ಪತ್ನಿಗೆ ಹಲ್ಲೆ ನಡೆಸಿ ಮಗಳ ಸಮೇತ ಅರ್ಧದಾರಿಯಲ್ಲಿ ಬಿಟ್ಟು ಹೋಗಿದ್ದ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಪತ್ನಿಗೆ ಹಲ್ಲೆ ನಡೆಸಿ ಮಗಳೊಂದಿಗೆ ದಾರಿಯಲ್ಲಿ ಬಿಟ್ಟು ಮಗನೊಂದಿಗೆ ಹೋಗಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

ಸಿರಿಬಾಗಿಲು ಗ್ರಾಮದ ನೀರಾಯ ನಾರಾಯಣ ಗೌಡರ ಪತ್ನಿ ಜಯಪ್ರಿಯ ಅವರು ಈ ಕುರಿತು ಪತಿಯ ವಿರುದ್ಧ ದೂರು ನೀಡಿದ್ದರು.2012ರ ಮಾರ್ಚ್ 25ರಂದು ಜಯಪ್ರಿಯ ಅವರ ವಿವಾಹವು ಸಿರಿಬಾಗಿಲು ದೊರಣೆ ನಾಗಪ್ಪ ಗೌಡರ ಮಗ ನಾರಾಯಣ ಗೌಡ ಎಂಬವರೊಂದಿಗೆ ನಡೆದಿತ್ತು.ಆ ಬಳಿಕ ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಜನನವಾಗಿತ್ತು.ಈ ಪೈಕಿ ಮಗ ಬುದ್ಧಿ ಮಾಂದ್ಯನಾಗಿದ್ದು ಮದುವೆಯಾದ ಬಳಿಕ ಪತಿ ನಾರಾಯಣ ಗೌಡರು ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆ ಹಾಗೂ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿ ತಿಳುವಳಿಕೆ ನೀಡಿದ್ದರೂ ಸರಿಯಾಗಿರಲಿಲ್ಲ.ಕಳೆದ ಅ.27ರಂದು ತಾನು ಮಕ್ಕಳು ಹಾಗೂ ಗಂಡನೊಂದಿಗೆ ಒಮ್ನಿ ಕಾರಲ್ಲಿ ನೆಲ್ಯಾಡಿಗೆ ಬಂದು ವೈದ್ಯರಲ್ಲಿ ಮಕ್ಕಳಿಗೆ ಔಷಧಿ ಪಡೆದುಕೊಂಡು ಹೋಗುತ್ತಿದ್ದ ಸಂದರ್ಭ ಸಿರಿಬಾಗಿಲು ಗ್ರಾಮದ ಪಿಲಿಚ್ಚಾರು ಎಂಬಲ್ಲಿಗೆ ತಲುಪಿದಾಗ, ಮನೆಗೆ ದಿನಸಿ ಸಾಮಾಗ್ರಿ ಹಾಗೂ ಕೋಳಿ ಮಾಂಸ ತೆಗೆದುಕೊಳ್ಳುವ ವಿಚಾರದಲ್ಲಿ ಪತಿ ನಾರಾಯಣ ಗೌಡರು ತಗಾದೆ ತೆಗೆದು ತನ್ನನ್ನು ಅವಾಚ್ಯವಾಗಿ ಬೈದು, ಕೈಯಿಂದ ಕೆನ್ನೆಗೆ ಹಲ್ಲೆ ನಡೆಸಿ ನನ್ನನ್ನು ಹಾಗೂ ಮಗಳನ್ನು ಅಲ್ಲಿಯೇ ಬಿಟ್ಟು ಮಗನ ಜೊತೆ ಕಾರಲ್ಲಿ ಹೋಗಿದ್ದರು ಎಂದು ಆರೋಪಿಸಿ ಜಯಪ್ರಿಯ ಅವರು ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಇದೀಗ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ,ಹೇಮಲತಾ ಶೆಟ್ಟಿ, ಕು.ಹರ್ಷಿತಾ ವಾದಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.