ಪುತ್ತೂರು ಯುವವಾಹಿನಿ ಘಟಕದ ಪದಾಧಿಕಾರಿಗಳ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಧ್ಯಕ್ಷ‌ ಅನುಪ್ ಕುಮಾರ್, ಕಾರ್ಯದರ್ಶಿ ಜಯರಾಮ್ ತಂಡದ ಅಧಿಕಾರ ಸ್ವೀಕಾರ

ಪುತ್ತೂರು: ಯುವವಾಹಿನಿ ಪುತ್ತೂರು ಘಟಕದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಪ್ಪಳಿಗೆಯಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಸಾಲ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಯುವವಾಹಿನಿ ಅಧ್ಯಕ್ಷ ಬಾಬು ಪೂಜಾರಿ ಇದ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ ಕುಮಾರ್ ಕೆಡೆಂಜಿ, ಸಾಮಾಜಿಕ ಕಾರ್ಯಕರ್ತರಾದ ಸನತ್ ಅಂಚನ್ ಮತ್ತು ಸಂಪತ್ ಅಂಚನ್ ಭಾಗವಹಿಸಿದ್ದರು.

ವೈಷ್ಣವಿ ಸಾಲ್ಯಾನ್ ಶಾಂತಿಗೋಡು ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಜಯರಾಮ ಕೆ.ಬಿ. ವಂದಿಸಿದರು. ಅವಿನಾಶ್ ಮತ್ತು ಶಮಿತ್ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಪದಾಧಿಕಾರಿಗಳ ಪದಗ್ರಹಣ:
ಯುವವಾಹಿನಿ ಪುತ್ತೂರು ಘಟಕದ 2021-22 ಸಾಲಿನ ನೂತನ ಪಧಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ. ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾವಣಾಸಮಿತಿ ಸದಸ್ಯ ಹರೀಶ್‌ ಶಾಂತಿ ಪುತ್ತೂರು ರವರು ನೂತನ ಪದಾಧಿಕಾರಿಗಳ ವಿವರವನ್ನು ತಿಳಿಸಿದರು.

ಯುವವಾಹಿನಿ ಪುತ್ತೂರು ಘಟಕದ ನೂತನ ಅಧ್ಯಕ್ಷರಾಗಿ ಅನುಪ್ ಕುಮಾರ್ ಎಸ್, ಉಪಾಧ್ಯಕ್ಷರಾಗಿ ಉಮೇಶ್ ಬಾಯಾರು, ಕಾರ್ಯದರ್ಶಿಯಾಗಿ ಜಯರಾಮ ಬಿ. ಎನ್. ಜೊತೆ ಕಾರ್ಯದರ್ಶಿಯಾಗಿ ಪ್ರೀಯಾಶ್ರೀ ಹೆಚ್, ಕೋಶಾಧಿಕಾರಿಯಾಗಿ ಶಮಿತ್ ಪರ್ಪುಂಜ, ಸಂಘಟನಾ ನಿರ್ದೇಶಕರಾಗಿ ತಿಮ್ಮಪ್ಪ ಸುವರ್ಣ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಶಿವಪ್ರಸಾದ್ ಕುಂಬ್ರ, ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾಗಿ ನವ್ಯ ದಾಮೋದರ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಅಣ್ಣಿ ಪೂಜಾರಿ, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರಾಗಿ ಯತೀಶ್ ಬಲ್ನಾಡು, ಸಮಾಜ ಸೇವೆ ನಿರ್ದೇಶಕರಾಗಿ ಶಿವಕುಮಾರ್ ಮರಕ್ಕೂರು, ವಿದ್ಯಾನಿಧಿ ನಿರ್ದೇಶಕರಾಗಿ ಉಮೇಶ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಅವಿನಾಶ್ ಹಾರಾಡಿ, ಮಹಿಳಾ ಸಂಘಟನಾ ನಿರ್ದೇಶಕರಾಗಿ ಆದೀಕ್ಷ ಸಾಲ್ಯಾನ್‌, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಭವಿತ್ ಕೂಡಮರ, ಪ್ರಚಾರ ನಿರ್ದೇಶಕರಾಗಿ ಜಯಶ್ರೀ ಪ್ರಮಾಣ ವಚನ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.