ಕುದ್ಮಾರು ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಕಾಣಿಯೂರು: ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಐತಿಹಾಸಿಕ ಹಿನ್ನಲೆ ಹೊಂದಿರುವ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ಗ್ರಾಮದ ಗ್ರಾಮ ದೈವದ ಚಾವಡಿಯಲ್ಲಿ ಶಿರಾಡಿ ರಾಜನ್ ದೈವಗಳ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಸಂಭ್ರಮವು ಅತೀ ಶೀಘ್ರದಲ್ಲಿ ನಡೆಯಲಿದ್ದು, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ, ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಸುಮಾರು 800 ವರ್ಷಗಳ ಇತಿಹಾಸವಿರುವ ಈ ಚಾವಡಿಯಿಂದ ಪ್ರತಿ ವರ್ಷ ಕುದ್ಮಾರು ಗ್ರಾಮದ ಗ್ರಾಮಸ್ಥರ ಕೂಡುವಿಕೆಯಿಂದ ದೈಪಿಲ ದ್ವಾರದ ಬಳಿ ಕಟ್ಟತ್ತಾರು ಕಟ್ಟೆಯಲ್ಲಿ ನೇಮೋತ್ಸವವು ಕೂಡ ನಡೆದುಕೊಂಡು ಬರುತ್ತಿದೆ. ಕುದ್ಮಾರು ಗ್ರಾಮದ ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವವು ಕುದ್ಮಾರು ಗ್ರಾಮದ ಜನತೆಯ ಆರಾಧನೆ ಹಾಗೂ ನಂಬಿಕೊಂಡು ಬಂದಂತಹ ದೈವವಾಗಿದ್ದು, ಬರುವ ಡಿಸೆಂಬರ್ 28, 29ರಂದು ಕ್ಷೇತ್ರದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ದೈವಗಳ ಪುನಃ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಲಿದೆ. ಪ್ರಸ್ತುತ ಅನ್ಯಾಡಿ ಬಾರಿಕೆ ಕುಟುಂಬದ ದೈವಗಳ ಹಾಗೂ ಗ್ರಾಮದ ಶಿರಾಡಿ ರಾಜನ್ ದೈವದ ಚಾವಡಿಯ ಕೆಲಸ, ನಾಗದೇವರ ಕಟ್ಟೆ, ಪಂಜುರ್ಲಿ ಕಟ್ಟೆ, ಗುಳಿಗ ಕಟ್ಟೆ ಹಾಗೂ ಇದರ ಪರಿವಾರ ದೈವಗಳ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.


ನ 27- ಸಮಾಲೋಚನಾ ಸಭೆ: ಕುದ್ಮಾರು ಗ್ರಾಮದ ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವವು ಕುದ್ಮಾರು ಗ್ರಾಮದ ಜನತೆಯ ಆರಾಧನೆ ಹಾಗೂ ನಂಬಿಕೊಂಡು ಬಂದಂತಹ ದೈವವಾಗಿದ್ದು, ಈ ನಿಟ್ಟಿನಲ್ಲಿ ನ. 27ರಂದು ಬೆಳಿಗ್ಗೆ ಗ್ರಾಮ ದೈವದ ಚಾವಡಿ ಅನ್ಯಾಡಿಯಲ್ಲಿ ವಿಶೇಷ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ ಎಂದು ಅನ್ಯಾಡಿ ಬಾರಿಕೆ ಕುಟುಂಬದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.