ಉಪ್ಪಿನಂಗಡಿಯಲ್ಲಿ ಸಂಗೀತಾಸಕ್ತರನ್ನು ರಂಜಿಸಿದ “ಗಾನಸಿರಿ ಉಬಾರ ಸ್ವರ ಸಂಗಮ”

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಉಪ್ಪಿನಂಗಡಿ: ತನ್ನ ವಿಭಿನ್ನ ಮತ್ತು ವಿಶಿಷ್ಟ ಶೈಲಿಯ ಸಂಗೀತ ಕಾರ್ಯಕ್ರಮಗಳ ಸಂಘಟನೆಗೆ ಹೆಸರುವಾಸಿಯಾಗಿರುವ ಡಾ.ಕಿರಣ್ ಕುಮಾರ್ ಗಾನಸಿರಿ ನಿರ್ದೇಶನದ ಗಾನಸಿರಿ ಕಲಾ ಕೇಂದ್ರ(ರಿ) ಇದರ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳಿಂದ ಸುಮಧುರ ಸಂಗೀತ ಕಾರ್ಯಕ್ರಮ ಗಾನಸಿರಿ ಉಬಾರ ಸ್ವರ ಸಂಗಮ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಅದ್ದೂರಿಯಾಗಿ ನಡೆಯಿತು.

ಗಾನಸಿರಿ ಉಪ್ಪಿನಂಗಡಿ ಶಾಖೆಯ 40 ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಈ ಮನಮೋಹಕ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರ ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದ ಉಡುಪಿಯ ಅರುಣ್ ರಾಯ್, ದೀಕ್ಷಿತ್ ಕೊಡಂಚ ಮತ್ತು ಪ್ರತಾಪ್ ಬನ್ನಂಜೆ ತಮ್ಮ ತಮ್ಮ ಸಂಗೀತ ಪ್ರೌಢಿಮೆಯಿಂದ ಗಮನಸೆಳೆದರು.

 

ಕಾರ್ಯಕ್ರಮವನ್ನು ಸುಧೀರ್ ಸೌಂಡ್ ಮಾಲಕರಾದ ಸುಧೀರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದ್ದು ವಿಶೇಷವಾಗಿತ್ತು.  ಕಾರ್ಯಕ್ರಮದ ಕೊನೆಯಲ್ಲಿ ಡಾ. ಕಿರಣ್ ಕುಮಾರ್ ಜೊತೆ ಗಾನಸಿರಿಯ ಪ್ರಸಿದ್ಧ ಗಾಯಕಿ ಮತ್ತು ಸಹಶಿಕ್ಷಕಿ ಕುಮಾರಿ  ಲಕ್ಷ್ಮಿ ಎಸ್ ಪುತ್ತೂರು, ವರುಣ್ ಕುಮಾರ್ ಎಸ್ ಪುತ್ತೂರು ಮತ್ತು ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಮಿಂಚಿದ ಗಾನಸಿರಿ ವಿದ್ಯಾರ್ಥಿನಿ ಪ್ರಾಪ್ತಿ ಪಿ ಶೆಟ್ಟಿ ಧರ್ಮಸ್ಥಳ ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮವು ಸಂಗೀತಪ್ರಿಯರಿಗೆ ಮುದ ನೀಡಿತು.  ಸಂಜನಾ ಕಾಮತ್, ಕುಮಾರಿ ವಿದಿಶಾ ಮತ್ತು ಯೋಗೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗಾನ ಸಿರಿಯ ಉಪ್ಪಿನಂಗಡಿ ಶಾಖೆಯು ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ಪ್ರತಿ ಶುಕ್ರವಾರ ಸಾಯಂಕಾಲ 4.30 ರಿಂದ ನಡೆಯುತ್ತಿದೆ. ಕಲಾಸಕ್ತರು 9901555893 ಸಂಖ್ಯೆಯಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ಸಂಪರ್ಕಿಸಬಹುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.