ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿದ್ದ ಯುವಕನ ಮನೆಗೆ ಬೇರೊಂದು ಯುವತಿಯ ದಿಬ್ಬಣ-ನಾಪತ್ತೆಯಾದ ಯುವಕ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಈಶ್ವರಮಂಗಲ ಮುಂಡ್ಯಕರೆಂಟಿಯಡ್ಕದಲ್ಲಿ ದುರ್ಘಟನೆ
  • ನ.25ರಂದು ನಿಶ್ಚಿತಾರ್ಥ ನಡೆಯಲಿದ್ದ ಯುವಕ
  • ದಿಢೀರ್ ಬಂದ ಬೇರೊಂದು ಯುವತಿಯ ದಿಬ್ಬಣ

ಪುತ್ತೂರು:ನ.25ರಂದು ವಿವಾಹ ನಿಶ್ಚಿತಾರ್ಥ ನಡೆಯಲಿದ್ದ ಯುವಕನೋರ್ವನನ್ನು ಮದುವೆಯಾಗಲೆಂದು ಬೇರೊಂದು ಹುಡುಗಿ ಕಡೆಯವರು ದಿಬ್ಬಣ ಸಮೇತರಾಗಿ ಬಂದ ಮತ್ತು ಈ ವೇಳೆ ನಾಪತ್ತೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ನೆಟ್ಟಣಿಗೆಮುಡ್ನೂರು ಗ್ರಾಮದ ಮುಂಡ್ಯ ಕರೆಂಟಿಯಡ್ಕದಲ್ಲಿ ಈ ಘಟನೆ ನಡೆದಿದೆ.

ಸುಳ್ಯಪದವು ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ಪುತ್ರ ರವಿರಾಜ್(31ವ.)ರವರು ಆತ್ಮಹತ್ಯೆ ಮಾಡಿಕೊಂಡವರು.ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರವಿರಾಜ್ ಅವರಿಗೆ ನ.25ಕ್ಕೆ ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿತ್ತು.ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಿಂದ ನ.19ಕ್ಕೆ ಊರಿಗೆ ಬಂದಿದ್ದರು.ನ.20ರಂದು ಅವರು, ಪುತ್ತೂರಿನಲ್ಲಿರುವ ಸ್ನೇಹಿತರ ಮನೆಗೆ ಹೋಗಿ ನ.21ರಂದು ಸಂಜೆ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು.

ಕುಂದಾಪುರದಿಂದ ಬಂತು ದಿಬ್ಬಣ: ನ.25ರಂದು ರವಿರಾಜ್ ಅವರ ವಿವಾಹ ನಿಶ್ಚಿತಾರ್ಥ ನಡೆಸಲು ಮನೆಯವರು ನಿರ್ಧರಿಸಿದ್ದರು.ಈ ನಡುವೆ ರವಿರಾಜ್ ಅವರನ್ನು ಮದುವೆಯಾಗಲೆಂದು ನ.21ರಂದು ಕುಂದಾಪುರದಿಂದ ಬೇರೊಂದು ಹುಡುಗಿಯ ದಿಬ್ಬಣ ದಿಢೀರ್ ಬಂದಾಗ ಗೊಂದಲಕ್ಕೊಳಗಾದ ಮನೆಯವರು ರವಿರಾಜ್ ಅವರನ್ನು ಹುಡುಕಾಡಿದರು.ಆದರೆ ಅವರು ಮನೆಯಲ್ಲಿರಲಿಲ್ಲ.ಆತಂಕಿತರಾಗಿ ಮನೆಯವರು ಹುಡುಕಾಟ ಮುಂದುವರಿಸಿದರು.ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಕರೆಂಟಿಯಡ್ಕದಲ್ಲಿ ವಿದೇಶದಲ್ಲಿರುವ ರವಿರಾಜ್ ಅವರ ಸಹೋದರನ,ಇನ್ನೂ ಗೃಹಪ್ರವೇಶ ನಡೆಯದ ಹೊಸ ಮನೆಯ ಬಚ್ಚಲು ಕೋಣೆಯಲ್ಲಿ ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಇತ್ತ,ಕುಂದಾಪುರದಿಂದ ಬಂದಿದ್ದ ಮದುವೆ ದಿಬ್ಬಣ ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ವಾಪಾಸಾಗಿದೆ.ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ಜಗನ್ನಾಥ ರವರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.ಮೃತ ರವಿರಾಜ್‌ರವರು ತಂದೆ,ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.ಮೃತರ ತಂದೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರವಿರಾಜ್ ಅವರಿಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ ಕುಂದಾಪುರದ ಯುವತಿಯ ಪರಿಚಯವಾಗಿ ಪ್ರೇಮಾಂಕುರವಾಗಿ ರವಿರಾಜ್ ಆಕೆಯನ್ನು ಮದುವೆಯಾಗುವ ಭರವಸೆ ನೀಡಿರಬಹುದು ಇಲ್ಲವೇ ಅವರೀರ್ವರೂ ಮದುವೆಯಾಗಲು ತೀರ್ಮಾನಿಸಿರಬಹುದು.ಈ ಮಧ್ಯೆ ಆತನ ಮನೆಯವರು ಬೇರೆ ಹುಡುಗಿಯ ಜೊತೆ ರವಿರಾಜ್ ಅವರಿಗೆ ಮದುವೆ ಮಾಡಿಸಲು ತೀರ್ಮಾನಿಸಿದ್ದ ವಿಚಾರ ತಿಳಿದು ಕುಂದಾಪುರದ ಹುಡುಗಿ ಮನೆಯವರು ದಿಬ್ಬಣ ಸಮೇತರಾಗಿ ಬಂದಿರಬಹುದು.ಈ ವಿಚಾರ ತಿಳಿದು ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯವಾಗಿ ಸುದ್ದಿಯಾಗಿದೆ.ಪೊಲೀಸ್ ತನಿಖೆಯಿಂದ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.