ಮರ್ದಾಳ :ಬೈಕ್ ಅಪಘಾತದ ಆರೋಪಿಯನ್ನು ಖುಲಾಸೆಗೊಳಿಸಿ ಪುತ್ತೂರು ನ್ಯಾಯಾಲಯದಿಂದ ಆದೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 9ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು

ಕಡಬ : 2012ರಲ್ಲಿ ಕಡಬ ತಾಲ್ಲೂಕಿನ ಮರ್ದಾಳದ ಬಂಟ್ರದಲ್ಲಿ ನಡೆದ ರಸ್ತೆ ಅಪಘಾತದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಮಾನ್ಯ ಪುತ್ತೂರು ಜೆಎಂಎಫ್ ಸಿ ನ್ಯಾಯಾಲಯವು ಇಂದು ವ್ಯಕ್ತಿಯೋರ್ವನನ್ನು ದೋಷಮುಕ್ತಗೊಳಿಸಿ ಆದೇಶವನ್ನು ಹೊರಡಿಸಿದೆ. ಅಪಘಾತದ ಪ್ರಮುಖ ಆರೋಪಿಯಾಗಿದ್ದ ವಿನಿಲ್ ಎಂಬಾತನನ್ನು ನ್ಯಾಯಾಲಯವು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಘಟನೆಯ ಹಿನ್ನಲೆ : ಪ್ರಕರಣದ ಆರೋಪಿಯಾಗಿದ್ದ ವಿನಿಲ್ ಸಬಾಸ್ಟಿನ್ ಎಂಬಾತ 20/12/2012 ರಂದು ರಾತ್ರಿ 10 ಗಂಟೆ ಸುಮಾರಿಗೆ ಕಡಬದಿಂದ ನೆಟ್ಟಣಕ್ಕೆ ಬೈಕಿನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ, ನೆಟ್ಟಣದಿಂದ ಕಡಬಕ್ಕೆ ಬರುತ್ತಿದ್ದ ಇನ್ನೊಂದು ಬೈಕ್ ಗೆ ಮರ್ದಾಳದ ಬಂಟರ ಸಮೀಪ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಅಪಘಾತದ ತೀವ್ರತೆಗೆ ಮತ್ತೊಂದು ಬೈಕ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕನಾದ ಕೋಡಿಂಬಾಳ ನಿವಾಸಿ ಅಬ್ದುಲ್ ರಹೀಂ ಎಂಬಾತ ಮೃತಪಟ್ಟಿದ್ದಾರು. ಅಪಘಾತದಲ್ಲಿ ಎರಡೂ ಬೈಕ್ ಸವಾರರು ಗಾಯಗೊಂಡಿದ್ದರು,ಇದರಲ್ಲಿ ಅಬ್ದುಲ್ ರಹೀಮ್ ಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಕೂಡಲೇ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 2 ದಿನಗಳ ನಂತರ ರಹೀಮ್ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಅಂದು ಪ್ರಕರಣವನ್ನು ದಾಖಲಿಸಿಕೊಂಡ ಕಡಬ ಪೊಲೀಸರು, ಆರೋಪಿ ವಿನಿಲ್ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ತದನಂತರ ಸಾಕ್ಷಿಗಳನ್ನು ವಿಸ್ತರಿಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ವಿನಿಲ್ ನಿರಪರಾಧಿ ಎಂದು ಆದೇಶವನ್ನು ನೀಡಿದೆ. ಆರೋಪಿಯ ಪರವಾಗಿ ಉಪ್ಪಿನಂಗಡಿಯ ಖ್ಯಾತ ನ್ಯಾಯವಾದಿಗಳಾದ ಸಂತೋಷ್ ಕುಮಾರ್ ಉಪ್ಪಿನಂಗಡಿ, ಹೇಮಲತಾ ಶೆಟ್ಟಿ, ಕುಮಾರಿ ಹರ್ಷಿತಾ ವಾದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.