ಚೆನ್ನಾವರ: ಎಸ್‌ವೈಎಸ್, ಎಸ್ಸೆಸ್ಸೆಫ್ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಚೆನ್ನಾವರ ಎಸ್ ವೈಎಸ್ ಎಸ್ಸೆಸ್ಸೆಫ್ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು. ಬೆಳ್ಳಾರೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ದುವಾ ನೆರವೇರಿಸಿ ಮುಖ್ಯ ಪ್ರಭಾಷಣ ನಡೆಸಿದರು.


ಸ್ಥಾಪಕಾಧ್ಯಕ್ಷ ಅಬ್ದುಲ್ ಕರೀಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಿ.ಪಿ ಅಬೂಬಕರ್ ಮದನಿ ಉದ್ಘಾಟಿಸಿ ಮಾತನಾಡಿದರು. ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ಅನುಸ್ಮರಣಾ ಭಾಷಣ ನಡೆಸಿದರು. ಎಸ್ಸೆಸ್ಸೆಫ್ ಸಂಘಟನೆಯ ಸುತ್ತೋಲೆಯಂತೆ `ಮಝ್‌ಬೂತ್-21′ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಿ.ಪಿ ಮುಹಮ್ಮದ್ ಹಾಜಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಕೆಸಿಎಫ್ ಬಹ್ರೈನ್ ಸಫ ಸೆಕ್ಟರ್ ಅಧ್ಯಕ್ಷ ಆಲಿಕುಂಞಿ ಹಾಜಿ, ಎಸ್‌ವೈಎಸ್ ಕುಂಬ್ರ ಸೆಂಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ, ಯೂಸುಫ್ ಹಾಜಿ, ಎಸ್‌ವೈಎಸ್ ಅಧ್ಯಕ್ಷ ಇಸ್ಮಾಯಿಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ, ಅಬ್ದುರ್ರಹ್ಮಾನ್ ಬಿ, ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ನಾಯಕರಾದ ಇಸಾಕ್ ಮಾಡಾವು, ಇರ್ಷಾದ್ ಗಟ್ಟಮನೆ, ರಫೀಕ್ ಪರಾಡ್ ಮೊದಲಾದವರು ಉಪಸ್ಥಿತರಿದ್ದರು. ಎಸ್‌ವೈಎಸ್ ಕಾರ್ಯದರ್ಶಿ ಯಹ್ಯಾ ಮುಸ್ಲಿಯಾರ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಆಸಿಫ್ ಪಿ.ಎಂ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.