ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ಕರಾವಳಿ ಸಮ್ಮಿಲನ ಬಳಗದಿಂದ ಕವಿಗೋಷ್ಠಿ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು  ಹಾಗೂ ಕನ್ನಡ ಕರಾವಳಿ ಸಮ್ಮಿಲನ ಬಳಗ ಇದರ ಜಂಟಿ ಆಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮ ನ. 22ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬೆಟ್ಟಂಪಾಡಿ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ವಹಿಸಿದ್ದರು.  ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಉದ್ಘಾಟಿಸಿದರು.  ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಯಿತ್ರಿ, ಜನಮಿಡಿತ ಪತ್ರಿಕೆಯ ಹಾಸನ ಜಿಲ್ಲೆಯ ಪ್ರತಿನಿಧಿ ರೇಷ್ಮಾ ಶೆಟ್ಟಿ ಗೊರೂರು ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ ಸುದ್ದಿಬಿಡುಗಡೆ ಪತ್ರಿಕೆಯ ಪ್ರತಿಭಾರಂಗ ಅಂಕಣದ ನಿರ್ವಾಹಕ ನಾರಾಯಣ ರೈ ಕುಕ್ಕುವಳ್ಳಿ, ಪುತ್ತೂರು ವಿವೇಕಾನಂದ ಪದವಿ ಕಾಲೇಜು  ಲ್ಯಾಬ್ ಸಹಾಯಕ ನಾರಾಯಣ ಕುಂಬ್ರ, ಮಂಗಳೂರು  ನವ ಪರ್ವ ಫೌಂಡೇಶನ್  ಘಟಕದ ಉಪಾಧ್ಯಕ್ಷೆ ಮಾನಸ ಪ್ರವೀಣ್ ಭಟ್, ಪೆರಡಾಲ  ನವಜೀವನ ಪ್ರೌಢಶಾಲೆ  ಶಿಕ್ಷಕಿ ಜ್ಯೋತ್ಸ್ನಾ ಎನ್. ಕಡಂದೇಲು, ಕನ್ನಡ ಕರಾವಳಿ ಸಮ್ಮಿಲನ ಬಳಗದ ಸಂಸ್ಥಾಪಕ ಚಂದ್ರಮೌಳಿ ಕಡಂದೇಳು, ಅಧ್ಯಕ್ಷ ಅಖಿಲಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಮಿಕ್ಕಿ  ಕವಿಗಳು ಸ್ವ-ರಚಿತ ಕವನ ವಾಚಿಸಿದರು.   ಅನುಪಮಾ ಮತ್ತು ತಂಡ ಪ್ರಾರ್ಥಿಸಿದರು. ಸಾರ್ಥಕ್ ರೈ ಹಾಗೂ ಸಜಿತ್ ಕೊಪ್ಪಳ ಕಾರ್ಯಕ್ರಮವನ್ನು  ನಿರೂಪಿಸಿದರು. ಕನ್ನಡ ಕರಾವಳಿ ಸಮ್ಮಿಲನ ಬಳಗದ ಸದಸ್ಯೆ ಸೌಮ್ಯಶ್ರೀ ಪಿಲಿಕೂಡ್ಲು ಸ್ವಾಗತಿಸಿ, ಸಂತೋಷ್ ಕುಮಾರ್ ವಂದಿಸಿದರು.  ರಾಷ್ಟ್ರೀಯ ಸ್ವಯಂ ಸೇವಕ ಘಟಕದ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.