಡದಲ್ಲೇ ತರಗತಿಗಳನ್ನು ನಡೆಸುವ ಸ್ಥಿತಿ ಇದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಸತತ ಹೆಚ್ಚಳವನ್ನೇ ಕಾಣುತ್ತಿರುವ ಈ ಕಾಲೇಜಿನಲ್ಲಿ ಬೆಂಚು ಡೆಸ್ಕುಗಳ ಕೊರತೆಯೂ ಇದೆ. ಈ ಕಾಲೇಜಿನ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಅವಶ್ಯಕತೆಗಳ ಪಟ್ಟಿಯನ್ನು ಶಾಸಕರ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ ಸುರೇಶ್ ಅತ್ರೆಮಜಲು ಕಾರ್ಯಾಧ್ಯಕ್ಷರು ಕಾಲೇಜು ಆಡಳಿತ ಮತ್ತು ಮೇಲುಸ್ತುವಾರಿ ಸಮಿತಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.